ಮಧ್ಯಪ್ರದೇಶ ಸಚಿವ ಮಿಶ್ರಾಗೆ 3 ವರ್ಷ ಚುನಾವಣೆ ಸ್ಪರ್ಧೆ ನಿಷೇಧ
Team Udayavani, Jun 24, 2017, 3:05 PM IST
ಭೋಪಾಲ್ : 2008ರಲ್ಲಿನ ತನ್ನ ವಿಧಾನಸಭಾ ಚುನಾವಣಾ ಪ್ರಚಾರಾಭಿಯಾನದ ಅಂಗವಾಗಿ ಪಾವತಿ ಸುದ್ದಿ ಬಳಸಿಕೊಂಡಿದ್ದರೆಂಬ ಕಾರಣಕ್ಕಾಗಿ ಚುನಾವಣಾ ಆಯೋಗವು ಮಧ್ಯಪ್ರದೇಶದ ಹಿರಿಯ ಸಚಿವ ನರೋತ್ತಮ ಮಿಶ್ರಾ ಅವರಿಗೆ ಮೂರು ವರ್ಷಗಳ ಚುನಾವಣಾ ಸ್ಪರ್ಧೆ ನಿಷೇಧವನ್ನು ಹೇರಿದೆ.
ಕಾನೂನಿನ ಪ್ರಕಾರ ಮಿಶ್ರಾ ಅವರು ಚುನಾವಣಾ ಆಯೋಗದ ಈ ಆದೇಶ ಜಾರಿಗೆ ಬಂದಿರುವ ದಿನದಿಂದ ತೊಡಗಿ ಮುಂದಿನ ಮೂರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿ ತಿಳಿಸಿದ್ದಾರೆ.
2008ರ ವಿಧಾನಸಭಾ ಚುನಾವಣೆಯನ್ನು ಸ್ಪರ್ಧಿಸಿ, ಪ್ರಕೃತ ಕಾಂಗ್ರೆಸ್ ಪಕ್ಷದಲ್ಲಿರುವ ರಾಜೇಂದ್ರ ಭಾರ್ತಿ ಅವರು ಸಲ್ಲಿಸಿರುವ ದೂರಿನ ಮೇಲೆ ಚುನಾವಣಾ ಆಯೋಗವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ರೈತರ ಆತ್ಮಹತ್ಯೆಯೇ ಮುಂತಾಗಿ ಹಲವಾರು ಕಾರಣಗಳಿಗಾಗಿ ರಾಜಕೀಯ ಎಡರು ತೊಡರುಗಳನ್ನು ಎದುರಿಸುತ್ತಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವಾಣ್ ಸರಕಾರಕ್ಕೆ ಚುನಾವಣಾ ಆಯೋಗದ ಈ ಕಠಿನ ಕ್ರಮದಿಂದ ಭಾರೀ ಹಿನ್ನಡೆ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.