ಲಸಿಕೆಗೆ ಎಲೆಕ್ಷನ್ ಮಾದರಿ: ಇಂದಿನಿಂದ ದೇಶದೆಲ್ಲೆಡೆ ಡ್ರೈ ರನ್
ಬೂತ್ ಮಟ್ಟದಿಂದಲೇ ಸಿದ್ಧತೆ
Team Udayavani, Jan 2, 2021, 6:28 AM IST
ಕೇರಳದ ಪಾಲಕ್ಕಾಡ್‌ನಲ್ಲಿ ಶುಕ್ರವಾರ ಶಾಲೆ ಪುನಾರಂಭ ಅಗಿದೆ. ಪ್ರವೇಶಕ್ಕೆ ಮುನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಯಿತು.
ನವದೆಹಲಿ: ಲಸಿಕೆಯ ತುರ್ತು ಬಳಕೆಗೆ ಅಸ್ತು ಸಿಕ್ಕಿದೆ. ಇದರ ಬೆನ್ನಲ್ಲೇ ಶನಿವಾರ ದೇಶಾದ್ಯಂತ “ಡ್ರೈ ರನ್’ಗೆ (ಲಸಿಕೆರಹಿತ ಅಣಕು ಅಭ್ಯಾಸ) ಭಾರತ ಸಜ್ಜುಗೊಂಡಿದೆ. ಉದ್ದೇಶಿತ ಲಸಿಕೆ ನೀಡುವಿಕೆ ಕಾರ್ಯಕ್ರಮವನ್ನು ಎಲೆಕ್ಷನ್ ಪ್ರಕ್ರಿಯೆಯಂತೆಯೇ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, “ಡ್ರೈರನ್’ ಇದಕ್ಕೆ ಆರಂಭಿಕ ಹೆಜ್ಜೆ!
“ಲಸಿಕೆ ನೀಡುವಿಕೆ ಕಾರ್ಯಕ್ರಮವನ್ನು ಒಂದು ಸೂತ್ರದಲ್ಲಿ ಪರಿಶೀಲಿಸಲು ಡ್ರೈರನ್ ಅನುಕೂಲ ಕಲ್ಪಿಸಲಿದೆ. ಚುನಾವಣೆ ಮಾದರಿಯಲ್ಲಿ ಈ ಸಿದ್ಧತೆಗಳನ್ನು ನಡೆಸಿದ್ದೇವೆ. ಅಲ್ಲೂ ಪ್ರತಿ ಸಿಬ್ಬಂದಿಗೆ ತರಬೇತಿ ನೀಡಿದಂತೆ ಇಲ್ಲಿಯೂ ಎಲ್ಲ ವೈದ್ಯಕೀಯ ತಂಡಗಳನ್ನು ತರಬೇತಿಗೊಳಿಸಿ, ಹೊಣೆ ವಹಿಸಲಾಗುತ್ತದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ವಿವರಿಸಿದ್ದಾರೆ.
2,200 ಮಾಸ್ಟರ್ ಟ್ರೈನರ್!: “ದೇಶಾದ್ಯಂತ ಸುಮಾರು 2 ಸಾವಿರಕ್ಕೂ ಅಧಿಕ ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ಪೂರ್ಣಗೊಂಡಿದೆ. ರಾಜ್ಯ, 700 ಜಿಲ್ಲೆಗಳಲ್ಲಿ ಆರೋಗ್ಯ ಸಿಬ್ಬಂದಿಗೆ ತರಬೇತಿ ಪ್ರಗತಿಯಲ್ಲಿದೆ. ಬೂತ್ ಮಟ್ಟದಿಂದ ಹೇಗೆ ಎಲೆಕ್ಷನ್ ತಯಾರಿ ನಡೆಯುತ್ತದೋ, ಅದೇ ರೀತಿ ಇಲ್ಲೂ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
ಪ್ರತಿ ನಿಮಿಷದ ಮಾಹಿತಿ: “ಕೋವಿನ್ ಆ್ಯಪ್‌ನಲ್ಲಿ ಲಸಿಕೆ ನೀಡುವ ಪ್ರತಿ ಆರೋಗ್ಯ ಸಿಬ್ಬಂದಿಯ ಪಟ್ಟಿ ಅಪ್ಲೋಡ್ ಮಾಡಲಾಗುತ್ತದೆ. ಲಸಿಕೆ ಯೋಜನೆಯ ಪ್ರತಿ ಮಾಹಿತಿಗಳೂ ಕೋವಿನ್ ಆ್ಯಪ್‌ನಲ್ಲಿ ಲಭ್ಯವಿರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಹೇಳಿದರು.
8ರಿಂದ ಇಂಗ್ಲೆಂಡ್‌ಗೆ ವಿಮಾನ
ರೂಪಾಂತರಿ ಕೊರೊನಾ ಭಯದಿಂದ ಸ್ಥಗಿತಗೊಂಡಿದ್ದ ಭಾರತ- ಇಂಗ್ಲೆಂಡ್ ನಡುವಿನ ವಿಮಾನ ಸಂಚಾರ ಜ.8ರಿಂದ ಪುನರಾರಂಭಗೊಳ್ಳಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜ.8ರಿಂದ 23ರವರೆಗೆ ಪ್ರತಿವಾರಕ್ಕೆ 15 ವಿಮಾನಗಳು ಮಾತ್ರ ಉಭಯ ರಾಷ್ಟ್ರಗಳ ನಡುವೆ ಪ್ರಯಾಣಿಕರನ್ನು ಒಯ್ಯಲಿವೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್‌ನಿಂದ ಇಂಗ್ಲೆಂಡ್‌ಗೆ ವಿಮಾನಗಳು ಹಾರಾಡಲಿವೆ ಎಂದಿದ್ದಾರೆ.
