ದಿಲ್ಲಿಯ ಹಲವು ಸಿಎ, ತೆರಿಗೆ ವೃತ್ತಿಪರರ ಕಚೇರಿಗಳ ಮೇಲೆ ಇಡಿ ದಾಳಿ
Team Udayavani, Apr 13, 2017, 3:23 PM IST
ಹೊಸದಿಲ್ಲಿ : ಜಾರಿ ನಿರ್ದೇಶನಾಲಯ ಇಂದು ದಿಲ್ಲಿಯಲ್ಲಿ ಹಲವಾರು ಚಾರ್ಟರ್ಡ್ ಅಕೌಂಟೆಂಟ್ಗಳು ಹಾಗೂ ತೆರಿಗೆ ವೃತ್ತಿಪರರ ಕಚೇರಿಗಳ ಮೇಲೆ ದಾಳಿ ನಡೆಸಿ ಕೋಟಿಗಟ್ಟಲೆ ಕಪ್ಪುಹಣ ಸೃಷ್ಟಿಸುವ 500ಕ್ಕೂ ಹೆಚ್ಚು ಶೆಲ್ (ನಕಲಿ) ಕಂಪೆನಿಗಳ ಸೃಷ್ಟಿಕರ್ತರ ಕಾರಸ್ಥಾನಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
ದಿಲ್ಲಿಯ ಕರೋಲ್ ಬಾಗ್, ಲಕ್ಷ್ಮೀ ನಗರ, ಮಾಡೆಲ್ ಟೌನ್, ಆಜಾದ್ ಪುರ, ದಿಲ್ಷಾದ್ ಗಾರ್ಡನ್ ಮತ್ತು ಇತರ ಕೆಲವು ಕಡೆಗಳಲ್ಲಿನ ತೆರಿಗೆ ವೃತ್ತಿಪರರರ ಕಾರ್ಯಾಲಯಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧಿಸಿದರು. ಸುಮಾರು 500ಕ್ಕೂ ಹೆಚ್ಚು ಶೆಲ್ ಕಂಪೆನಿಗಳಿಂದ ಲಕ್ಷ ಗಟ್ಟಲೆ ಕೋಟಿ ರೂ.ಕಪ್ಪುಹಣ ಸೃಷ್ಟಿಗೊಳ್ಳುವುದಕ್ಕೆ ಈ ತೆರಿಗೆ ವೃತ್ತಿಪರರು ಉದ್ಯಮಿಗಳೊಂದಿಗೆ ಕೈಜೋಡಿಸಿರುವುದು ಶೋಧ ಕಾರ್ಯಾಚರಣೆಗೆ ಕಾರಣವಾಗಿದೆ.
ಬ್ಯಾಂಕಿಂಗ್ ಚ್ಯಾನೆಲ್ಗಳನ್ನು ಬಳಸಿಕೊಂಡು ಈ ಶೆಲ್ ಕಂಪೆನಿಗಳು ತೆರಿಗೆ ವೃತ್ತಿಪರರ ಪರಿಣತ ಮಾರ್ಗದರ್ಶನ ಹಾಗೂ ನೆರವಿನಿಂದ ಲಕ್ಷಗಟ್ಟಲೆ ಕೋಟಿ ಕಪ್ಪು ಹಣ ಸೃಷ್ಟಿಸಿ ವಿದೇಶಗಳಿಗೆ ವರ್ಗಾಯಿಸಿ ಮರಳಿ ದೇಶದೊಳಕ್ಕೆ ಬಿಳಿ ಹಣವನ್ನಾಗಿ ತರಿಸುವ ಕುಟಿಲೋಪಾಯಗಳನ್ನು ಅನುಸರಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಪ್ರಮಾಣದ ನಗದನ್ನು ವಶಪಡಿಸಿಕೊಂಡು ಇಬ್ಬರು ಸಹೋದರರನ್ನು ಈ ಸಂಬಂಧ ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್ಗಳು
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
Jharkhand Polls: ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ… ಸೋರೆನ್ ಸರ್ಕಾರದ ವಿರುದ್ಧ ಕಿಡಿ
Tragedy: ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಪೌರ ಕಾರ್ಮಿಕರ ದುರಂತ ಅಂತ್ಯ
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.