ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ ; ಮತದಾನ ಬಹುತೇಕ ಶಾಂತಿಯುತ
Team Udayavani, Feb 21, 2022, 6:40 AM IST
ಪಂಜಾಬ್‌ನ 117 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ಮುಕ್ತಾಯವಾಗಿದೆ. ಹೀಗಾಗಿ ಆ ರಾಜ್ಯದಲ್ಲಿ ಇನ್ನು ಪ್ರಚಾರದ ಭರಾಟೆ ಇಲ್ಲ. ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಹಕ್ಕು ಚಲಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ರಾಜ್ಯದಲ್ಲಿ ಇನ್ನು ನಾಲ್ಕು ಹಂತದ ಹಕ್ಕು ಚಲಾವಣೆ ಬಾಕಿ ಇದೆ.
ಲಕ್ನೋ: ಉತ್ತರ ಪ್ರದೇಶದಲ್ಲಿ ರವಿವಾರ 59 ಕ್ಷೇತ್ರಗಳಿಗೆ ಮೂರನೇ ಹಂತದಲ್ಲಿ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ಒಟ್ಟು 627 ಮಂದಿ ಅಭ್ಯರ್ಥಿ ಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ. ಚುನಾವಣ ಆಯೋಗದ ಪ್ರಕಾರ ಶೇ.60 ಹಕ್ಕು ಚಲಾವಣೆಯಾಗಿದೆ. ಝಾನ್ಸಿಯಲ್ಲಿ ಇವಿಎಂನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದ ರಿಂದ 2 ಗಂಟೆ ಕಾಲ ಮತದಾನ ವಿಳಂಬವಾಗಿ ಶುರುವಾಯಿತು. ಇಟಾವಾದಲ್ಲಿ ನಕಲಿ ಮತ ದಾನ ಮಾಡಲು ಪ್ರಯತ್ನಿಸಿದ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಫಿರೋಜಾಬಾದ್‌ನ ಮತಕೇಂದ್ರ ವೊಂದರಲ್ಲಿ ಪೊಲೀಸರ ಎದುರೇ ಮತ ಗಟ್ಟೆಯನ್ನು ಏಜೆಂಟ್‌ಗೆ ಥಳಿಸಲಾಗಿದೆ ಎಂದು ಸಮಾಜವಾದಿ ಪಕ್ಷ ಆರೋಪಿ ಸಿದೆ. ಫೆ.23ರಂದು ನಾಲ್ಕನೇ ಹಂತದ ಮತದಾನ ನಡೆಯಲಿದೆ.
100 ಸ್ಥಾನ ಖಚಿತ -ಅಖಿಲೇಶ್: ಉತ್ತರ ಪ್ರದೇಶದಲ್ಲಿ ಮಕ್ತಾಯ ವಾದ ಮೊದಲ ಎರಡು ಹಂತಗಳಲ್ಲಿ ಸಮಾಜವಾದಿ ಪಕ್ಷಕ್ಕೆ 100 ಸ್ಥಾನಗಳು ಖಚಿತ. ರೈತರ ಕೋಪ ಈ ಬಾರಿ ಬಿಜೆಪಿಗೆ ತಟ್ಟಲಿದೆ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ. ಜಸ್ವಂತ್‌ನಗರದಲ್ಲಿ ಪತ್ನಿ ಜತೆಗೆ ಮತ ಚಲಾಯಿಸಿದ ಬಳಿಕ ಅವರು ಮಾತ ನಾಡಿದ್ದಾರೆ. “ಮೊದಲ ಎರಡು ಹಂತಗಳಲ್ಲಿ ಬಿಜೆಪಿಗೆ ಸೋಲು ಅನುಭವಿಸಲಿದೆ. ಉತ್ತರ ಪ್ರದೇಶದ ರೈತರು ಅವರನ್ನು ಕ್ಷಮಿಸಲಾ ರರು. ಮೊದಲ ಎರಡು ಹಂತಗಳಲ್ಲಿ ನಮ್ಮ ಪಕ್ಷದ ಮೈತ್ರಿಕೂಟ 100 ಸ್ಥಾನಗಳನ್ನು ಗೆಲ್ಲಲಿದೆ’ ಎಂದು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಮುಖಂಡರು