ದೂರದಲ್ಲಿದ್ದುಕೊಂಡೇ ಮತ ಚಲಾಯಿಸಿ!
Team Udayavani, Dec 30, 2022, 6:40 AM IST
ನವದೆಹಲಿ: ಚುನಾವಣಾ ಹಬ್ಬದಲ್ಲಿ ಮತದಾರರ ಭಾಗೀದಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) ಮಹತ್ವದ ಹೆಜ್ಜೆಯಿಟ್ಟಿದೆ.
ದೇಶೀಯ ವಲಸೆ ಮತದಾರರು ದೂರದಲ್ಲೇ ಇದ್ದು ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸುವಂಥ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್(ಆರ್‌ವಿಎಂ)ನ ಮಾದರಿಯನ್ನು ಆಯೋಗ ಅಭಿವೃದ್ಧಿಪಡಿಸಿದೆ. ಜ.16ರಂದು ಇದರ ಪ್ರಾತ್ಯಕ್ಷಿಕೆ ನಡೆಯಲಿದ್ದು, ಅದಕ್ಕೆ ರಾಜಕೀಯ ನೇತಾರರನ್ನು ಆಹ್ವಾನಿಸಲಾಗಿದೆ.
ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಇದನ್ನು ಅನುಷ್ಠಾನ ಮಾಡಲಾಗುತ್ತದೆ. ಅದು ಸಾಧ್ಯವಾದರೆ, ವಲಸೆ ಮತದಾರರು ಪ್ರತಿ ಚುನಾವಣೆ ವೇಳೆ ತಮ್ಮ ಹುಟ್ಟೂರಿಗೆ ತೆರಳಿಯೇ ಹಕ್ಕು ಚಲಾವಣೆ ಮಾಡಬೇಕಾಗಿಲ್ಲ. ತಾವಿರುವ ಸ್ಥಳದಿಂದಲೇ ಅವರು ಮತ ಚಲಾಯಿಸಬಹುದು.
ಪ್ರಸ್ತುತ ಇರುವಂಥ ವಿದ್ಯುನ್ಮಾನ ಮತಯಂತ್ರಗಳ ಆಧಾರದಲ್ಲೇ ಆರ್‌ವಿಎಂಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಇಂಟರ್ನೆಟ್‌ಗೆ ಸಂಪರ್ಕಿಸುವುದಿಲ್ಲ. ಆರ್‌ವಿಎಂ ಮಾದರಿಯ ಪ್ರಾತ್ಯಕ್ಷಿಕೆ ಮತ್ತು ಸಂಬಂಧಪಟ್ಟವರಿಂದ ಅಭಿಪ್ರಾಯಗಳನ್ನು ಪಡೆದ ಬಳಿಕ, “ದೂರದಲ್ಲಿದ್ದುಕೊಂಡೇ ಮತ ಚಲಾಯಿಸುವ’ ವ್ಯವಸ್ಥೆಯನ್ನು ಆಯೋಗ ಜಾರಿ ಮಾಡಲಿದೆ.
ಮುಂದಿನ ಪ್ರಕ್ರಿಯೆ?:
ಪ್ರಜಾಪ್ರಾತಿನಿಧ್ಯ ಕಾಯ್ದೆ, 1950 ಮತ್ತು 1951, ಚುನಾವಣೆ ನಡೆಸುವ ನಿಯಮಗಳು, 1961 ಮತ್ತು ಚುನಾವಣೆ ನೋಂದಣಿ ನಿಯಮಗಳು, 1960ಗೆ ತಿದ್ದುಪಡಿ ತಂದ ಬಳಿಕವೇ ಆರ್‌ವಿಎಂ ಅನ್ನು ಜಾರಿ ಮಾಡಲು ಸಾಧ್ಯ.
ಯಾರಿಗೆ ಅನುಕೂಲ?:
ದೂರದೂರಿಗೆ ಹೋಗಿ ಕೆಲಸ ಮಾಡುವ ಕಾರ್ಮಿಕರು, ಪದೇ ಪದೆ ವಾಸ ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿದವರು, ಹುಟ್ಟೂರಿನ ಮತಪಟ್ಟಿಯಿಂದ ತಮ್ಮ ಹೆಸರು ಡಿಲೀಟ್ ಮಾಡಲು ಆಗದೇ ಇರುವವರಿಗೆ ಇದು ಅನುಕೂಲ ಕಲ್ಪಿಸಲಿದೆ.
ಇದೊಂದು ಅತ್ಯುತ್ತಮ ನಡೆ. ವಲಸೆ ಕಾರ್ಮಿಕರಿಗೆ ಹಕ್ಕು ಚಲಾವಣೆ ಸಮಸ್ಯೆಯು ದೀರ್ಘಾವಧಿಯಿಂದ ಇತ್ತು. ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ಪರಿಹಾರವನ್ನೇ ಕಂಡುಹಿಡಿದಿದ್ದು, ಅದನ್ನು ಪ್ರಜಾಸತ್ತಾತ್ಮಕವಾಗಿ ಕಾರ್ಯರೂಪಕ್ಕೆ ತರುತ್ತಿರುವುದು ಶ್ಲಾಘನೀಯ. – ಎಸ್.ವೈ.ಖುರೇಷಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.