ರೌಡಿ ಸೆರೆಗೆ ತೆರಳಿದ್ದ 8 ಪೊಲೀಸರ ಹತ್ಯೆ ; ಕಾನ್ಪುರ ಬಳಿ ಆಘಾತಕಾರಿ ಕೃತ್ಯ
ರಸ್ತೆ ತಡೆ ತೆರವು ವೇಳೆ ಹೊಂಚು ಹಾಕಿ ಕುಕೃತ್ಯ
Team Udayavani, Jul 4, 2020, 6:10 AM IST
ಕಾನ್ಪುರ: ಮಧ್ಯರಾತ್ರಿ ರೌಡಿಗಳು ಗುಂಡಿನ ಸುರಿಮಳೆಗೈದು ಓರ್ವ ಡಿವೈಎಸ್ಪಿ, ಮೂವರು ಸಬ್ ಇನ್ಸ್‌ಪೆಕ್ಟರ್ ಹಾಗೂ ನಾಲ್ವರು ಪೇದೆಗಳನ್ನು ಹತ್ಯೆಗೈದಿರುವ ಭೀಭತ್ಸ ಕೃತ್ಯ ಸಂಭವಿಸಿದೆ.
ಸುಮಾರು 60 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಯೊಬ್ಬನನ್ನು ಪೊಲೀಸರ ತಂಡ ಬಂಧಿಸಲು ಹೊರಟಿದ್ದಾಗ ಈ ಕೃತ್ಯ ಜರುಗಿದೆ.
ಕಾನ್ಪುರ ಸಮೀಪದ ದಿಕ್ರು ಗ್ರಾಮದಲ್ಲಿ ಕುಖ್ಯಾತ ರೌಡಿ ವಿಕಾಸ್ ದುಬೆ ಅಡಗಿದ್ದ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಆತನನ್ನು ಬಂಧಿಸಲು ಡಿವೈಎಸ್ಪಿ ದೇವೇಂದ್ರ ಮಿಶ್ರಾ ನೇತೃತ್ವದ ಪೊಲೀಸರ ತಂಡವು ಶುಕ್ರವಾರ ನಸುಕಿನ 1 ಗಂಟೆ ಸಮಯದಲ್ಲಿ ತೆರಳಿತ್ತು.
ಪೊಲೀಸರು ಬರುವ ಮಾಹಿತಿಯನ್ನು ತಿಳಿದಿದ್ದ ರೌಡಿಗಳ ತಂಡವು, ಬುಲ್ಡೋಜರ್ ಬಳಸಿ ರಸ್ತೆಯನ್ನು ಬ್ಲಾಕ್ ಮಾಡಿದ್ದತ್ತು.
ಅವರು ಬರುವುದನ್ನೇ ಹೊಂಚು ಹಾಕಿ ಕಾಯುತ್ತಿದ್ದರು. ಈ ಕುತಂತ್ರ ಅರಿಯದ ಪೊಲೀಸರು ರಸ್ತೆ ತಡೆ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ.
ಈ ವೇಳೆ ಕಟ್ಟಡವೊಂದರಲ್ಲಿ ಅವಿತಿದ್ದ ಸುಮಾರು 8-10 ದುಷ್ಕರ್ಮಿಗಳು ನಿರಂತರವಾಗಿ ಗುಂಡಿನ ಸುರಿಮಳೆಗೈದಿದ್ದಾರೆ. ಇದರಿಂದ ತಬ್ಬಿಬ್ಟಾದ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಡಿವೈಎಸ್ಪಿ, ಮೂವರು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 8 ಮಂದಿ ಪೊಲೀಸರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಇಬ್ಬರು ರೌಡಿಗಳು ಕೂಡ ಹತರಾಗಿದ್ದಾರೆ.
ಘಟನಾ ಸ್ಥಳದಲ್ಲಿ ಎಕೆ 47 ಗನ್‌ಗಳು ದೊರೆತಿವೆ. ಕೊಲೆ, ದರೋಡೆ, ವಂಚನೆ ಸೇರಿದಂತೆ 60 ಪ್ರಕರಣಗಳಲ್ಲಿ ಕುಖ್ಯಾತ ರೌಡಿ ವಿಕಾಸ್ ದುಬೆ ಭಾಗಿಯಾಗಿದ್ದನು.
ಉತ್ತರ ಪ್ರದೇಶವು ಗೂಂಡಾರಾಜ್ಯವಾಗಿರುವುದು ಈ ದುಷ್ಕೃತ್ಯದಿಂದ ಮತ್ತೆ ಸಾಬೀತಾಗಿದೆ. ಪೊಲೀಸರಿಗೇ ಭದ್ರತೆ ಇಲ್ಲದಿರುವಾಗ ಜನಸಾಮಾನ್ಯರು ಹೇಗೆ ಸುರಕ್ಷಿತವಾಗಿರುತ್ತಾರೆ ಪ್ರತಿಪಕ್ಷಗಳು ಟೀಕಿಸಿವೆ.
ಸಿಎಂ ಸೂಚನೆ
ಪೊಲೀಸರನ್ನು ಹತ್ಯೆಗೈದಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಘಟನೆ ಸಂಬಂಧ ವರದಿ ಸಲ್ಲಿಸಲು ಡಿಜಿಪಿ ಅವಸ್ತಿಗೆ ಸಿಎಂ ಯೋಗಿ ಆದಿತ್ಯನಾಥ ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.