ಎಸ್‌ಎಸ್‌ಸಿ ಹಗರಣ: ಬಗೆದಷ್ಟೂ ಸಿಗುತ್ತಿದೆ ಸಂಪತ್ತು
ಮತ್ತೊಂದು ಫ್ಲಾಟ್‌ನಲ್ಲಿ 28 ಕೋಟಿ ರೂ. ನಗದು: ಮಾಜಿ ಸಚಿವ ಪಾರ್ಥ ಚಟರ್ಜಿ ನಿಕಟವರ್ತಿ ಅರ್ಪಿತಾಗೆ ಸೇರಿದ ಫ್ಲಾಟ್
Team Udayavani, Jul 29, 2022, 8:24 PM IST
ಕೋಲ್ಕತಾ: ಶಿಕ್ಷಕರ ನೇಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಟಿಎಂಸಿ ಮುಖಂಡ ಪಾರ್ಥ ಚಟರ್ಜಿಯ ನಿಕಟವರ್ತಿ ಅರ್ಪಿತಾ ಮುಖರ್ಜಿಯ ಮತ್ತೂಂದು ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿದೆ. ಅಲ್ಲಿಯೂ ಕೂಡ 28 ಕೋಟಿ ರೂ.ನಗದು, ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಫ್ಲಾಟ್‌ನ ಬಾಗಿಲಿಗೆ ಬೀಗ ಹಾಕಿದ್ದರಿಂದ ಹಾಗೂ ಅದರ ಕೀಲಿ ಕೈ ಸಿಗದೇ ಇದ್ದುದರಿಂದ ಕೇಂದ್ರ ಸರ್ಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ.
ಕೋಲ್ಕತಾದ ಚಿನಾರ್ ಪಾರ್ಕ್ ಎಂಬಲ್ಲಿ ಈ ಫ್ಲಾಟ್ ಇದೆ. ಗುರುವಾರ ರಾತ್ರಿಯೇ ದಾಳಿ ಮತ್ತು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.
ನಾನು ಬಲಿಪಶು:
ಈ ನಡುವೆ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಟಿಎಂಸಿ ಮುಖಂಡ ಪಾರ್ಥ ಚಟರ್ಜಿ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆಯ ಬಳಿಕ ಮಾತನಾಡಿದ ಅವರು, “ಟಿಎಂಸಿ ನನ್ನ ವಿರುದ್ಧ ಕೈಗೊಂಡ ಕ್ರಮ ಸರಿಯೋ ತಪ್ಪೋ ಎನ್ನುವುದನ್ನು ಸಮಯವೇ ನಿರ್ಧರಿಸಲಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇ.ಡಿ.ತನಿಖೆ ಶುರು
ಅರ್ಪಿತಾ ಮುಖರ್ಜಿಗೆ ಸೇರಿದ ಮೂರು ಕಂಪನಿಗಳು ಮತ್ತು ಅವುಗಳ ಮೂಲಕ ನಡೆಸಲಾಗಿದೆ ಎಂದು ಹೇಳಲಾಗಿರುವ ವಹಿವಾಟಿನ ಬಗ್ಗೆ ಇ.ಡಿ.ತನಿಖೆ ಶುರು ಮಾಡಿದೆ. ಅರ್ಪಿತಾ ಮುಖರ್ಜಿಯನ್ನು 2011ರ ಮಾ.21ರಂದು ಕಂಪನಿಯ ನಿರ್ದೇಶಕಿಯನ್ನಾಗಿ ನೇಮಕ ಮಾಡಲಾಗಿತ್ತು. ಅದೇ ವರ್ಷದ ಜು.1ರಂದು ನಟಿಯ ಸಹೋದರನನ್ನೂ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ದಾಖಲೆಗಳಲ್ಲಿ ಉಲ್ಲೇಖಗೊಂಡ ಮಾಹಿತಿಯಂತೆ ಆ ಕಂಪನಿ ವಿವಿಧ ರೀತಿಯ ಸರಕುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದೆ.
ಬಲವಂತದಿಂದ ವೈದ್ಯಕೀಯ ಪರೀಕ್ಷೆ
ಟಿಎಂಸಿ ಶಾಸಕ ಪಾರ್ಥ ಚಟರ್ಜಿ ನಿಕಟವರ್ತಿ ಅರ್ಪಿತಾ ಮುಖರ್ಜಿ ಕೋರ್ಟ್ ಆದೇಶದಂತೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿದ ಘಟನೆ ನಡೆದಿದೆ. ಕೋಲ್ಕತಾದ ಜೋಕಾ ಎಂಬಲ್ಲಿರುವ ಆಸ್ಪತೆಗೆ ಕಾರ್‌ನಲ್ಲಿ ಮುಖರ್ಜಿಯನ್ನು ಇ.ಡಿ.ಅಧಿಕಾರಿಗಳು ಕರೆ ತಂದಾಗ ಇಳಿಯಲು ನಿರಾಕರಿಸಿದರು. ಎಷ್ಟೇ ಮನವೊಲಿಸಿದರೂ, ಆಕೆ ಅತ್ತು ರಂಪ ಮಾಡಿ, ಕಾರಿನಲ್ಲೇ ಕೈ ಕಾಲುಗಳನ್ನು ಬಡಿದಿದ್ದಾರೆ. ಭದ್ರತಾ ಸಿಬ್ಬಂದಿ ಎತ್ತಿಕೊಂಡು ಹೋಗಲು ಪ್ರಯತ್ನಿಸಿದಾಗ ಆಕೆ ರಸ್ತೆಯಲ್ಲೇ ಕುಳಿತಳು. ಇದರ ಹೊರತಾಗಿಯೂ ಕೋರ್ಟ್ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಮುಖರ್ಜಿಯನ್ನು ಬಲವಂತವಾಗಿ ಆಸ್ಪತ್ರೆಯ ಒಳಕ್ಕೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.
ಈವರೆಗೆ ರೈಡ್‌ನಲ್ಲಿ ಸಿಕ್ಕಿದ್ದೇನು?
ಮೊದಲ ದಾಳಿ- 21.90 ಕೋಟಿ ರೂ. (56 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ, 76 ಲಕ್ಷ ರೂ. ಮೌಲ್ಯದ ಚಿನ್ನ) ಒಟ್ಟು 23.22 ಕೋಟಿ ರೂ.
ಎರಡನೇ ದಾಳಿ- 27.9 ಕೋಟಿ ರೂ. 5 ಕೆಜಿ ಚಿನ್ನ (4.3 ಕೋಟಿ ರೂ. ಮೌಲ್ಯ)
ಮೂರನೇ ದಾಳಿ – 28 ಕೋಟಿ ರೂ. ಪತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.