Election: ದಿಲ್ಲಿಯಲ್ಲಿ ಗೆದ್ದರೆ ನಿರುದ್ಯೋಗಿಗಳಿಗೆ ಮಾಸಿಕ 8,500: ಕಾಂಗ್ರೆಸ್ ಭರವಸೆ
ಇದು ಉಚಿತ ಯೋಜನೆಯಲ್ಲ, ಫ್ಯಾಕ್ಟರಿಗಳ ಮೂಲಕ ವಿತರಣೆ: ಕಾಂಗ್ರೆಸ್
Team Udayavani, Jan 13, 2025, 1:26 AM IST
ಹೊಸದಿಲ್ಲಿ: ದಿಲ್ಲಿ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು ಶತಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್, ರವಿವಾರ ತನ್ನ 3ನೇ ಭರವಸೆಯನ್ನು ದಿಲ್ಲಿ ಜನರಿಗೆ ನೀಡಿದೆ. ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೆ ಏರಿದರೆ ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ 8,500 ರೂ.ಗಳನ್ನು 1 ವರ್ಷದವರೆಗೆ ನೀಡುವುದಾಗಿ ಘೋಷಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಐಸಿಸಿ ದಿಲ್ಲಿ ಉಸ್ತುವಾರಿ ಕ್ವಾಜಿ ನಿಜಾಮುದ್ದೀನ್, “ಇದು ಉಚಿತ ಯೋಜನೆಯಲ್ಲ. ಬದಲಾಗಿ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರಿಗೆ ಸಹಾಯಧನವಾಗಿ ಸರಕಾರ ಇದನ್ನು ನೀಡುತ್ತದೆ. ಕೆಲಸ ದೊರೆಯದ ವಿದ್ಯಾವಂತರು ಯಾವುದಾದರೂ ಕಂಪೆನಿಗಳು ಅಥವಾ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಮೂಲಕ ಈ ಸಹಾಯಧನವನ್ನು ಪಡೆದುಕೊಳ್ಳಬಹುದು. ಇದು ಆರ್ಥಿಕ ನೆರವು ನೀಡುವುದಲ್ಲದೇ, ಕೆಲಸ ಹುಡುಕಿಕೊಳ್ಳಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.
ಇದೇ ವೇಳೆ ಈ ಯೋಜನೆಯ ಪೋಸ್ಟರನ್ನು ಸಹ ಬಿಡುಗಡೆ ಮಾಡಿದ್ದು, ಇದಕ್ಕೆ “ಯುವ ಉಡಾನ್ ಯೋಜನೆ’ ಎಂದು ಹೆಸರಿಡಲಾಗಿದೆ. ಜ.6ರಂದು ಪ್ಯಾರೀ ದೀದಿ ಯೋಜನೆ ಹಾಗೂ ಜ.8ರಂದು ಜೀವನ್ ರಕ್ಷಾ ಯೋಜನೆಗಳನ್ನು ಘೋಷಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi ಚುನಾವಣೆ ಎದುರಿಸಲು ಧನಸಹಾಯ ಮಾಡಿ: ದಿಲ್ಲಿ ಸಿಎಂ ಆತಿಶಿ
ಕೊಳೆಗೇರಿ ಜಾಗಗಳನ್ನು ಕಸಿಯಲಿರುವ ಬಿಜೆಪಿ: ಕೇಜ್ರಿವಾಲ್ ಆರೋಪ
Kerala: ಬಾಲ ಆ್ಯತ್ಲೀಟ್ ರೇಪ್: 14 ಮಂದಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್
Sanjay Rawat: “ಐಎನ್‌ಡಿಐಎ’ ಕೂಟ, ಅಘಾಡಿ ವಿಸರ್ಜಿಸಬೇಕು ಎಂದಿಲ್ಲ
Passport: ಎಲ್ಲ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ: ಜ್ಯೋತಿರಾದಿತ್ಯ ಸಿಂಧಿಯಾ
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.