ಸ್ಯಾನಿಟರಿ ನ್ಯಾಪ್ಕಿನ್ ನಲ್ಲಿ ಡ್ರಗ್ಸ್! ಕುತೂಹಲ ವಿಚಾರ ಹೊರಹಾಕಿದ ಎನ್‌ಸಿಬಿ
ಮುಂಬೈ ಡ್ರಗ್ಸ್ ಕೇಸ್
Team Udayavani, Oct 10, 2021, 10:45 PM IST
ಮುಂಬೈ: ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಭಾಗಿಯಾಗಿದ್ದಾರೆನ್ನಲಾದ ಮಾದಕ ವಸ್ತುಗಳ ಪಾರ್ಟಿ ಪ್ರಕರಣದ ಹಲವಾರು ಕುತೂಹಲಕಾರಿ ವಿಚಾರಗಳನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‌ಸಿಬಿ) ಹೊರಹಾಕಿದೆ.
ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ವಿಲಾಸಿ ನೌಕೆಯಲ್ಲಿ ನಡೆಯುತ್ತಿದ್ದ ಆ ಪಾರ್ಟಿಯ ಮೇಲೆ ದಾಳಿ ನಡೆದಿದ್ದಾಗ ಡ್ರಗ್ಸ್‌ಗಳನ್ನು ಸ್ಯಾನಿಟರಿ ನ್ಯಾಪ್ಕಿನ್ ಗಳಲ್ಲಿ, ಸಾಕ್ಸ್‌ಗಳಲ್ಲಿ ಅಡಗಿಸಿ ಇರಿಸುವ ಪ್ರಯತ್ನ ನಡೆಸಲಾಗಿತ್ತು. ಆರೋಪಿಯಾಗಿರುವ ಮಹಿಳೆಯೊಬ್ಬರು, ತಮ್ಮೊಂದಿಗೆ ತಂದಿದ್ದ ಸ್ಯಾನಿಟರಿ ನ್ಯಾಪ್ಕಿನ್ ನಲ್ಲಿ ಡ್ರಗ್ಸ್ ಇರಿಸಿಕೊಂಡು ಬಂದಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಯನ್ ಜೊತೆಗೆ ಆರೋಪಿಯಾಗಿರುವ ಅರ್ಬಾಜ್ ಮರ್ಚೆಂಟ್, ಸೆಕ್ಯುರಿಟಿ ಚೆಕ್ ವೇಳೆ, ಡ್ರಗ್ಸ್‌ಗಳನ್ನು ತನ್ನ ಶೂ ಸಾಕ್ಸ್‌ನಲ್ಲಿ ಹಾಗೂ ಶೂಗಳಲ್ಲಿ ಅಡಗಿಸಿಟ್ಟಿದ್ದ.
ಇದನ್ನೂ ಓದಿ:ಅ.17ರ ಯುಜಿಸಿ ನೆಟ್ ಪರೀಕ್ಷೆ ಮುಂದೂಡಿಕೆ
ವಿವಿಧೆಡೆ ಎನ್‌ಸಿಬಿ ದಾಳಿ
ಇತ್ತೀಚೆಗೆ, ಮುಂದ್ರಾ ಬಂದರಿನಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ, ಚೆನ್ನೈ, ಕೊಯಮತ್ತೂರು, ವಿಜಯವಾಡ ಹಾಗೂ ಇನ್ನಿತರ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಈ ಸಂದರ್ಭದಲ್ಲಿ ಮಹತ್ವದ ದಾಖಲೆಗಳು ಲಭ್ಯವಾಗಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.