ನೋಟು ಅಪಮೌಲ್ಯ ಪರಿಣಾಮ: ಮೊದಲೇ ಎಚ್ಚರಿಕೆ ನೀಡಿದ್ದೆ
Team Udayavani, Sep 4, 2017, 6:30 AM IST
ಹೊಸದಿಲ್ಲಿ: ನೋಟು ಅಪಮೌಲ್ಯದ ಕ್ರಮದಿಂದ ದೀರ್ಘಕಾಲದ ಪ್ರಯೋಜನಗಳಿದ್ದರೂ, ತತ್‌ಕ್ಷಣದಲ್ಲೇ ಎದುರಾಗಬಹುದಾದ ಸಂಕಷ್ಟ ಗಳ ಕುರಿತು ಕೇಂದ್ರ ಸರಕಾರವನ್ನು ಎಚ್ಚರಿಸಿದ್ದೆ. ಅಲ್ಲದೆ ಕಪ್ಪು ಹಣವನ್ನು ಹೊರ ತರುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ “ಅನ್ಯ ಕ್ರಮ’ಗಳ ಕುರಿತೂ ಸಲಹೆ ನೀಡಿದ್ದೆ’
ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಇದರ ಜತೆಗೆ 2ನೇ ಅವಧಿಗೆ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಕೇಂದ್ರ ಸರಕಾರವೇ ಇರಾದೆ ಹೊಂದಿರಲಿಲ್ಲ. ಜತೆಗೆ ತನ್ನ ಬಳಿ ಆ ಬಗ್ಗೆ ಪ್ರಸ್ತಾವವನ್ನೂ ಮಾಡಿಯೇ ಇರಲಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
ಆರ್‌ಬಿಐ ಗವರ್ನರ್ ಹುದ್ದೆಯಿಂದ ಕೆಳಗಿಳಿದು ಸರಿಯಾಗಿ ಒಂದು ವರ್ಷದ ಅನಂತರ ರಘುರಾಮ್ ರಾಜನ್ ಮೌನ ಮುರಿದಿದ್ದಾರೆ. ಬರುವ ವಾರ ಬಿಡುಗಡೆ ಗೊಳ್ಳಲಿರುವ ತಮ್ಮ “ಐ ಡು ವಾಟ್ ಐ ಡು: ನೋ ರಿಫಾಮ್ಸ್ì ರೆಟೋರಿಕ್ ಆ್ಯಂಡ್ ರಿಸಾಲ್Ì’ ಪುಸ್ತಕದಲ್ಲಿ ನೋಟು ಅಪಮೌಲ್ಯ ಹಾಗೂ ದೇಶದ ಆರ್ಥಿಕ ಸ್ಥಿತಿ ಕುರಿತು ಅವರು ಪ್ರಸ್ತಾವಿಸಿದ್ದಾರೆ. ನೋಟು ಅಪಮೌಲ್ಯದ ಬಳಿಕ ಎದುರಾಗುವ ಸಮಸ್ಯೆಗಳ ಕುರಿತು 2016ರ ಫೆಬ್ರವರಿಯಲ್ಲೇ ಕೇಂದ್ರಕ್ಕೆ ಮೌಖೀಕವಾಗಿ ಎಚ್ಚರಿಕೆ ನೀಡಿದ್ದೆ ಎಂದು “ಟೈಮ್ಸ್ ಆಫ್ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸಂದರ್ಶನದ ಕೆಲವು ಅಂಶಗಳು ಇಲ್ಲಿವೆ.
ಒಳಿತು-ಕೆಡುಕು ಎರಡೂ ಇದೆ: “ನೋಟು ಅಪಮೌಲ್ಯ ದಿಂದ ಬರೀ ಸಂಕಷ್ಟಗಳೇ ಎದುರಾಗುತ್ತವೆ ಎಂಬುದು ಸರಿಯಲ್ಲ. ಅದರಿಂದ ಸಾಕಷ್ಟು ಅನುಕೂಲಗಳಿವೆ. ಆದರೆ ಅದಾವುದೂ ಸದ್ಯದ ಜನಜೀವನ ಅಥವಾ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಬಲ್ಲ ಅನುಕೂಲಗಳಲ್ಲ. ನೋಟು ಅಪಮೌಲ್ಯ ಒಂದೇ ಅಲ್ಲ, ಯಾವುದೇ ನೀತಿ, ಕ್ರಮದ ವಿಷಯದಲ್ಲೂ ಒಳಿತು-ಕೆಡುಕುಗಳಿರುವುದು ಸಹಜ. ಬರೀ ಒಳ್ಳೆಯದನ್ನೇ ಮಾಡುವ ನಿಯಮ ರೂಪಿಸುವುದು ಅಸಾಧ್ಯ’.