ಆತಂಕದಿಂದ ಫಲಿತಾಂಶಕ್ಕಾಗಿ ನಿರೀಕ್ಷಿಸುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಕಾನ್ಪುರ ಮೇಯರ್ ವಿರುದ್ಧ ಕೇಸು: ಕಾನ್ಪುರ ಮಹಾನಗರ ಪಾಲಿಕೆ ಮೇಯರ್ ಪ್ರಮೀಳಾ ಪಾಂಡೆ ವಿರುದ್ಧ ಕೇಸು ದಾಖಲಿಸಲಾಗಿದೆ. ಮತದಾನ ಕೇಂದ್ರವೊಂದರಲ್ಲಿ ಸೆಲ್ಫಿ ಮತ್ತು ವಿಡಿಯೋ ಚಿತ್ರೀಕರಿಸಿದ ಆರೋಪ ಅವರ ಮೇಲೆ ಇದೆ. ಇದರ ಜತೆಗೆ ಬಿಜೆಪಿಯ ಮತ್ತೊಬ್ಬ ಮುಖಂಡ ನವಾಬ್ ಸಿಂಗ್ ಕೂಡ ಮತದಾನ ಕೇಂದ್ರದಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದ್ದಾರೆ.
ಮತ ಚಲಾಯಿಸದ ಅವಳಿಗಳಿಗೆ ನಿರಾಸೆ
ಅತ್ಯಂತ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಕಾನ್ಪುರದ ಶ್ರುತಿ ಭಾಟಿಯಾ (30) ಮತ್ತು ಗೋರಿ ಭಾಟಿಯಾ (30) ಈ ಬಾರಿ ಮತ ಹಾಕಿಲ್ಲ. ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ. ಶನಿವಾರ ಅವರಿಗೆ ಮೂಳೆ ಮುರಿತ ಉಂಟಾದ್ದರಿಂದ ಮತ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಅಸಾಧ್ಯವಾಯಿತು ಎಂದು ತಾಯಿ ಸೋನಿಯಾ ಭಾತ್ಲಾ ಹೇಳಿದ್ದಾರೆ. ಸರಕಾರಿ ಅಧಿಕಾರಿಗಳು ಮತ ಚಲಾಯಿಸಲು ನೆರವಾಗುವ ವಿಶ್ವಾಸವಿದ್ದರೂ, ಅವರು ಬರಲಿಲ್ಲ ಎಂದು ವಿಷಾದಿಸಿದರು.
ಪಂಜಾಬ್ ಮತ ಸಮರ ಮುಕ್ತಾಯ
ಚಂಡೀಗಢ: ಬಹು ನಿರೀಕ್ಷಿತ 117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್‌ನಲ್ಲಿ ರವಿವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಚುನಾವಣ ಆಯೋಗದ ಮಾಹಿತಿ ಅನ್ವಯ ಶೇ.64.3 ಹಕ್ಕು ಚಲಾವಣೆಯಾಗಿದೆ. ಸಂಜೆ ಆರು ಗಂಟೆಗೆ ಹಕ್ಕು ಚಲಾವಣೆ ಮುಕ್ತಾಯವಾಗಿದೆ. 93 ಮಂದಿ ಮಹಿಳಾ ಅಭ್ಯರ್ಥಿಗಳು ಸೇರಿದಂತೆ 1,304 ಮಂದಿ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಅಮೃತಸರದಲ್ಲಿ ಮಾಜಿ ಸಚಿವ ನವಜೋತ್ ಸಿಂಗ್ ಸಿಧು, ಅಕಾಲಿ ದಳ ನಾಯಕ ಬಿಕ್ರಂ ಸಿಂಗ್ ಮಜೀತಾ ಅವರು ಹಕ್ಕು ಚಲಾಯಿಸಿದ ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು. ಮೊಹಾಲಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಸಿಂಗ್ ಮಾನ್ ಹಕ್ಕು ಚಲಾಯಿಸಿದರು.ಚಮ್‌ಕೌರ್ ಸಾಹಿಬ್‌ನಲ್ಲಿ ಸಿಎಂ ಚರಣ್‌ಜಿತ್ ಸಿಂಗ್ ಛನ್ನಿ ಹಕ್ಕು ಚಲಾಯಿಸಿದ್ದಾರೆ.
