Election Commission ದ್ವೇಷ ಭಾಷಣ: ಬಿಜೆಪಿ, ಕಾಂಗ್ರೆಸ್‌ಗೆ ತಪರಾಕಿ
ಜಾತಿ, ಸಮುದಾಯ, ಭಾಷೆ, ಧರ್ಮಾಧಾರಿತ ಪ್ರಚಾರ ಕೈಗೊಳ್ಳದಂತೆ ಪಕ್ಷಗಳಿಗೆ ತಾಕೀತು ನೀತಿ ಸಂಹಿತೆ ಉಲ್ಲಂಘನೆ ಆರೋಪ
Team Udayavani, May 23, 2024, 7:22 AM IST
ಹೊಸದಿಲ್ಲಿ: ಚುನಾವಣ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಚುನಾವಣ ಆಯೋಗ, “ಜಾತಿ, ಸಮುದಾಯ, ಭಾಷೆ ಮತ್ತು ಧರ್ಮಾಧಾರಿತ ಪ್ರಚಾರ ಕೈಗೊಳ್ಳಬಾರದು.
ಸಶಸ್ತ್ರ ಪಡೆಗಳನ್ನು ರಾಜಕೀಯ ಗೊಳಿಸಬಾರದು’ ಎಂದು ತಾಕೀತು ಮಾಡಿದೆ.ಲೋಕಸಭೆ ಚುನಾ ವಣೆಯ 2 ಹಂತಗಳ ಮತದಾನ ಬಾಕಿಯಿರುವಂತೆಯೇ ಆಯೋಗದಿಂದ ಈ ಸೂಚನೆ ಹೊರಬಿದ್ದಿದೆ. ಬಿಜೆಪಿಯ ಅಗ್ರನಾಯಕರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರದ ವೇಳೆ ಚುನಾವಣ ಮಾದರಿ ನೀತಿ ಸಂಹಿತೆ ಉಲ್ಲಂ ಸಿದ್ದಾರೆಂದು ಉಭಯ ಪಕ್ಷಗಳು ಪರಸ್ಪರ ದೂರು ದಾಖಲಿಸಿದ್ದವು. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಅಧ್ಯಕ್ಷರಿಗೆ ಚುನಾವಣ ಆಯೋಗವು ಎ. 25ರಂದು ನೋಟಿಸ್ ನೀಡಿತ್ತು. ಪಕ್ಷಗಳು ನೀಡಿದ ಪ್ರತಿಕ್ರಿಯೆ ಆಧರಿಸಿ, ಆಯೋಗವು ಎರಡೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಚುನಾವಣೆಗಾಗಿ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯನ್ನು ಹಾಳು ಮಾಡಬಾರದು. ತಾರಾ ಪ್ರಚಾರಕರ ಹೇಳಿಕೆಗಳು ಚುನಾವಣ ನೀತಿ ಸಂಹಿತೆಯನ್ನು ಉಲ್ಲಂ ಸುತ್ತವೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಯೋಗ ಹೇಳಿದೆ.
ಚುನಾವಣ ಪ್ರಕ್ರಿಯೆ ಎಂದರೆ, ರಾಜಕೀಯ ಪಕ್ಷಗಳು ಸ್ಪರ್ಧಿಸುವುದಷ್ಟೇ ಅಲ್ಲ.ಬದಲಿಗೆ, ಚುನಾವಣೆ ಎಂಬುದು ಮತದಾರ ಸಮುದಾಯಕ್ಕೆ ತಾವು ಹೇಗೆ ಆದರ್ಶಪ್ರಾಯರು ಎಂಬುದನ್ನು ತಿಳಿಸುವ ಅವಕಾಶವೂ ಆಗಿರುತ್ತದೆ. ಭರವಸೆ ಮೂಡಿಸುವ ಪ್ರಕ್ರಿಯೆಯೂ ಆಗಿರುತ್ತದೆ ಎಂದು ಆಯೋಗ ತಿಳಿಸಿದೆ.
ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪರಸ್ಪರ ದ್ವೇಷಕ್ಕೆ ಕಾರಣವಾಗುವ, ಈಗಿರುವ ಬಿಕ್ಕಟ್ಟು ಉಲ್ಬಣಗೊಳಿಸುವ, ವಿವಿಧ ಜಾತಿ ಮತ್ತು ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಿಸುವಂಥ ಹೇಳಿಕೆಗಳನ್ನು ನೀಡಬಾರದು ಎಂದು ಸ್ಪಷ್ಟವಾಗಿ ಆಯೋಗ ಸೂಚಿಸಿದೆ. ತಾಂತ್ರಿಕ ದೋಷಗಳು ಮತ್ತು ತೀವ್ರತರ ವ್ಯಾಖ್ಯಾನಗಳು ಪಕ್ಷಗಳು ಮತ್ತು ಅವರ ಪ್ರಚಾರಕರ ಪ್ರಮುಖ ಜವಾಬ್ದಾರಿಯಿಂದ ನುಣುಚಿಕೊಳ್ಳುವ ದಾರಿಯಾಗಬಾರದು. ಚುನಾವಣ ಭಾಷಣಗಳು ಪ್ರಚಾರದ ಗುಣಮಮಟ್ಟ ಇನ್ನಷ್ಟು ಕುಸಿಯದಂತೆ ನೋಡಿಕೊಳ್ಳಬೇಕು ಎಂದು ಆಯೋಗವು ಹೇಳಿದೆ.
ಚುನಾವಣ ಆಯೋಗ ಹೇಳಿದ್ದೇನು?
-ತಾರಾ ಪ್ರಚಾರಕರ ಭಾಷಣ ಕುರಿತು ಎರಡೂ ಪಕ್ಷಗಳು ನೀಡಿರುವ ಸಮರ್ಥನೆ ಒಪ್ಪತಕ್ಕದ್ದಲ್ಲ.
-ಬಿಜೆಪಿ ಮತ್ತು ಅದರ ತಾರಾ ಪ್ರಚಾರಕರು ಧರ್ಮ ಮತ್ತು ಕೋಮು ಆಧಾರದಲ್ಲಿ ಮಾತನಾಡಬಾರದು.
-ಸಮಾಜವನ್ನು ವಿಭಜಿಸುವ ಭಾಷಣಗಳನ್ನು ನಿಲ್ಲಿಸಬೇಕು. ದೇಶದ ಸೂಕ್ಷ್ಮ, ಸಂಯೋಜಿತ ನೇಯ್ಗೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು.
-ರಾಜಕೀಯ ಪಕ್ಷಗಳು ದೇಶದ ಭದ್ರತಾ ಪಡೆಗಳನ್ನು ರಾಜಕೀಯಗೊಳಿಸಬಾರದು.
-ಅಗ್ನಿಪಥ ಯೋಜನೆ ಹಾಗೂ ಸಂವಿಧಾನ ಬದಲಾವಣೆ ಕುರಿತು ಕಾಂಗ್ರೆಸ್ ಸುಳ್ಳು ಮಾಹಿತಿ ಹರಡಬಾರದು.
-ಭದ್ರತಾ ಪಡೆಗಳ ಸಾಮಾಜಿಕ ಆರ್ಥಿಕ ಸಂಯೋಜನೆಯ ಕುರಿತು ಸಂಭಾವ್ಯ ವಿಭಜನಕಾರಿ ಹೇಳಿಕೆ ನೀಡಬಾರದು.
ಬಿಜೆಪಿ, ಕಾಂಗ್ರೆಸ್ ನೀಡಿದ್ದ ದೂರೇನು?
ದೇಶದ ಜನರ ಸಂಪತ್ತನ್ನು ಕಾಂಗ್ರೆಸ್ ಮರುಹಂಚಿಕೆ ಮಾಡಲಿದೆ ಎಂದು ರಾಜಸ್ಥಾನದ ಬಾಂಸವಾಡದಲ್ಲಿ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆ ವಿಭಜನಕಾರಿಯಾಗಿದೆ ಎಂದು ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿತ್ತು. ಜತೆಗೆ, ಮೋದಿಯವರು ಒಂದು ದೇಶ, ಒಂದು ಭಾಷೆ, ಒಂದು ಧರ್ಮವನ್ನು ಜಾರಿ ಮಾಡಲು ಹೊರಟಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿಯು ಆಯೋಗಕ್ಕೆ ದೂರು ನೀಡಿತ್ತು. ಈ ಕುರಿತು ಎರಡೂ ಪಕ್ಷಗಳು ನೀಡಿದ್ದ ಸಮರ್ಥನೆಯನ್ನು ಆಯೋಗ ಒಪ್ಪಿಕೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.