ಮತ ಲಂಚ: ಕೇಜ್ರಿ ಹೇಳಿಕೆಗೆ ಚು.ಆ.ಖಂಡನೆ; ಆದೇಶ ಪ್ರಶ್ನಿಸುವುದಾಗಿ ಆಪ್
Team Udayavani, Jan 21, 2017, 4:52 PM IST
ಹೊಸದಿಲ್ಲಿ : ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿಯಾಗಿರುವ ಅರವಿಂದ ಕೇಜ್ರಿವಾಲ್ ಅವರು ಇತರ ಪಕ್ಷಗಳು ನೀಡುವ ಮತ ಲಂಚವನ್ನು ಸ್ವೀಕರಿಸಿ ಆಪ್ ಗೆ ಮತ ಹಾಕಿ ಎಂದು ಜನರಿಗೆ ಗೋವೆಯ ಬೆನೋಲಿಂ ನಲ್ಲಿನ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿರುವುದಕ್ಕೆ ಚುನಾವಣಾ ಆಯೋಗ ಅಸಮ್ಮತಿಯನ್ನು ಸೂಚಿಸಿ ಆ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.
ಈ ಆಕ್ಷೇಪಾರ್ಹ ಹೇಳಿಕೆಗೆ ಸಮಜಾಯಿಷಿಕೆ ನೀಡಲು ಜನವರಿ 18ರಂದು ತನ್ನ ಮುಂದೆ ಹಾಜರಾಗಬೇಕೆಂದೂ ಅದಕ್ಕೆ ತಪ್ಪಿದಲ್ಲಿ ಕಠಿನ ಕ್ರಮ ತೆಗೆದುಕೊಳ್ಳಲಾಗುವುದೆಂದೂ ಚುನಾವಣಾ ಆಯೋಗ ಕೇಜ್ರಿವಾಲ್ ಗೆ ಎಚ್ಚರಿಕೆ ನೀಡಿತ್ತು.
ಆದರೆ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, “ಆಯೋಗದ ಆದೇಶ ಸಂಪೂರ್ಣ ತಪ್ಪು. ಕೆಳ ನ್ಯಾಯಾಲಯ ಈ ಸಂಬಂಧ ನನ್ನ ಪರವಾಗಿ ತೀರ್ಪು ನೀಡಿದ್ದು ಚುನಾವಣಾ ಆಯೋಗ ಅದನ್ನು ಕಡೆಗಣಿಸಿದೆ. ಆದುದರಿಂದ ಚುನಾವಣಾ ಆಯೋಗದ ಆದೇಶವನ್ನು ನಾನು ಕೋರ್ಟಿನಲ್ಲಿ ಪ್ರಶ್ನಿಸುತ್ತೇನೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ
Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!
Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Mine Tragedy: ಇಂದು ಮತ್ತೆ ಮೂರು ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.