ಕೈಸೇರಲಿದೆ ಇ-ಪಾಸ್‌ಪೋರ್ಟ್
Team Udayavani, Aug 14, 2020, 6:17 AM IST
ಹೊಸದಿಲ್ಲಿ: ಎಲೆಕ್ಟ್ರಾನಿಕ್ ಮೈಕ್ರೋಚಿಪ್ ಹೊಂದಿರುವ ಇ-ಪಾಸ್‌ಪೋರ್ಟ್ ವಿತರಣೆಯನ್ನು ಕೇಂದ್ರ ಸರಕಾರ ಆರಂಭಿಸಿದ್ದು, ಈಗಾಗಲೇ ಪ್ರಾಯೋಗಿಕವಾಗಿ 20 ಸಾವಿರ ಅಧಿಕೃತ ಮತ್ತು ರಾಜತಾಂತ್ರಿಕ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸಿದೆ. ಈ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಐಟಿ ಮೂಲಸೌಕರ್ಯವನ್ನು ನಿರ್ಮಿಸಿಕೊಡುವ ಏಜೆನ್ಸಿಗಾಗಿ ಸರಕಾರ ಹುಡುಕಾಟ ಆರಂಭಿಸಿದೆ.
ಏಜೆನ್ಸಿಯ ಕೆಲಸವೇನು?
ಇ-ಪಾಸ್‌ಪೋರ್ಟ್‌ಗಾಗಿ ನಿರ್ದಿಷ್ಟ ಘಟಕ ಸ್ಥಾಪಿಸುವ ಕೆಲಸವನ್ನು ಏಜೆನ್ಸಿ ಮಾಡಲಿದೆ. ಜತೆಗೆ, ತಾಸಿಗೆ 10ರಿಂದ 20 ಸಾವಿರ ಇ-ಪಾಸ್‌ಪೋರ್ಟ್ ಸಿದ್ಧಪಡಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಲಿದೆ. ಈ ಜವಾಬ್ದಾರಿಯ ನಿರ್ವಹಣೆಗಾಗಿ ದಿಲ್ಲಿ ಮತ್ತು ಚೆನ್ನೈಗಳಲ್ಲಿ ಐಟಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಏನು ಲಾಭ?
ಈವರೆಗೆ ನಾಗರಿಕರ ಪಾಸ್‌ಪೋರ್ಟ್‌ಗಳು ಪುಸ್ತಿಕೆ ರೂಪದಲ್ಲಿ ಇರುತ್ತಿದ್ದವು. ಇನ್ನು ಮುಂದೆ ಮೈಕ್ರೋಚಿಪ್ ಆಧರಿತ ಇ-ಪಾಸ್‌ಪೋರ್ಟ್‌ಗಳು ನಾಗರಿಕರ ಕೈಸೇರಲಿವೆ. ಇವುಗಳನ್ನು ನಕಲಿ ಮಾಡಲು ಸಾಧ್ಯವಿಲ್ಲ. ಜತೆಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಇಮಿಗ್ರೇಷನ್ ಪ್ರಕ್ರಿಯೆಯನ್ನು ಕ್ಷಿಪ್ರವಾಗಿ ಮುಗಿಸಲು ಸಾಧ್ಯವಾಗುತ್ತದೆ. ಸರಕಾರ ಸದ್ಯಕ್ಕೆ ತಾಸಿಗೆ 10 ಸಾವಿರದಂತೆ ದಿನಕ್ಕೆ 50 ಸಾವಿರ ಇ-ಪಾಸ್‌ಪೋರ್ಟ್ ಸಿದ್ಧಪಡಿಸುವ ಗುರಿ ಹಾಕಿಕೊಂಡಿದೆ. ಭವಿಷ್ಯದಲ್ಲಿ ತಾಸಿಗೆ 20 ಸಾವಿರದಂತೆ ದಿನಕ್ಕೆ 1 ಲಕ್ಷ ಇ-ಪಾಸ್‌ಪೋರ್ಟ್‌ಗಳನ್ನು ವಿತರಿಸುವ ಚಿಂತನೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.