ಒಂದು ಕೋಟಿ ಡುಪ್ಲಿಕೇಟ್ ಎಂಟ್ರಿ ಡಿಲೀಟ್: ಸಮಗ್ರ ಡಿಜಿಟಲ್ ದತ್ತಾಂಶ ರೂಪಿಸಲು ಕ್ರಮ
ಏಳು ತಿಂಗಳ ಅವಧಿಯಲ್ಲಿ ಚುನಾವಣಾ ಆಯೋಗದ ಕ್ರಮ
Team Udayavani, Aug 9, 2022, 7:30 AM IST
ನವದೆಹಲಿ: ಮತದಾರರ ಪಟ್ಟಿಯಲ್ಲಿ ಎರಡೆರಡು ಕಡೆ ನೋಂದಣಿಯಾಗಿರುವ ಮತದಾರರ ಹೆಸರನ್ನು ಅಳಿಸುವ ಪ್ರಕ್ರಿಯೆಗೆ ಚುನಾವಣಾ ಆಯೋಗ ವೇಗ ನೀಡಿದ್ದು, ಕಳೆದ 7 ತಿಂಗಳಲ್ಲಿ ಸುಮಾರು ಒಂದು ಕೋಟಿ ಡುಪ್ಲಿಕೇಟ್ ಎಂಟ್ರಿಗಳನ್ನು ಡಿಲೀಟ್ ಮಾಡಿದೆ.
ಒಬ್ಬರದೇ ಹೆಸರು ಅಥವಾ ಫೋಟೋ ಬೇರೆ ಬೇರೆ ಕಡೆ ಎಂಟ್ರಿಯಾಗಿದ್ದರೆ, ಅಂತಹ ಹೆಚ್ಚುವರಿ ನೋಂದಣಿಗಳನ್ನು ತೆಗೆದುಹಾಕಲಾಗಿದೆ. ಮತದಾರರ ಸಮಗ್ರ ಡಿಜಿಟಲ್ ದತ್ತಾಂಶವನ್ನು ಆಯೋಗವು ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಡುಪ್ಲಿಕೇಟ್ ಎಂಟ್ರಿಗಳನ್ನು ಅಳಿಸುವತ್ತ ಹೆಚ್ಚಿನ ಗಮನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಜನಸಂಖ್ಯಾಧಾರಿತವಾಗಿ 11,91,191 ಡುಪ್ಲಿಕೇಟ್ ಎಂಟ್ರಿಗಳನ್ನು ಆಯೋಗವು ಪತ್ತೆಹಚ್ಚಿದ್ದು, ಈ ಪೈಕಿ 9,27,853 ಅನ್ನು ಡಿಲೀಟ್ ಮಾಡಲಾಗಿದೆ. ಒಂದೇ ರೀತಿಯ ಫೋಟೋಗಳನ್ನು ಹೊಂದಿರುವ 3.19 ಕೋಟಿ ನೋಂದಣಿಗಳು ಪತ್ತೆಯಾಗಿದ್ದು, ಆ ಪೈಕಿ 98 ಲಕ್ಷ ಎಂಟ್ರಿಗಳನ್ನು ಅಳಿಸಿಹಾಕಲಾಗಿದೆ.
ಇದನ್ನೂ ಓದಿ:ನೀರಿನ ಬಾಟಲ್ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು
ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ನಡೆಸಿದ್ದಾರೆ. ಬೂತ್ ಮಟ್ಟದಲ್ಲೇ ಈ ಕುರಿತ ಪರಿಶೀಲನೆಗಳನ್ನು ನಡೆಸಿ, ಹೆಚ್ಚುವರಿ ನೋಂದಣಿಗಳನ್ನು ಅಳಿಸಿ ಹಾಕಲಾಗಿದೆಯೇ ವಿನಾ ನೇರವಾಗಿ ಮುಖ್ಯ ಚುನಾವಣಾ ಆಯೋಗ ಯಾವುದೇ ಎಂಟ್ರಿಗಳನ್ನು ಡಿಲೀಟ್ ಮಾಡಿಲ್ಲ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.