ಕೋವಿಡ್ ಪೂರ್ವದ ಹಂತಕ್ಕೆ ಅರ್ಥವ್ಯವಸ್ಥೆ ಚೇತರಿಕೆ
Team Udayavani, Aug 10, 2021, 6:58 AM IST
ಹೊಸದಿಲ್ಲಿ: ದೇಶದಲ್ಲಿ ಮತ್ತೆ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದ್ದು, ಆ.8ಕ್ಕೆ ಮುಕ್ತಾಯಗೊಂಡ ವಾರದಲ್ಲಿ ಶೇ.99.4ರಷ್ಟು ಹೆಚ್ಚಾಗಿವೆ.
ನೊಮುರಾ ಇಂಡಿಯಾ ಬ್ಯುಸೆನೆಸ್ ರೆಸಮ್ಮನ್ ಇಂಡೆಕ್ಸ್ (ಎನ್‌ಐಬಿಆರ್‌ಐ)ನ ಅಧ್ಯಯನದಲ್ಲಿ ಈ ಅಂಶ ಉಲ್ಲೇಖೀಸಲಾಗಿದೆ. ಕಳೆದ ವಾರದ ಲೆಕ್ಕಾಚಾರಗಳನ್ನು ಗಮನಿಸಿದಾಗ ಶೇ.94ರಷ್ಟು ಚಟುವಟಿಕೆಗಳು ಶುರುವಾಗಿದ್ದವು, ನೊಮುರಾ ಇಂಡಿಯಾದ ವಿಶ್ಲೇಷಕ ಸೋನಲ್ ವರ್ಮಾ ತಮ್ಮ ಟಿಪ್ಪಣಿಯಲ್ಲಿ “ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಗಮನಿಸಿದಾಗ ಕೊರೊನಾ ಹರಡುವುದಕ್ಕೆ ಮೊದಲು ಇದ್ದ ಸ್ಥಿತಿಗೆ ತಲುಪಿದೆ.
ಇದರಿಂದಾಗಿ ಸೋಂಕಿನ 2ನೇ ಅಲೆ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಗಿಂತ ಉತ್ತಮವಾಗಿದೆ’ ಎಂದು ಉಲ್ಲೇಖೀಸಿದ್ದಾರೆ. ಗೂಗಲ್ ವರ್ಕ್‌ಪ್ಲೇಸ್, ಚಿಲ್ಲರೆ ಮಾರಾಟ ಕ್ಷೇತ್ರ, ಮನರಂಜನೆ ಮತ್ತು ಆ್ಯಪಲ್ ಡ್ರೈವಿಂಗ್ ಇಂಡೆಕ್ಸ್ ಕ್ರಮವಾಗಿ ಶೇ.7.4, 5.3, ಮತ್ತು ಶೇ.6.7ರಷ್ಟು ಬೆಳವಣಿಗೆ ದಾಖಲಿಸಿದೆ. ಲಾಕ್‌ಡೌನ್ ತೆರವುಗೊಂಡ ಬಳಿಕ ವಿದ್ಯುತ್ ಬಳಕೆ ಪ್ರಮಾಣ ಕೂಡ ಹೆಚ್ಚಾಗಿದೆ.
ನೊಮುರಾ ಇಂಡೆಕ್ಸ್ ಪ್ರಕಾರ ಸತತ ಮೂರು ವಾರಗಳ ಅವಧಿಯಲ್ಲಿ ಶೇ.5.3ರಷ್ಟು ಹೆಚ್ಚಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಿಗಳು, ನೌಕರರು ಕರ್ತವ್ಯದಲ್ಲಿ ತೊಡಗಿಸಿ ಕೊಂಡಿರುವವರ ಪ್ರಮಾಣ ಶೇ. 39.8 ರಿಂದ ಶೇ.41.5ರ ವರೆಗೆ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Hospitalised: ಚಂದ್ರಬಾಬು ನಾಯ್ಡು ಅವರ ಸಹೋದರನ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.