![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 1, 2020, 5:50 PM IST
ಕೋಲ್ಕತಾ:ಬಡ ಮಹಿಳೆಯೊಬ್ಬಳು ಭಾರೀ ಗಾತ್ರದ ಮೀನನ್ನು ಮಾರಾಟ ಮಾಡುವ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಲಕ್ಷಾಧಿಪತಿಯಾದ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.
ವರದಿಯ ಪ್ರಕಾರ, ಪಶ್ಚಿಮಬಂಗಾಳದ ಸಾಗರ್ ದ್ವೀಪ ಪ್ರದೇಶದ ಚಾಕ್ ಫುಲ್ ದುಬಿ ಗ್ರಾಮದ ನಿವಾಸಿ ಪುಪ್ಪಾ ಕಾರ್ ಎಂಬ ಮಹಿಳೆ ನದಿಯಲ್ಲಿ ತೇಲುತ್ತಾ ಬಂದಿದ್ದ 52 ಕೆಜಿ ತೂಕದ ಭಾರೀ ಗಾತ್ರದ ಮೀನನ್ನು ಹಿಡಿದು, ಬಹಳ ಶ್ರಮಪಟ್ಟು ದಡಕ್ಕೆ ತಂದಿದ್ದರು.
ಪುಪ್ಪ ಕಾರ್ ಎಂಬ ಮಹಿಳೆ ಈ ಭಾರೀ ಗಾತ್ರದ ಮೀನನ್ನು ಸ್ಥಳೀಯರ ನೆರವಿನಿಂದ ಮೀನು ಮಾರುಕಟ್ಟೆಗೆ ಮಾರಾಟ ಮಾಡಿದ್ದರು. ಅಲ್ಲಿ ಪ್ರತಿ ಕಿಲೋಗೆ 6,200 ರೂಪಾಯಿಯಂತೆ ಬರೋಬ್ಬರಿ 3 ಲಕ್ಷ ರೂಪಾಯಿ ಹಣ ಪಡೆಯುವ ಮೂಲಕ ಮಹಿಳೆಯ ಅದೃಷ್ಟ ಖುಲಾಯಿಸಿರುವುದಾಗಿ ವರದಿ ತಿಳಿಸಿದೆ.
ನಾನು ನನ್ನ ಜೀವಮಾನದಲ್ಲಿಯೇ ಇಷ್ಟು ದೊಡ್ಡ ಮೀನನ್ನು ನೋಡಿಲ್ಲ. ಬಂಗಾಲಿಯಲ್ಲಿ ಇದಕ್ಕೆ ಭೋಲಾ ಮೀನು ಎಂದು ಕರೆಯುತ್ತಾರೆ ಎಂದು ಮಹಿಳೆ ತಿಳಿಸಿದ್ದಾರೆ.
Bengal woman turns rich overnight.
Pushpa Kar, a resident of Sagar Islands, Bengal caught a huge fish weighing 52 kgs and sold it for Rs. 3 lakh. pic.twitter.com/nnWWaBQdZ2— Pooja Mehta (@pooja_news) September 29, 2020
ಈ ಮೀನು ಬಹುಶಃ ಹಡಗಿಗೆ ಡಿಕ್ಕಿ ಹೊಡೆದು ಸತ್ತಿರಬೇಕು ಎಂದು ಸ್ಥಳೀಯರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮೀನು ಮಾರುಕಟ್ಟೆ ವ್ಯಾಪಾರಿ ಹೇಳಿಕೆ ಪ್ರಕಾರ, ಈ ಮೀನು ಕೊಳೆಯಲು ಆರಂಭಿಸದೇ, ಜೀವಂತವಾಗಿದ್ದರೆ ಇದು ಇನ್ನಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು ಎಂದು ತಿಳಿಸಿದ್ದಾರೆ.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.