ಆಧಾರ್ ಕಾರ್ಡ್: ಸರಳೀಕರಣವೇ ವಂಚಕರಿಗೆ ವಾರವಾಯಿತೇ?
ಪೊಲೀಸ್ ಅಧಿಕಾರಿಗಳ ಹಲವು ತನಿಖೆಗಳಿಂದ ವಿಷಯ ಪತ್ತೆ
Team Udayavani, Mar 29, 2023, 7:35 AM IST
ನವದೆಹಲಿ: ಇತ್ತೀಚೆಗೆ ಸೈಬರ್ ಅಪರಾಧಗಳು ಅಥವಾ ಆನ್‌ಲೈನ್ ಮೂಲಕ ವಂಚನೆಗಳು ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡಲು ಅತಿ ಸುಲಭದ ಅವಕಾಶ ನೀಡಿರುವುದು ಎಂದು ಕೆಲ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆಧಾರ್ ಹೊಂದಿರುವ ವ್ಯಕ್ತಿ ತನ್ನ ವಿಳಾಸವನ್ನು ಸುಲಭವಾಗಿ ಬದಲಿಸಬಹುದು. ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ, ವಿಳಾಸ ಬದಲಾವಣೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದರ ಮೇಲೆ ಸಾರ್ವಜನಿಕವಾಗಿ ಅಧಿಕಾರ ಸ್ಥಾನ ಹೊಂದಿದ ವ್ಯಕ್ತಿಗಳ ಸಹಿಯನ್ನು ಹಾಕಿಸಿಕೊಳ್ಳಬೇಕು. ಸಂಸದ, ಶಾಸಕ, ನಗರಪಾಲಿಕೆ ಸದಸ್ಯ, ಗ್ರೂಪ್ ಎ, ಬಿ ಗೆಜೆಟೆಡ್ ಅಧಿಕಾರಿಗಳು, ಎಂಬಿಬಿಎಸ್ ವೈದ್ಯರ ಸಹಿಯೂ ನಡೆಯುತ್ತದೆ.
ಹೇಗೆಲ್ಲ ಮೋಸವಾಗುತ್ತಿದೆ?:
ಸರ್ಕಾರದಲ್ಲಿ ಅಧಿಕಾರ ಸ್ಥಾನ ಹೊಂದಿದ ವ್ಯಕ್ತಿಗಳ ನಕಲಿ ಸ್ಟಾಂಪ್ ಗಳು, ನಕಲಿ ಸಹಿಗಳನ್ನು ಬಳಸಿ ವಿಳಾಸವನ್ನು ಹಲವರು ಬದಲಿಸಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳೇ ಬೇಜವಾಬ್ದಾರಿಯಿಂದ ಸಹಿ ಹಾಕಿದ್ದಾರೆ. 2022, ಮಾರ್ಚ್‌ನಲ್ಲಿ ದೆಹಲಿ ಕೇಂದ್ರ ಜಿಲ್ಲಾ ಪೊಲೀಸ್ ತಂಡ ಮಾಡಿದ ದಾಳಿಯಲ್ಲಿ ಆರು ಮಂದಿಯ ವಂಚನೆಯನ್ನು ಬಯಲಿಗೆಳೆದಿತ್ತು.
ಯುವತಿಯನ್ನು ಅನಿವಾಸಿ ಭಾರತೀಯ ವರರ ರೂಪದಲ್ಲಿ ಈ ತಂಡ ಮೋಸಗೊಳಿಸಿತ್ತು. ಒಬ್ಬ ವೈದ್ಯನಿಗೆ ಬರೀ 500 ರೂ. ಹಣ ನೀಡಿ, ಆಧಾರ್ ವಿಳಾಸ ಬದಲಾವಣೆ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಂಡು ಈ ವ್ಯಕ್ತಿಗಳು ವಿಳಾಸ ಬದಲಾವಣೆ ಮಾಡಿಕೊಂಡಿದ್ದರು.
ಇನ್ನೊಂದು ಪ್ರಕರಣದಲ್ಲಿ ಶಾಸಕನೊಬ್ಬ ತನ್ನ ಸಹಿ, ಸ್ಟಾಂಪ್ ಹಾಕಲು ಕಚೇರಿ ಸಿಬ್ಬಂದಿಯೊಬ್ಬನಿಗೆ ಅನುಮತಿ ನೀಡಿದ್ದೂ ಗೊತ್ತಾಗಿದೆ! ಹಾಗಂತ ಪೊಲೀಸರಿಗೆ ಆಧಾರ್ ಮಾಹಿತಿ ಪಡೆಯಲು ನೇರ ಅಧಿಕಾರವಿಲ್ಲ. ಅವರು ಅದಕ್ಕೆ ಉಚ್ಚ ನ್ಯಾಯಾಲಯದ ಅನುಮತಿ ಪಡೆಯಬೇಕು. ಇದು ತನಿಖೆಯನ್ನು ವಿಳಂಬಗೊಳಿಸುತ್ತಿದೆ ಎಂದು ಪೊಲೀಸರು ಹೇಳಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.