ಆಸ್ತಿ ವಿವಾದ:ಅಜ್ಜ-ಅಜ್ಜಿಯ ಮೇಲೆ ಸಿಟ್ಟಿನ ಭರದಲ್ಲಿ ಗುಂಡೆಸೆದ ಮೊಮ್ಮಗ
Team Udayavani, Jul 24, 2018, 11:43 AM IST
ಮುಜಫರನಗರ : ಆಸ್ತಿ ವಿವಾದಕ್ಕೆ ಸಂಬಂಧಿಸಿ 80 ವರ್ಷ ಪ್ರಾಯದ ರೈತ ಮತ್ತು ಆತನ ಪತ್ನಿಯ ಮೇಲೆ ಅವರ ಮೊಮ್ಮಗನೇ ಗುಂಡೆಸೆದ ಘಟನೆ ಜಿಲ್ಲೆಯ ಜಾತ್ನಗ್ಲಾ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕುಟುಂಬದ ಆಸ್ತಿಯಲ್ಲಿ ತನ್ನ ತಂದೆಯ ಪಾಲಿನ ಬಗ್ಗೆ ಮಾತನಾಡಲು ಮೊಮ್ಮಗ ಮೋನು ನಿನ್ನೆ ಸೋಮವಾರ ರಾತ್ರಿ ತನ್ನ ಅಜ್ಜನ ಮನೆಗೆ ಬಂದಿದ್ದ. ಅಜ್ಜ ಮತ್ತು ಮೊಮ್ಮೊಗನ ನಡುವೆ ಮಾತಿನ ಚಕಮಕಿ ನಡೆದು ದೊಡ್ಡ ಜಗಳಕ್ಕೆ ಕಾರಣವಾದಾಗ ಕೋಪೋದ್ರಿಕ್ತನಾದ ಮೊಮ್ಮಗ ಮೋನು, ಅಜ್ಜ -ಅಜ್ಜಿಯ ಮೇಲೆ ಗುಂಡೆಸೆದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಮೊಮ್ಮಗ ಮೋನು ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾನೆ. ಆತನನ್ನು ಹುಡುಕಾಡುವ ಕಾರ್ಯಾಚರಣೆಯನ್ನು ಆರಂಭಿಸಿರುವ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.