ಇಫಿಗೆ ಸಂಭ್ರಮದ ಸಮಾರೋಪ
Team Udayavani, Nov 29, 2017, 11:32 AM IST
ಪಣಜಿ: ವಿವಾದಿತ ಮುನ್ನುಡಿಯೊಂದಿಗೆ ಆರಂಭವಾಗಿದ್ದ ಇಫಿ 2017 (ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ) ಯಾವುದೇ ಗದ್ದಲವಿಲ್ಲದೇ ಮಂಗಳವಾರ ಸಮಾರೋಪ ಕಂಡಿತು. ಈ ಚಿತ್ರೋತ್ಸವದ ಅತ್ಯುತ್ತಮ ಚಿತ್ರ ಪ್ರಶಸ್ತಿ ಫ್ರೆಂಚ್ ಸಿನಿಮಾ 120 ಬಿಪಿಎಂ ನ ಪಾಲಾಗಿದ್ದು, 40 ಲಕ್ಷ ರೂ ನಗದು, ಸುವರ್ಣ ನವಿಲು ಪಾರಿತೋಷಕ ಒಳಗೊಂಡಿದೆ.
ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದ ನಾಹೇಲ್ ಪೆರೆಜ್ ಬಿಸ್ಕರ್ಯಾತ್ ಅತ್ಯುತ್ತಮ ನಟ ಪ್ರಶಸ್ತಿಗೆ ಅಯ್ಕೆಯಾಗಿದ್ದಾರೆ. ಅತ್ಯುತ್ತಮ ಚಿತ್ರ ನಿರ್ದೇಶನಕ್ಕೆ ನೀಡಲಾಗುವ ಪ್ರಶಸ್ತಿ ಚೀನಾದ ಚಿತ್ರ ಏಂಜಲ್ಸ್ ವೇರ್ ವೈಟ್ ನಿರ್ದೇಶಿಸಿದ ವಿವಿಯನ್ ಕೂ ಅವರ ಪಾಲಾಗಿದೆ.
ಮತ್ತೂಂದು ಅತ್ಯುತ್ತಮ ಚಿತ್ರವಾಗಿ ಬೊಲಿವಿಯನ್ ಚಿತ್ರ ನಿರ್ದೇಶಕ ಕಿರೋ ರಸೊ ನಿರ್ದೇಶನದ ಡಾರ್ಕ್ ಸ್ಕಲ್ ಆಯ್ಕೆಯಾಗಿದೆ. ಚೊಚ್ಚಲ ಚಿತ್ರದ ಅತ್ಯುತ್ತಮ ನಿರ್ದೇಶನಕ್ಕೆ ನೀಡಲಾಗುವ ವಿಶೇಷ ತೀರ್ಪುಗಾರರ ಪ್ರಶಸ್ತಿಗೆ ಮಲಯಾಳಂನ ಟೇಕಾಫ್ ಚಿತ್ರದ ನಿರ್ದೇಶಕ ಕೇರಳದ ಮಹೇಶ್ ನಾರಾಯಣ್ ಭಾಜನರಾಗಿದ್ದಾರೆ.
ಇದೇ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಪಾರ್ವತಿ ಟಿಕೆ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದಾರೆ. ಐಸಿಎಫ್ಟಿ-ಯುನೆಸ್ಕೊ ಗಾಂಧಿ ಪ್ರಶಸ್ತಿಯನ್ನು ಮರಾಠಿ ಚಿತ್ರ ನಿರ್ದೇಶಕ ಮನೋಜ್ ಕದಮ್ ನಿರ್ದೇಶನದ ಕ್ಷಿತಿಜ್ ಪಡೆದುಕೊಂಡಿದೆ.
