ಹಿಂದೆ ಆರೆಸ್ಸೆಸ್‌ ಆಸರೆ ಬೇಕಿತ್ತು ಈಗ ಬಿಜೆಪಿ ಸಶಕ್ತ, ಸದೃಢ: ನಡ್ಡಾ

ಈಗ ಪಕ್ಷಕ್ಕಿದೆ ತಾನಾಗಿ ಮುನ್ನಡೆಯುವ ಸಾಮರ್ಥ್ಯ: ಬಿಜೆಪಿ ಅಧ್ಯಕ್ಷ

Team Udayavani, May 19, 2024, 1:07 AM IST

ಹಿಂದೆ ಆರೆಸ್ಸೆಸ್‌ ಆಸರೆ ಬೇಕಿತ್ತು ಈಗ ಬಿಜೆಪಿ ಸಶಕ್ತ, ಸದೃಢ: ನಡ್ಡಾ

ಹೊಸದಿಲ್ಲಿ: ಭಾರತೀಯ ಜನತಾ ಪಾರ್ಟಿ ಈಗ ಬೆಳೆದಿದೆ, ಸದೃಢ ವಾಗಿದೆ. ಹಾಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್‌)ದ ಆಸರೆಯ ಅಗತ್ಯ ಈಗ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

“ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಮಯಕ್ಕೂ ಈಗಿನ ಸಮಯಕ್ಕೂ ಆರೆಸ್ಸೆಸ್‌ನ ಉಪಸ್ಥಿತಿಯಲ್ಲಿ ವ್ಯತ್ಯಾಸ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ಆರಂಭದಲ್ಲಿ ನಾವು ಸಮರ್ಥರಾಗಿರಲಿಲ್ಲ. ಚಿಕ್ಕ ಪಕ್ಷವಾಗಿದ್ದೆವು. ಹಾಗಾಗಿ ಆರೆಸ್ಸೆಸ್‌ನ ಅಗತ್ಯ ಇತ್ತು. ಆದರೆ ಈಗ ನಾವು ಬೆಳೆದಿದ್ದೇವೆ. ನಮಗೆ ನಮ್ಮದೇ ಆದ ಸಾಮರ್ಥ್ಯ ಬಂದಿದೆ. ಬಿಜೆಪಿ ಈಗ ತನ್ನಷ್ಟಕ್ಕೆ ತಾನೇ ಮುನ್ನಡೆಯು ತ್ತಿದೆ ಎಂದು ಹೇಳಿದ್ದಾರೆ.

ಈಗ ಆರೆಸ್ಸೆಸ್‌ನ ಬೆಂಬಲ ಬಿಜೆಪಿಗೆ ಅಗತ್ಯ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ಪಕ್ಷ ಬೆಳೆದಿದೆ. ಎಲ್ಲರಿಗೂ ಅವರ ಪಾತ್ರ ಮತ್ತು ಕರ್ತವ್ಯ ಏನು ಎಂಬುದು ಗೊತ್ತು. ಆರೆಸ್ಸೆಸ್‌ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಯಾಗಿದೆ. ನಮ್ಮದು ರಾಜಕೀಯ ಸಂಘಟನೆ. ಹಾಗಾಗಿ ಆರೆಸ್ಸೆಸ್‌ನ ಅಗತ್ಯದ ಪ್ರಶ್ನೆಯೇ ಬರುವುದಿಲ್ಲ. ಅದು ಸೈದ್ಧಾಂತಿಕ ವೇದಿಕೆಯಾಗಿದೆ. ಸೈದ್ಧಾಂತಿಕವಾಗಿ ಏನು ಮಾಡಬೇಕೋ ಆ ಕೆಲಸವನ್ನು ಅದು ಮಾಡುತ್ತದೆ. ಪಕ್ಷದ ವ್ಯವಹಾರಗಳನ್ನು ನಮ್ಮದೇ ಆದ ರೀತಿಯಲ್ಲಿ ನಾವು ನಿರ್ವಹಣೆ ಮಾಡುತ್ತಿದ್ದೇವೆ. ಒಂದು ರಾಜಕೀಯ ಪಕ್ಷವಾಗಿ ನಾವು ಹೀಗೆಯೇ ಇರಬೇಕು ಎಂದರು.

