![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Nov 7, 2019, 9:02 PM IST
ಹಬ್ಬದ ಸೀಸನ್ ಬಂತೆದರೆ ಮಳಿಗೆಗಳಲ್ಲಿ ಆಕರ್ಷಕ ಡಿಸ್ಕೌಂಟ್‌ನ ಫಲಕಗಳು ರಾರಾಜಿಸುತ್ತಾ ಇರುತ್ತವೆ ಆದರೆ ಈ ಬಾರಿ ಗ್ರಾಹಕರ ಅಪೇಕ್ಷೆಗೂ ಮೀರಿ ಆಫರ್ ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆದಿಲ್ಲ ಎಂದು ವರದಿಯೊಂದು ತಿಳಿಸಿದೆ.
ನೀರಸ ಪ್ರತಿಕ್ರಿಯೆ
ದೀಪಾವಳಿ ಎಂದಾಕ್ಷಣ ಮಾರುಕಟ್ಟೆ ಸುತ್ತಾಟ, ಖರೀದಿ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ ಅಧಿಕ ಮಟ್ಟದಲ್ಲಿ ಗ್ರಾಹಕರನ್ನು ಎದುರು ನೋಡುತ್ತಿದ್ದ ವ್ಯಾಪಾರಿಗಳಿಗೆ ನಿರಾಸೆಯಾಗಿದ್ದು, ಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ವರದಿ ಹೇಳಿದೆ.
120 ಮಳಿಗೆಗಳು
ಒಟ್ಟು 120 ಚಿಲ್ಲರೆ ಅಂಗಡಿ ಮುಂಗಟ್ಟುಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ಶೇ.90 ರಷ್ಟು ವ್ಯಾಪಾರಿಗಳು ಕಳೆದ ವರ್ಷದ ಆದಾಯಕ್ಕಿಂತ, ಈ ವರ್ಷದ ಆದಾಯದ ಮಟ್ಟ ಕಡಿಮೆ ಇದೆ ಎಂದು ಹೇಳಿದ್ದಾರೆ.
ಬೇಡಿಕೆ ಕ್ಷೀಣಿಸುತ್ತಿದೆ
ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಕಂಡುಬರುತ್ತಿದ್ದು, ಬೇಡಿಕೆ ಕ್ಷೀಣಿಸುತ್ತಿದೆ ಎಂದು ಆರ್ಥಿಕ ವಿಶ್ಲೇಷಕರು ಹೇಳಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಉತ್ಪಾದನೆ ಮತ್ತು ಸೇವೆಗಳ ಚಟುವಟಿಕೆ ಕಡಿತವಾಗಿದೆ ಎಂದು ವರದಿ ತಿಳಿಸಿದೆ.
ವರ್ಷದಿಂದ ವರ್ಷಕ್ಕೆ ಆದಾಯ ಕಡಿಮೆ
ಸುಮಾರು ಶೇ.70 ರಷ್ಟು ಚಿಲ್ಲರೆ ವ್ಯಾಪಾರಿಗಳು ವರ್ಷದಿಂದ ವರ್ಷಕ್ಕೆ ಆದಾಯ ಕಡಿಮೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದು, ಶೇ.30 ರಷ್ಟು ತೃಪ್ತಿದಾಯಕ ಎಂದು ಹೇಳಿದ್ದಾರೆ.
ಆನ್‌ಲೈನ್ ಶಾಪಿಂಗ್ ಮಾರಕ
ಹೆಚ್ಚುತ್ತಿರುವ ಆನ್‌ಲೈನ್ ಶಾಪಿಂಗ್ ಚಿಲ್ಲರೆ ವ್ಯಾಪಾರಿ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು, ಜನರು ದೊಡ್ಡ ದೊಡ್ಡ ಮಾಲ್ ಹಾಗೂ ಬ್ರಾಂಡೆಡ್ ಮಳಿಗೆಗಳ ಮೊರೆ ಹೋಗುತ್ತಿದ್ದಾರೆ ಎಂದು ವರದಿ ಹೇಳಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.