ನಷ್ಟ ಎಂದರೆ ಹಣವಷ್ಟೇ ಅಲ್ಲ: “ಕಪ್ಪು ಹಣ ಹೊರತರಲು ಕೇಂದ್ರ ಸರಕಾರ ನೋಟು ಅಮಾನ್ಯ ಕ್ರಮ ಕೈಗೊಂಡಿದ್ದು ಒಳ್ಳೆಯ ಬೆಳವಣಿಗೆಯೇ. ಆದರೆ ಈ ಕ್ರಮಕ್ಕೂ ಮೊದಲು ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರೆ ಒಳಿತಿತ್ತು. ಈ ನಿರ್ಧಾರದಿಂದ ಮೊದಲು ಪೆಟ್ಟು ಬಿದ್ದಿದ್ದು ಜಿಡಿಪಿ ಮೇಲೆ. ಮೇಲ್ನೋಟಕ್ಕೆ ಕುಸಿದಿರುವುದು ಒಂದೆರಡು ಅಂಶಗಳಷ್ಟೇ ಅನಿಸಿದರೂ ಒಟ್ಟಾರೆ ನಷ್ಟ ಗಮನಿಸಿದಾಗ ಅದು 2.5 ಲಕ್ಷ ಕೋಟಿ ರೂ.ಗಳನ್ನೂ ಮೀರುತ್ತದೆ! ನಷ್ಟ ಎಂದರೆ ಬರೀ ಹಣವೇ ಅಲ್ಲ. ನೋಟು ಅಮಾನ್ಯದ ಅನಂತರ ಜನ ಸಾಲುಗಳಲ್ಲಿ ನಿಂತು ಕಾಯುವಂತಾಯಿತು. ಇದರಿಂದ ಕೋಟ್ಯಂತರ ಮಂದಿಯ ಅಮೂಲ್ಯ ಸಮಯ ನಷ್ಟವಾಗಿದೆ. ಹೊಸ ನೋಟುಗಳನ್ನು ಮುದ್ರಿಸಲು ಆರ್‌ಬಿಐ 8 ಸಾವಿರ ಕೋಟಿ ರೂ. ವ್ಯಯಿಸಿದ್ದನ್ನೂ ನಷ್ಟ ಎಂದೇ ಪರಿಗಣಿಸಬೇಕು. ಇದರೊಂದಿಗೆ ಹಳೇ ನೋಟುಗಳನ್ನು ಖಾತೆಗೆ ಜಮಾ ಮಾಡಿಕೊಳ್ಳಲು ಬ್ಯಾಂಕ್‌ಗಳು ಹೆಚ್ಚುವರಿ ಸಿಬಂದಿಯನ್ನು ನಿಯೋಜಿಸಿದ್ದವು. ಬ್ಯಾಂಕ್ ಸಿಬಂದಿ, ಮ್ಯಾನೇಜರ್‌ಗಳು ಹೆಚ್ಚುವರಿ ಅವಧಿಗೆ ಕೆಲಸ ಮಾಡಿದ್ದರು. ಇವೆಲ್ಲವೂ ನಷ್ಟವೇ,’.
ಇ-ವ್ಯವಹಾರ ವೃದ್ಧಿ: “ಅಮಾನ್ಯದ ಅನಂತರ ಶೇ. 99ರಷ್ಟು ಹಳೇ ನೋಟು ಗಳು ವಾಪಸ್ ಬಂದಿವೆ ಎಂದು ಆರ್‌ಬಿಐ ಹೇಳಿದೆ. ಹೀಗಾಗಿ ಇದೊಂದು ಯಶಸ್ವಿ ಕ್ರಮವಲ್ಲ. ಆದರೆ ದೇಶದಲ್ಲಿ ಬ್ಯಾಂಕ್ ಮುಖವನ್ನೇ ನೋಡದ ಕೋಟ್ಯಂತರ ಮಂದಿ ಬ್ಯಾಂಕ್‌ಗಳಿಗೆ ಹೋಗುವಂತೆ ಮಾಡಿದ್ದು, ಕೋಟಿ ಕೋಟಿ ಹೊಸ ಖಾತೆಗಳು ಸೃಷ್ಟಿಯಾಗಿದ್ದು ಒಂದು ಯಶಸ್ಸು. ಮುಖ್ಯವಾಗಿ ದೇಶಾದ್ಯಂತ ಇ-ವ್ಯವಹಾರದ ಟ್ರೆಂಡ್ ಶುರುವಾಗಿದೆ. ದೇಶದ ಆರ್ಥಿಕ ಪ್ರಗತಿ ದೃಷ್ಟಿಯಿಂದ ನೋಡಿದಾಗ ಇದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು’.
“ಕೇಂದ್ರದ ನೋಟು ಅಮಾನ್ಯ ನಿರ್ಧಾರದ ಹಿಂದಿನ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಈ ಕ್ಷಣದಲ್ಲಿ ಆ ಕ್ರಮವನ್ನು ಒಂದು ಆರ್ಥಿಕ ಯಶಸ್ಸು ಎಂದು ಹೇಳಲು ಸಾಧ್ಯವೇ ಇಲ್ಲ. ಹಾಗಂತ ಎಲ್ಲವೂ ಇಲ್ಲಿಗೇ ಮುಗಿದಿಲ್ಲ. ಮುಂದೆ ಕಾಲ ಎಲ್ಲಕ್ಕೂ ಉತ್ತರ ನೀಡಲಿದೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Earthquakes: ಹಿಮಾಲಯದ ತಪ್ಪಲಲ್ಲಿ ಅತೀ ಹೆಚ್ಚು ಭೂಕಂಪ ಸಂಭವಿಸುವುದೇಕೆ?
Bharatpol: ಅಂತಾರಾಷ್ಟ್ರೀಯ ಪೊಲೀಸ್ ಸಹಕಾರಕ್ಕೆ “ಭಾರತ್‌ಪೋಲ್’
Kerala: 20 ವರ್ಷದಿಂದ ಪಾಳು ಬಿದಿದ್ದ ಮನೆಯ ಫ್ರಿಡ್ಜಲ್ಲಿ ತಲೆಬುರುಡೆ ಪತ್ತೆ!
Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
Fraud; ಡಿಕೆಶಿ, ಡಿಕೆಸು ಸಹೋದರಿ ಎಂದು ಸ್ತ್ರೀರೋಗ ತಜ್ಞೆಗೂ 4.2 ಕೋಟಿ ವಂಚಿಸಿದ್ದ ಐಶ್ವರ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.