ಮಥುರಾ, ಕಾಶಿ ದೇಗುಲ ಯೋಜನೆ ಇಲ್ಲ
ಮಥುರಾ ಮತ್ತು ಕಾಶಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡುವ ಯೋಚನೆಯನ್ನಾಗಲೀ, ಇಚ್ಛೆಯನ್ನಾಗಲೀ ಬಿಜೆಪಿ ಹೊಂದಿಲ್ಲ ಅಥವಾ ಆ ಕುರಿತ ಯಾವುದೇ ಚರ್ಚೆಗಳೂ ನಡೆದಿಲ್ಲ. ಸಂಸದೀಯ ಮಂಡಳಿಯಲ್ಲಾದ ಚರ್ಚೆಯಂತೆ ನಮ್ಮ ಪಕ್ಷದ ವ್ಯವಹಾರಗಳು ನಡೆಯುತ್ತವೆ ಎಂದು ಪ್ರಶ್ನೆಯೊಂದಕ್ಕೆ ನಡ್ಡಾ ಉತ್ತರಿಸಿದರು.

ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರು ಮಥುರಾ ಮತ್ತು ಕಾಶಿಯಲ್ಲಿ ದೇಗುಲ ನಿರ್ಮಾಣದ ಭರವಸೆ ನೀಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ನಡ್ಡಾ, ಈ ವಿಷಯದಲ್ಲಿ ಗೊಂದಲ ಬೇಡ. 1989ರಲ್ಲಿ ಪಾಲಂಪುರ್‌ನಲ್ಲಿ ಕೈಗೊಳ್ಳಲಾದ ನಿರ್ಣಯದಲ್ಲಿ ರಾಮಮಂದಿರ ನಿರ್ಮಾಣದ ಅಜೆಂಡಾವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಸುದೀರ್ಘ‌ ಹೋರಾಟದ ಬಳಿಕ ಈಗ ರಾಮಮಂದಿರ ನಿರ್ಮಾಣವಾಗಿದೆ. ಅದು ನಮ್ಮ ಅಜೆಂಡಾ ಆಗಿತ್ತು. ಆದರೆ ಕೆಲವರು ಭಾವುಕರಾಗುತ್ತಾರೆ ಅಥವಾ ಅತ್ಯುತ್ಸಾಹದಲ್ಲಿ ಇತರ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ನಮ್ಮದು ದೊಡ್ಡ ಪಕ್ಷವಾಗಿದ್ದು, ಪ್ರತಿಯೊಬ್ಬ ನಾಯಕ ತಮ್ಮದೇ ಆದ ಮಾತಿನ ಶೈಲಿಯನ್ನು ಹೊಂದಿದ್ದಾರೆ ಎಂದರು.

ಟಾಪ್ ನ್ಯೂಸ್

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

7-thirthahalli

Thirthahalli: ಕಳ್ಳತನಕ್ಕೆ ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು !

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ

Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್

6-honnavar

Tata Steel ಅಖಿಲ ಭಾರತ ವಿಶೇಷ ಚೇತನರ ಚೆಸ್ ಟೂರ್ನಿ; ಹೊನ್ನಾವರದ ಸಮರ್ಥ ಚಾಂಪಿಯನ್

5-kushtagi

Kushtagi: ಕೋತಿ ದಾಳಿಗೆ ಊರಿನ 15 ಜನರಿಗೆ ಗಾಯ; ಕೋತಿ ಸೆರೆಹಿಡಿಯಲು ಮುಂದಾದ ಅರಣ್ಯ ಇಲಾಖೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

Ballari: ವಾಲ್ಮೀಕಿ ನಿಗಮದ ಪ್ರಕರಣ… ಎರಡನೇ ದಿನವೂ ಮುಂದುವರೆದ ಬಿಜೆಪಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ

Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್

Mumbai-Nagpur ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ

Mumbai-Nagpur ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ

ಬಿಹಾರದಲ್ಲಿ ಕುಸಿದು ಬಿತ್ತು ಮತ್ತೊಂದು ಸೇತುವೆ… ಕಳೆದ 11 ದಿನದಲ್ಲಿ ನಡೆದ 5ನೇ ಪ್ರಕರಣ

Bihar: ಕುಸಿದು ಬಿತ್ತು ಮತ್ತೊಂದು ಸೇತುವೆ… ಕಳೆದ 9 ದಿನದಲ್ಲಿ ನಡೆದ 5ನೇ ಪ್ರಕರಣ

1-police

New Criminal ಕಾನೂನು ಜಾರಿ: ಪೊಲೀಸ್‌ ಠಾಣೆಗಳಲ್ಲಿ ಜು.1ಕ್ಕೆ ವಿಶೇಷ ಕಾರ್ಯಕ್ರಮ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

7-thirthahalli

Thirthahalli: ಕಳ್ಳತನಕ್ಕೆ ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು !

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ

Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್

6-honnavar

Tata Steel ಅಖಿಲ ಭಾರತ ವಿಶೇಷ ಚೇತನರ ಚೆಸ್ ಟೂರ್ನಿ; ಹೊನ್ನಾವರದ ಸಮರ್ಥ ಚಾಂಪಿಯನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.