ಅಮಿತಾಭ್‌ಗೆ ಗೌರವ: ಇದೇ ಸಂದರ್ಭದಲ್ಲಿ ವರ್ಷದ ಭಾರತೀಯ ಚಲನಚಿತ್ರ ರಂಗದ ವ್ಯಕ್ತಿಗೆ ನೀಡಲಾಗುವ ವಿಶೇಷ ಪ್ರಶಸ್ತಿಯನ್ನು ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ರಿಗೆ ನೀಡಿ ಗೌರವಿಸಲಾಯಿತು. ಇದರೊಂದಿಗೆ ಜೀವಿತಾವಧಿ ಸಾಧನೆ ಪ್ರಶಸ್ತಿಯನ್ನು ಕೆನಡಾದ ಚಿತ್ರ ನಿರ್ದೇಶಕ ಆಟಮ್ ಇಂಗೋಯನ್ ಅವರಿಗೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ, ಕೇಂದ್ರ ಸಚಿವೆ ಸ್ಮತಿ ಇರಾನಿ, ಕೇಂದ್ರ ಸಚಿವರಾದ ಕಿರಣ್ ರಿಜುಜು, ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ಭಾರತೀಯ ಚಿತ್ರ ನಿರ್ದೇಶಕರಾದ ಜಾನು ಬರುವಾ, ನಾಗೇಶ್ ಕುಕನೂರ್ ಮತ್ತಿತರರು ಭಾಗವಹಿಸಿದ್ದರು. 9 ದಿನಗಳ ಉತ್ಸವದಲ್ಲಿ 195 ಸಿನಿಮಾಗಳು ಪ್ರದರ್ಶನಗೊಂಡಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಕನ್ನಡದ ಪೃಥ್ವಿ ಕೊಣನೂರು ಅವರ ರೈಲ್ವೆ ಚಿಲ್ಡ್ರನ್ ಚಿತ್ರ ಪ್ರದರ್ಶನಗೊಂಡಿತು.
ಬಾಲಿವುಡ್ ಮಯ?: ಇಡೀ ಉತ್ಸವ ಪೂರ್ತಿ ಬಾಲಿವುಡ್‌ನಿಂದ ಆವರಿಸಿಕೊಂಡಿದ್ದು, ದಕ್ಷಿಣ ಭಾರತದ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಹೊರತುಪಡಿಸಿದಂತೆ ಉಳಿದಾವ ಪ್ರಮುಖರೂ ಭಾಗವಹಿಸಿದಂತೆ ತೋರಲಿಲ್ಲ. ಇದಕ್ಕೆ ಬದಲಾಗಿ ಕಳೆದೆಲ್ಲ ವರ್ಷಗಳಿಗಿಂತ ಈ ಬಾರಿ ಹೆಚ್ಚು ಮಂದಿ ಬಾಲಿವುಡ್ ನಟ-ನಟಿಯರು ಉತ್ಸವದಲ್ಲಿ ಭಾಗವಹಿಸಿದ್ದರು. ಶಾರೂಖ್ ಖಾನ್, ಅಕ್ಷಯ್ ಕುಮಾರ್, ಶ್ರೀದೇವಿ, ಸಲ್ಮಾನ್ ಖಾನ್, ಕತ್ರಿನಾ ಕೈಫ್, ಕಂಗನಾ ರಣೌತ್, ಪೂಜಾ ಹೆಗ್ಡೆ, ಉಮಾ ಖುರೇಶಿ, ಅಲಿಯಾ ಭಟ್, ನಿರ್ದೇಶಕರಾದ ಸುಭಾಷ್ ಘಾಯ್, ಶೇಖರ್ ಕಪೂರ್ ಮತ್ತಿತರರು ಭಾಗವಹಿಸಿದ್ದರು.
ಪ್ರದರ್ಶನವಾಗದ ಎಸ್ ದುರ್ಗಾ: ಸನಲ್ ಕುಮಾರ್ ಶಶಿಧರನ್ ಅವರ ಎಸ್ ದುರ್ಗಾ ಚಿತ್ರದ ಪ್ರದರ್ಶನ ಕೊನೆಗೂ ಸಾಧ್ಯವಾಗಲಿಲ್ಲ. ಭಾರತೀಯ ಪನೋರಮಾ ವಿಭಾಗದಡಿ ಆ ಚಿತ್ರ ಆಯ್ಕೆಯ ಅಂತಿಮ ಸುತ್ತಿಗೆ ಹೋಗಿತ್ತಾದರೂ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಕೊನೇ ಹಂತದಲ್ಲಿ ಕೈಬಿಡಲಾಯಿತು. ಇದನ್ನು ಪ್ರಶ್ನಿಸಿ ಸನಲ್ ಕುಮಾರ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರಲ್ಲದೇ, ನ್ಯಾಯಾಲಯ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಸೂಚಿಸಿತ್ತು. ಆದರೆ, ಸೆನ್ಸಾರ್ ಸರ್ಟಿಫಿಕೇಟ್ ಸೇರಿದಂತೆ ಹಲವು ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ದೊರೆಯಲಿಲ್ಲ.
* ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI Goa 2024: ಕೋಟ ಫ್ಯಾಕ್ಟರಿಯಿಂದ ಬೊಮಾನ್ ಇರಾನಿವರೆಗೆ
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.