ಹಣಕಾಸು ಅಕ್ರಮ : ಮಾಧ್ಯಮ ದೊರೆ ರಾಘವ ಬಹಲ್ ವಿರುದ್ಧ ED ಕೇಸು
Team Udayavani, Jun 7, 2019, 5:50 PM IST
ಹೊಸದಿಲ್ಲಿ : ಬಹಿರಂಗಪಡಿಸದ ವಿದೇಶೀ ಆಸ್ತಿ ಪಾಸ್ತಿ ಖರೀದಿಸಲು ಹಣಕಾಸು ಅಕ್ರಮ ನಡೆಸಿದ್ದಾರೆಂಬ ಆರೋಪ ಎದುರಿಸುತ್ತಿರುವ ಮಾಧ್ಯಮ ದೊರೆ ರಾಘವ ಬಹಲ್ ವಿರುದ್ಧ ಜಾರಿ ನಿರ್ದೇಶನಾಲಯ ಕೇಸು ದಾಖಲಿಸಿಕೊಂಡಿದೆ.
ರಾಘವ ಬಹಲ್ ಮತ್ತು ಇತರರ ವಿರುದ್ದ ಆದಾಯ ತೆರಿಗೆ ಇಲಾಖೆ ದೂರು ಸಲ್ಲಿಸಿದ ವಾರದ ಬಳಿಕ ಅದನ್ನು ತನಿಖೆಗೆ ಪರಿಗಣಿಸಿದ ಜಾರಿ ನಿರ್ದೇಶನಾಲಯ, ಪೊಲೀಸ್ ಎಫ್ಐಆರ್ಗೆ ಸಮನಾದ ಇಸಿಐಆರ್ (ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ವೆುಶನ್ ರಿಪೋರ್ಟ್) ದಾಖಲಿಸಿದೆ.
ಪಿಎಂಎಲ್ ಕಾಯಿದೆಯಡಿ ಈ ಕೇಸು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.