ದುರ್ಗಾ ವಿಸರ್ಜನೆ ನಡೆಸದೇ ದೀದಿಯ ಗೆಲ್ಲಿಸಿದ ಜನತೆ
Team Udayavani, Oct 2, 2017, 6:55 AM IST
ಕೋಲ್ಕತಾ: ಮೊಹರಂ ಹಬ್ಬದ ದಿನ ದುರ್ಗಾ ವಿಗ್ರಹ ವಿಸರ್ಜನೆಯನ್ನು ನಿಷೇಧಿಸಿ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕಲ್ಕತ್ತಾ ಹೈಕೋರ್ಟ್ ತಡೆ ತಂದಿದ್ದರೂ ಈ ವಿಚಾರದಲ್ಲಿ ದೀದಿಯೇ ಗೆದ್ದಿದ್ದಾರೆ. ಅಂದ ಹಾಗೆ, ಮಮತಾ ಅವರ ಗೆಲುವಿಗೆ ಕಾರಣವಾಗಿದ್ದು ಬೇರಾರೂ ಅಲ್ಲ, ಆ ರಾಜ್ಯದ ದುರ್ಗಾ ಪೂಜೆ ಸಮಿತಿಗಳೇ ಎಂಬುದು ವಿಶೇಷ.
ಹೌದು, ನ್ಯಾಯಾಲಯವು ದುರ್ಗಾ ವಿಗ್ರಹ ವಿಸರ್ಜನೆಗೆ ಹೇರಿದ್ದ ನಿಷೇಧವನ್ನು ತೆರವುಗೊಳಿ ಸಿದ್ದರೂ, ಮೊಹರಂ ದಿನ ದುರ್ಗೆಯನ್ನು ವಿಸರ್ಜಿಸದೇ ಇರುವ ಮೂಲಕ ಪಶ್ಚಿಮ ಬಂಗಾಲದ ದುರ್ಗಾ ಪೂಜಾ ಸಮಿತಿಗಳು ಸಿಎಂ ಮಮತಾಗೆ ಗೌರವ ಸಲ್ಲಿಸಿವೆ. ಕೋಲ್ಕತಾದಲ್ಲಿರುವ 25 ಸಾವಿರ ಸಮಿತಿಗಳ ಪೈಕಿ ಒಂದೇ ಒಂದು ಸಮಿತಿಯೂ ರವಿವಾರ ದುರ್ಗಾ ವಿಗ್ರಹ ವಿಸರ್ಜನೆಗೆ ಅನುಮತಿಬೇಕೆಂದು ಸ್ಥಳೀಯಾ ಡಳಿತವನ್ನು ಕೋರಲಿಲ್ಲ. ಬದಲಿಗೆ, ರವಿವಾರ ವಿಗ್ರಹ ವಿಸರ್ಜನೆ ಮಾಡದೇ ಇರುವ ಮೂಲಕ ದೀದಿಯ ನಿರ್ಧಾರಕ್ಕೆ ಬದ್ಧ ಎಂಬುದನ್ನು ತೋರಿಸಿಕೊಟ್ಟಿದೆ. ಸೆ. 21ರಂದು ಮಮತಾ ಸರಕಾರದ ವಿರುದ್ಧ ಹರಿಹಾಯ್ದಿದ್ದ ಹೈಕೋರ್ಟ್, ನಿಷೇಧ ವಾಪಸ್ ಪಡೆದು ದುರ್ಗಾ ವಿಸರ್ಜನೆಗೆ ಅವಕಾಶ ಕಲ್ಪಿಸಿಕೊಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
MUST WATCH
ಹೊಸ ಸೇರ್ಪಡೆ
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.