ಕಪ್ಪು ಕನ್ನಡಕ ಹಾಕಿ ಹಕ್ಕು ಚಲಾಯಿಸಿದರು
ಅಮೃತಸರದಲ್ಲಿ ಮತ ಹಾಕಲು ಬಂದ ಸಯಾಮಿ ಅವಳಿ (ಕನ್‌ಜಾಯಿನ್x ಟ್ವಿನ್ಸ್) ಸೊಹಾನ್ ಸಿಂಗ್ ಮತ್ತು ಮೋಹನ್ ಸಿಂಗ್ ಅವರಿಗೆ ಮತ ಹಾಕಲು ವ್ಯವಸ್ಥೆ ಮಾಡಲಾಗಿತ್ತು. ಸ್ಥಳೀಯವಾಗಿ ಸೋಹಾ° ಮತ್ತು ಮೋಹಾ° ಎಂದು ಜನಪ್ರಿಯವಾಗಿರುವ ಈ ಅವಳಿ ಮೊದಲ ಬಾರಿಗೆ ಹಕ್ಕು ಚಲಾಯಿಸುತ್ತಿದ್ದಾರೆ. ಅವರನ್ನು ಪ್ರತ್ಯೇಕ ಮತದಾರರು ಎಂದು ಪರಿಗಣಿಸಿ, ಪ್ರತ್ಯೇಕವಾಗಿಯೇ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಒಬ್ಬರು ಮತದಾನ ಮಾಡಿದ್ದನ್ನು ಮತ್ತೂಬ್ಬರು ನೋಡದಂತೆ ಕಪ್ಪು ಬಣ್ಣದ ಕನ್ನಡಕಗಳನ್ನು ನೀಡಲಾಗಿತ್ತು. ಅಮೃತಸರದ ಜಿಲ್ಲಾಧಿಕಾರಿ ಗುರುಪ್ರೀತ್ ಸಿಂಗ್ ಅವರು ಮತದಾನ ಮಾಡುವ ವೇಳೆ ಇದ್ದರು ಮತ್ತು ಅವರಿಗೆ ಮೊದಲ ಬಾರಿ ಮತ ಚಲಾಯಿಸಿದ್ದಕ್ಕೆ ಪ್ರಮಾಣಪತ್ರವನ್ನೂ ನೀಡಿ, ಪುರಸ್ಕರಿಸಿದ್ದಾರೆ.
ಸೋನು ಸೋದ್ ವಾಹನ ವಶಕ್ಕೆ: ಮೊಗಾ ಜಿಲ್ಲೆಯ ಮತಗಟ್ಟೆಯ ಬಳಿ ಹೊರಟಿದ್ದ ನಟ ಸೋನು ಸೂದ್ ಅವರ ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಅವರಿಗೆ ಎಚ್ಚರಿಕೆ ನೀಡಿ, ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋನು ಅವರ ಸಹೋದರಿ ಮಾಳವಿಕಾ ಸೂದ್ ಪಂಜಾಬ್‌ನ ಮೊಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಹಾಗಾಗಿ ಸೋನು ಕುಟುಂಬವನ್ನು ಮತಗಟ್ಟೆಗೆ ತೆರಳದಂತೆ ತಡೆಯಲಾಗಿದೆ. “ಚುನಾವಣ ಮತಗಟ್ಟೆಯ ಬಳಿ ಅಕಾಲಿ ದಳದವರು ಹಣ ಹಂಚುತ್ತಿದ್ದಾರೆ, ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ಬಂದಿತ್ತು. ಆ ಹಿನ್ನೆಲೆಯಲ್ಲಿ ನಾನು ಮತಗಟ್ಟೆ ಬಳಿ ಹೊರಟಿದ್ದೆ’ ಎಂದು ಸೋನು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.