ಭಾರತದಲ್ಲಿ ವೇಗವಾಗಿ ಹಬ್ಬುತ್ತಿದೆ ಮಾದಕ ಪಿಡುಗು
Team Udayavani, Mar 26, 2018, 10:25 AM IST
ದೇಶದ ಯುವಜನರನ್ನು ದುಶ್ಚಟಗಳ ದಾಸ್ಯಕ್ಕೆ ದೂಡಿ, ದೇಶದ ಭವಿಷ್ಯವನ್ನು ಮಬ್ಟಾಗಿಸುವ ಕುತಂತ್ರವೊಂದು ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ವರ್ಷಗಳಿಂದ ದೇಶದಲ್ಲಿ ಮಾದಕ ವಸ್ತುಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) 2017ರಲ್ಲಿ ದೇಶದ ವಿವಿಧೆಡೆ 3.6 ಲಕ್ಷ ಕೋಟಿ ಕೆಜಿಯಷ್ಟು ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017ರಲ್ಲಿ ವಶಪಡಿಸಿಕೊಳ್ಳಲಾಗಿರುವ ಮಾದಕ ವಸ್ತುಗಳ ಪ್ರಮಾಣ ಶೇ. 300ರಷ್ಟು ಹೆಚ್ಚು ಎಂದು ಎನ್‌ಸಿಬಿ ಹೇಳಿರುವುದು ಕಳವಳಕಾರಿ ವಿಚಾರ.
3.6 : ಲಕ್ಷ ಕೆ.ಜಿ. – 2017ರಲ್ಲಿ ವಶಪಡಿಸಿಕೊಳ್ಳಲಾಗಿರುವ ಒಟ್ಟು ಮಾದಕ ವಸ್ತುಗಳ ಪ್ರಮಾಣ
300% : ಹಿಂದಿನ ವರ್ಷಗಳಿಗೆ ಹೋಲಿಸಿದರೆ 2017ರಲ್ಲಿ ಆಗಿರುವ ಜಪ್ತಿಯ ಪ್ರಮಾಣದ ಹೆಚ್ಚಳ
ಯಾವ ರಾಜ್ಯ ಯಾವುದರಲ್ಲಿ ಮುಂದು?
ಆಫೀಮು
ಪಂಜಾಬ್ : 505.86 ಕೆ.ಜಿ.
ರಾಜಸ್ಥಾನ : 426.95 ಕೆ.ಜಿ.
ಹೆರಾಯಿನ್
ಗುಜರಾತ್ : 1,017 ಕೆ.ಜಿ.
ಪಂಜಾಬ್ : 406 ಕೆ.ಜಿ.
ಗಾಂಜಾ
ಆಂಧ್ರಪ್ರದೇಶ : 78,767 ಕೆ.ಜಿ.
ಒಡಿಶಾ : 55,875 ಕೆ.ಜಿ.
ಚರಸ್
ಉತ್ತರ ಪ್ರದೇಶ : 702 ಕೆ.ಜಿ.
ಮಧ್ಯಪ್ರದೇಶ : 625 ಕೆ.ಜಿ.
ಕೊಕೇನ್
ದಿಲ್ಲಿ : 30 ಕೆ.ಜಿ.
ಮಹಾರಾಷ್ಟ್ರ : 21.83 ಕೆ.ಜಿ.
ಯಾವ್ಯಾವ ಡ್ರಗ್, ಎಷ್ಟೆಷ್ಟು ಜಪ್ತಿ ?
ಆಫೀಮು : 2,552 ಕೆಜಿ
ಹೆರಾಯಿನ್ : 2,146 ಕೆಜಿ
ಗಾಂಜಾ : 3,52,379 ಕೆಜಿ
ಹಾಶಿಶ್ : 3,218 ಕೆಜಿ
ಕೊಕೇನ್ : 69 ಕೆಜಿ
ಕಳೆದೈದು ವರ್ಷಗಳಲ್ಲಿನ ಜಪ್ತಿ ವಿವರ
2017 : 3.60 ಲಕ್ಷ ಕೆಜಿ
2016 : 3.01 ಲಕ್ಷ ಕೆಜಿ
2015 : 1 ಲಕ್ಷ ಕೆಜಿ
2014 : 1 ಲಕ್ಷ ಕೆಜಿ
2013 : 1 ಲಕ್ಷ ಕೆಜಿ
ಸಚಿವರೇನಂತಾರೆ?
ನಾನಾ ರಾಜ್ಯಗಳಲ್ಲಿ ವಶಕ್ಕೆ ಪಡೆಯಲಾಗಿರುವ ಡ್ರಗ್ಸ್‌ಗಳ ವಿವರಗಳನ್ನು ಕೇಂದ್ರೀಕರಿಸುವ ಮೂಲಕ ದೇಶದಲ್ಲಿ ಮಾದಕ ವಸ್ತು ಜಾಲದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.
— ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.