Election Campaign; ಬಲಿಷ್ಠ ಸರಕಾರದಿಂದ ಶತ್ರುಗಳಿಗೆ ನಡುಕ: ಪಾಕ್‌ಗೆ ಮೋದಿ ಕುಟುಕು
70 ವರ್ಷ ಬಾಂಬ್ ಹಿಡಿದಿದ್ದ ಪಾಕ್ ಕೈಯ್ಯಲ್ಲಿ ಈಗ ಭಿಕ್ಷಾಪಾತ್ರೆ
Team Udayavani, May 19, 2024, 1:00 AM IST
ಚಂಡೀಗಢ: ಎಪ್ಪತ್ತು ವರ್ಷಗಳ ಕಾಲ ಕೈಯಲ್ಲಿ ಬಾಂಬ್ ಹಿಡಿದು ಭಾರತಕ್ಕೆ ತೊಂದರೆ ನೀಡು ತ್ತಿದ್ದ ಪಾಕಿಸ್ಥಾನವು ಇಂದು ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿಯುವಂತಾ ಗಿದೆ. ದೇಶದಲ್ಲಿ ಬಲಿಷ್ಠ ಹಾಗೂ ಸದೃಢ ಸರಕಾರ ಇದ್ದಾಗ ಮಾತ್ರವೇ ಶತ್ರುಗಳು ಈ ರೀತಿ ನಡುಗುತ್ತಾರೆ, ನಮಗೆ ಸವಾಲೆಸೆಯುವ ಮುನ್ನ 100 ಬಾರಿ ಯೋಚಿ ಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹರಿಯಾಣದಲ್ಲಿ ಶನಿವಾರ ಚುನಾವಣ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಪಾಕಿಸ್ಥಾನಕ್ಕೆ ಈ ರೀತಿ ಕುಟುಕಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ 4 ಹಂತದ ಲೋಕಸಭೆ ಚುನಾವಣೆಗಳು ಈಗಾಗಲೇ ಮುಗಿದಿದ್ದು, ಕಾಂಗ್ರೆಸ್ ಮತ್ತು ಐಎನ್‌ಡಿಐಎ ಒಕ್ಕೂಟ ಸಂಪೂರ್ಣವಾಗಿ ನೆಲಕಚ್ಚಿವೆ. ಜೂ. 4ಕ್ಕೆ ಇನ್ನು 17 ದಿನ ಬಾಕಿ ಇದ್ದು, ಆ ಬಳಿಕ ಕೇಂದ್ರದಲ್ಲಿ ಮತ್ತೆ ಪ್ರಬಲ ಎನ್‌ಡಿಎ ಸರಕಾರ ರಚನೆಯಾಗಲಿದೆ ಎಂದಿದ್ದಾರೆ. ಪಾಕಿಸ್ಥಾನದ ವಿಚಾರ ಪ್ರಸ್ತಾವಿಸಿ ದೇಶದಲ್ಲಿ ಪ್ರಬಲ ಸರಕಾರ ನಿರ್ಮಾಣದ ಅಗತ್ಯವನ್ನು ಮೋದಿ ಒತ್ತಿ ಹೇಳಿದ್ದಾರೆ. ದೇಶದಲ್ಲಿ ಐಎನ್‌ಡಿಐಎ ಒಕ್ಕೂಟ ಪ್ರಯೋಗಿಸುತ್ತಿರುವ ತಂತ್ರಗಳನ್ನು ಸಾರ್ವಜನಿಕರೇ ಸೋಲಿಸುತ್ತಿದ್ದಾರೆ. ವಿಶೇಷವಾಗಿ ಹರಿಯಾಣದ ಜನತೆಗೆ ದೇಶವಿರೋಧಿಗಳನ್ನು ಗುರುತಿಸುವ ಸಾಮರ್ಥ್ಯವಿದೆ. ಈ ರಾಜ್ಯದ ನರನಾಡಿಗಳಲ್ಲೂ ದೇಶಭಕ್ತಿ ತುಂಬಿದೆ ಎಂದಿದ್ದಾರೆ. ಇದೇ ವೇಳೆ ಇಲ್ಲಿನ ಪ್ರತೀ ಮನೆಯೂ “ಫಿರ್ ಏಕ್ ಬಾರ್’ ಎನ್ನುತ್ತಿವೆ ಎಂದು ಪ್ರಧಾನಿ ಹೇಳುತ್ತಿದ್ದಂತೆ ಜನಸಮೂಹ “ಮೋದಿ ಸರಕಾರ್’ ಎಂದು ಘೋಷಣೆ ಮೊಳಗಿಸುವ ಮೂಲಕ ಪ್ರಧಾನಿಗೆ ಬೆಂಬಲ ವ್ಯಕ್ತಪಡಿಸಿತು.
ಭದ್ರತೆ ವಿಚಾರದಲ್ಲೂ
ಕಾಂಗ್ರೆಸ್ ಹಗರಣ
ದೇಶದಲ್ಲಿ ಕಾಂಗ್ರೆಸ್ ನಡೆಸಿದ ಮೊದಲ ಹಗರಣವೇ ಭದ್ರತ ಪಡೆಗಳಿಗೆ ಸಂಬಂಧಿಸಿದ್ದಾಗಿದೆ. ಅಧಿಕಾರದಲ್ಲಿ ಇರುವವರೆಗೂ ಇದೇ ಪ್ರವೃತ್ತಿಯನ್ನು ಕಾಂಗ್ರೆಸ್ ಮುಂದುವರಿಸಿತು. ಬೋಫೋರ್ಸ್, ಸಬ್‌ಮರೀನ್, ಹೆಲಿಕಾಪ್ಟರ್ ಹೀಗೆ ಸಾಲು ಸಾಲು ಹಗರಣ ನಡೆಸಿ ಭದ್ರತ ಪಡೆಗಳನ್ನು ಕಾಂಗ್ರೆಸ್ ದುರ್ಬಲಗೊಳಿಸಿತ್ತು ಎಂದು ಪ್ರಧಾನಿ ಆರೋಪಿಸಿದ್ದಾರೆ. ವಿದೇಶಗಳಿಂದ ಶಸ್ತ್ರಾಸ್ತ್ರ ಆಮದು ಹೆಸರಿನಲ್ಲಿ ಹಣ ದೋಚುವುದಕ್ಕಾಗಿ ಕಾಂಗ್ರೆಸ್ ಇಂಥ ಕೃತ್ಯಗಳನ್ನು ಎಸಗಿದೆ. ಆದರೆ ನಾವು ಭಾರತದ ಸಶಸ್ತ್ರ ಪಡೆಗಳನ್ನು ಆತ್ಮನಿರ್ಭರಗೊಳಿಸಲು ಯೋಜನೆ ರೂಪಿಸಿದೆವು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.