ದೇಶದ ಜಿಡಿಪಿ ಶೇ. 20.1ಕ್ಕೆ ಜಿಗಿತ
Team Udayavani, Sep 1, 2021, 7:30 AM IST
ಹೊಸದಿಲ್ಲಿ / ಮುಂಬಯಿ: ಸೋಂಕಿನ ಹೊಡೆತಕ್ಕೆ ತತ್ತರಿಸಿದ್ದ ದೇಶದ ಅರ್ಥ ವ್ಯವಸ್ಥೆ ನಾಗಾಲೋಟದಲ್ಲಿ ಚೇತರಿಕೆ ಕಾಣುತ್ತಿದೆ. ಹಾಲಿ ವಿತ್ತ ವರ್ಷದ ಮೊದಲ ತ್ತೈಮಾಸಿಕದಲ್ಲಿ ಒಟ್ಟು ದೇಶಿಯ ಉತ್ಪಾದನೆ (ಜಿಡಿಪಿ) ದಾಖಲೆಯ ಶೇ. 20.1ಕ್ಕೆ ಜಿಗಿದಿರುವುದು ಮತ್ತು ಮಂಗಳವಾರ ಬಾಂಬೆ ಷೇರುಪೇಟೆಯಲ್ಲಿ ಸಂವೇದಿ ಸೂಚ್ಯಂಕ 57 ಸಾವಿರಕ್ಕೆ ಏರಿಕೆಯಾಗಿರುವುದು ಇದಕ್ಕೆ ಸಾಕ್ಷಿ.
ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ 20 ಪೈಸೆ ಏರಿಕೆ ಕಂಡಿರು ವುದು ಕೂಡ ಸೋಂಕಿನ ನಡುವೆ ಭಾರತದ ಅರ್ಥವ್ಯವಸ್ಥೆ ಚೇತರಿಕೆಯತ್ತ ಸಾಗುತ್ತಿದೆ ಎಂಬುದಕ್ಕೆ ನಿದರ್ಶನ ಎಂದು ಅಂತಾ ರಾಷ್ಟ್ರೀಯ ರೇಟಿಂಗ್ಸ್ ಸಂಸ್ಥೆ ಮೂಡೀಸ್ ತನ್ನ ವರದಿಯಲ್ಲಿ ಧನಾತ್ಮಕವಾಗಿ ಚಿತ್ರಿಸಿದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜೂನ್‌ಗೆ ಮುಕ್ತಾಯವಾಗಿರುವ ಮೊದಲ ತ್ತೈಮಾಸಿಕ ದಲ್ಲಿ ಜಿಡಿಪಿ ಕಳೆದ ವಿತ್ತೀಯ ವರ್ಷದ ಇದೇ ಅವಧಿಗಿಂತ ಶೇ. 20.1ರಷ್ಟು ಏರಿಕೆ ಕಂಡಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಸಾಂಖೀÂಕ ಸಂಸ್ಥೆ (ಎನ್‌ಎಸ್‌ಒ) ಈ ಮಾಹಿತಿ ಬಿಡುಗಡೆ ಮಾಡಿದೆ.
2020-21ನೇ ವಿತ್ತೀಯ ವರ್ಷದ ಮೂರನೇ ಮತ್ತು ನಾಲ್ಕನೇ ತ್ತೈಮಾಸಿಕದಲ್ಲಿ ಜಿಡಿಪಿ ಶೇ. 0.5, ಶೇ. 1.6ರಷ್ಟು ಏರಿಕೆಯಾಗಿತ್ತು. ಸತತ ಮೂರನೇ ಬಾರಿಗೆ ಇಂಥ ಏರಿಕೆಯನ್ನು ದೇಶದ ಅರ್ಥ ವ್ಯವಸ್ಥೆ ಕಾಣುತ್ತಿದೆ. ಕಳೆದ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ ಜಿಡಿಪಿ ಶೇ. -24.4ಕ್ಕೆ ಕುಸಿದಿತ್ತು.