7.5 ಕೋಟಿ ಲಸಿಕೆ ಸಿದ್ಧ
ಸೀರಮ್ ಸಂಸ್ಥೆಯ ಪ್ರಕಾರ, ಈಗಾಗಲೇ 7.5 ಕೋಟಿ ಲಸಿಕೆಗಳನ್ನು ಸಿದ್ಧಪಡಿಸಿ ಸಂಗ್ರಹಾರದಲ್ಲಿ ಇರಿಸಿಕೊಳ್ಳಲಾಗಿದೆ. ಜನವರಿ ಮೊದಲ ವಾರದ ಅಂತ್ಯದ ವೇಳೆಗೆ 10 ಕೋಟಿ ಡೋಸ್ ಲಸಿಕೆಗಳು ಸಿದ್ಧವಾಗಲಿವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಆರಂಭದಲ್ಲಿ ಕೇವಲ ಭಾರತದಲ್ಲಿ ಮಾತ್ರ ಕೋವಿಶೀಲ್ಡ್ ಲಸಿಕೆಯನ್ನು ವಿತರಣೆ ಮಾಡಲಿದ್ದೇವೆ. ಭಾರತದಲ್ಲಿ 30 ಕೋಟಿ ಮಂದಿಗೆ ಲಸಿಕೆ ಬೇಕಾಗಿದೆ. ನಂತರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಯಡಿಯಲ್ಲಿ ಕೋವ್ಯಾಕ್ಸ್ ವಿತರಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದ್ದಾರೆ.
ನಾಲ್ವರಿಗೆ ಹೊಸ ಕೊರೊನಾ!
ಭಾರತದಲ್ಲಿ ಶುಕ್ರವಾರ ನಾಲ್ವರಿಗೆ ರೂಪಾಂತರಿ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಹೊಸ ರೂಪದ ಸೋಂಕಿತರ ಒಟ್ಟು ಸಂಖ್ಯೆ 29ಕ್ಕೆ ಏರಿದೆ. ಪ್ರಸ್ತುತ ವಿಶ್ವದಾದ್ಯಂತ ಇಂಗ್ಲೆಂಡ್, ದ. ಆಫ್ರಿಕಗಳಲ್ಲದೆ ಡೆನ್ಮಾರ್ಕ್, ನೆದರ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ಕೆನಡಾ, ಜಪಾನ್, ಲೆಬನಾನ್, ಸಿಂಗಾಪುರಕ್ಕೆ ಕೊರೊನಾ ಹೊಸ ತಳಿ ಕಾಲಿಟ್ಟಿದೆ.
20 ಸಾವಿರ ಕೇಸ್!: ಈ ನಡುವೆ ದೇಶದಲ್ಲಿ ಶುಕ್ರವಾರ 20,035 ಮಂದಿಗೆ ಕೊರೊನಾ ಪಾಸಿಟಿವ್ ತಗುಲಿದೆ. 256 ಮಂದಿ ಸೋಂಕಿನಿಂದ ಜೀವತೆತ್ತಿದ್ದಾರೆ. ಧಾರಾವಿ ಸ್ಲಂನಲ್ಲಿ ಮತ್ತೆ ಇಬ್ಬರಿಗೆ ಸೋಂಕು ತಗುಲಿದ್ದು, ಸಕ್ರಿಯ ಪ್ರಕರಣ ಸಂಖ್ಯೆ 19ಕ್ಕೆ ಏರಿದೆ.
ಕೇರಳ ಚುರುಕಾಯ್ತು!
ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡುವಿಕೆಗೆ ಕೇರಳ ಎಲ್ಲ ತಯಾರಿ ಪೂರ್ಣಗೊಳಿಸಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಜ.5ರಿಂದ ಅರ್ಧದಷ್ಟು ಆಸನ ಸಾಮರ್ಥ್ಯದೊಂದಿಗೆ ಸಿನಿಮಾ ಮಂದಿರ ತೆರೆಯಲು ಒಪ್ಪಿಗೆ.
ಹಬ್ಬಗಳ ಹಿನ್ನೆಲೆಯಲ್ಲಿ ಅಲ್ಪ ಭಕ್ತರ ಉಪಸ್ಥಿತಿಯಲ್ಲಿ ಮಂದಿರಗಳಲ್ಲಿನ ಪೂಜೆಗೆ ಅವಕಾಶ ಕಲ್ಪಿಸಲು ಕೇರಳ ಚಿಂತನೆ.
83 ಕೋಟಿ ಸಿರಿಂಜ್ ಖರೀದಿಗೆ ಕೇಂದ್ರ ಸಿದ್ಧತೆ
2200 ಮಾಸ್ಟರ್ ಟ್ರೈನರ್‌ಗಳಿಂದ ವೈದ್ಯಸಿಬ್ಬಂದಿಗೆ ತರಬೇತಿ
700 ಜಿಲ್ಲೆಗಳಲ್ಲಿ ಟ್ರೈನಿಂಗ್ ಪ್ರಗತಿಯಲ್ಲಿದೆ
35 ಕೋಟಿ. ಸಿರಿಂಜ್ ಹೆಚ್ಚುವರಿ ಖರೀದಿಗೆ ಚಿಂತನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.