![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Apr 7, 2021, 1:35 PM IST
ಉತ್ತರ ಪ್ರದೇಶ : ಹೋಳಿ ಹುಣ್ಣಿಮೆ ಅಂದ್ರೇ ಹಾಗೆ, ಬಣ್ಣ ಹಚ್ಚಿಕೊಂಡು, ಜೋರು ಸದ್ದು ಮಾಡಿಕೊಂಡು ಊರಿನ ಮಂದಿ ಜೊತೆ, ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತ ಸಂಭ್ರಮಾಚರಣೆ ಇರುತ್ತದೆ. ಆದ್ರೆ ಈ ಬಾರಿ ಕೋವಿಡ್ ಸೋಂಕಿನ ಹಾವಳಿ ಇರುವುದರಿಂದ ಸ್ವಲ್ಪ ಮಟ್ಟಿಗೆ ಹಬ್ಬದ ಆಚರಣೆಗೆ ಬ್ರೇಕ್ ಬಿದ್ದಿದೆ. ಆದ್ರೆ ಉತ್ತರ ಪ್ರದೇಶದ ಇಬ್ಬರು ಕುಡುಕರಿಗೆ ಮಾತ್ರ ಈ ಹೋಳಿ ಹಬ್ಬ ಸಖತ್ ಖುಷಿ ಕೊಟ್ಟಿದ್ದು, ಎಲ್ಲವನ್ನೂ ಮರೆತು ನಾಗಿಣಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಘರ್ ಎಂಬ ಪ್ರದೇಶದಲ್ಲಿ ಇಬ್ಬರು ಕುಡುಕರು ಮದ್ಯದ ಅಮಲಿನಲ್ಲಿ 50 ಅಡಿ ಎತ್ತರವಿರುವ ನೀರಿನ ಟ್ಯಾಂಕ್ ಮೇಲೆ ಏರಿ ಅಲ್ಲಿ ನಾಗಿಣಿ ಹಾಡಿಗೆ ನೃತ್ಯ ಮಾಡಿದ್ದಾರೆ. ಹೋಳಿ ಹಬ್ಬದ ದಿನವೇ ಡ್ಯಾನ್ಸ್ ಮಾಡಿದ್ದು, ಮೈತುಂಬಾ ಬಣ್ಣ ಹಚ್ಚಿಕೊಂಡು, ಹಾವಿನ ರೀತಿ ನಾಲಿಗೆ ಹೊರ ಹಾಕುತ್ತ ಎಂಜಾಯ್ ಮಾಡಿದ್ದಾರೆ. ಇವರ ಹಾಸ್ಯಮಯ ನೃತ್ಯ ನೋಡಲು ಸುತ್ತಲೂ ಹಲವು ಮಂದಿ ನೆರಿದಿದ್ದರು.
Nagin dance on Holi pic.twitter.com/GCLglODjYA
— jp singh (@jpsingh24215501) March 8, 2018
ಒಂದು ಕುತೂಹಲಭರಿತ ಅಂಶ ಏನಂದ್ರೆ ಕಂಠಪೂರ್ತಿ ಕುಡಿದ ಇವರಿಗೆ ನಿಲ್ಲಲೂ ತ್ರಾಣವಿಲ್ಲ. ಆದ್ರೆ 50 ಅಡಿ ಮೇಲೇರಿ ನೀರಿನ ಟ್ಯಾಂಕ್ ಮೇಲೆ ಹೇಗೆ ಹೋದರು ಎಂದು. ನಂತರ ಈ ವಿಚಾರ ಸ್ಥಳೀಯ ಪೊಲೀಸರಿಗೆ ತಿಳಿದು ಅವರನ್ನು ಜೋಪಾನವಾಗಿ ಕೆಳಗೆ ಇಳಿಸಿದ್ದಾರೆ. ಅಲ್ಲದೆ ಅವರ ಮೇಲೆ ಕ್ರಮವನ್ನೂ ಜರುಗಿಸಲಾಗಿದೆ ಎಂದು ವರದಿಯಾಗಿದೆ.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.