ರೂಪಾಯಿ ಏರಿಕೆ:
ಮಂಗಳವಾರ ಅಮೆರಿಕದ ಡಾಲರ್ ಎದುರು ಭಾರತೀಯ ಕರೆನ್ಸಿ ರೂಪಾಯಿಯ ಮೌಲ್ಯ 29 ಪೈಸೆ ಏರಿಕೆ ಯಾಗಿದೆ. ಹೀಗಾಗಿ ದಿನಾಂತ್ಯಕ್ಕೆ ಅದು 73 ರೂ.ಗಳಿಗೆ ಮುಕ್ತಾಯವಾಗಿದೆ. 12 ವಾರ ಗಳಿಗೆ ಹೋಲಿಸಿದರೆ ಇದು ಗರಿಷ್ಠ ಏರಿಕೆ.
ಬಿಎಸ್‌ಇ, ನಿಫ್ಟಿ ದಾಖಲೆ :
ಬಾಂಬೆ ಷೇರು ಪೇಟೆಯಲ್ಲಿ ಹೂಡಿಕೆದಾರರಿಗೆ ಸತತ 2ನೇ ದಿನವೂ ಸಂತಸ ಲಭಿಸಿದೆ. ದಿನದ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕ 662.63 ಪಾಯಿಂಟ್ ಏರಿಕೆಯಾಗಿತ್ತು. ಮಧ್ಯಾಂತರದಲ್ಲಿ 57,625.26 ಪಾಯಿಂಟ್‌ಗಳಿಗೆ ಏರಿ 57,552.39ರಲ್ಲಿ ಸೂಚ್ಯಂಕ ಮುಕ್ತಾಯವಾಯಿತು. ಇದರಿಂದ ಬಿಎಸ್‌ಇಯ ಮಾರುಕಟ್ಟೆ ಮೌಲ್ಯ 2,50,02,084.01 ಕೋಟಿ ರೂ.ಗೆ ಜಿಗಿದಿದೆ.
ಸತತ ಏಳನೇ ದಿನವೂ ನಿಫ್ಟಿ ಸೂಚ್ಯಂಕ 201.15 ಪಾಯಿಂಟ್ ಏರಿಕೆಯಾಗಿದೆ. ಮಧ್ಯಾಂತರದಲ್ಲಿ 17,153.50ರ ವರೆಗೆ ಏರಿಕೆಯಾಗಿ ದಿನಾಂತ್ಯಕ್ಕೆ 17, 153.50ರಲ್ಲಿ ಮುಕ್ತಾಯವಾಯಿತು. ಸತತ 19 ದಿನಗಳ ಅವಧಿಯಲ್ಲಿ ನಿಫ್ಟಿ ಸೂಚ್ಯಂಕ 1 ಸಾವಿರ ಪಾಯಿಂಟ್‌ಗಳಷ್ಟು ಏರಿಕೆಯಾಗಿದೆ.
ವಲಯಗಳ ಕೊಡುಗೆ :
- ನಿರ್ಮಾಣ ವಲಯ – ಶೇ. 68.3
- ಕೃಷಿ ವಲಯ – ಶೇ. 4.5
- ಗಣಿಗಾರಿಕೆ – ಶೇ. 18.6
- ವ್ಯಾಪಾರ, ಹೊಟೇಲ್, ಸಾರಿಗೆ, ಸಂಪರ್ಕ, ಸೇವಾ ವಲಯ – ಶೇ.34.3
- ವಿದ್ಯುತ್, ಗ್ಯಾಸ್, ನೀರು ಪೂರೈಕೆ, ಇತರ ವಲಯ – ಶೇ. 14.3
- ರಿಯಲ್ ಎಸ್ಟೇಟ್, ಹಣಕಾಸು, ವೃತ್ತಿ ಪರ ಸೇವೆ – ಶೇ. 3.7
- ಸಾರ್ವಜನಿಕ ಆಡಳಿತ, ರಕ್ಷಣೆ, ಇತರ ಸೇವೆ – ಶೇ. 5.8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.