ಚುನಾವಣೆಗೆ 24ಲಕ್ಷ ಇವಿಎಂಗಳು ಬೇಕು
Team Udayavani, May 28, 2018, 2:16 PM IST
ಹೊಸದಿಲ್ಲಿ: ಮುಂದಿನ ವರ್ಷ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಚುನಾವಣೆ ಏಕಕಾಲಕ್ಕೆ ನಡೆಯುವುದಿದ್ದರೆ 24 ಲಕ್ಷ ವಿದ್ಯುನ್ಮಾನ ಮತ ಯಂತ್ರಗಳು ಚುನಾವಣಾ ಆಯೋಗಕ್ಕೆ ಬೇಕಾಗುತ್ತವೆ. ಮೇ 16ರಂದು ಕಾನೂನು ಆಯೋಗದ ಜತೆ ನಡೆದ ಸಭೆಯ ವೇಳೆ ಈ ಅಂಶವನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಿವರಿಸಿದ್ದಾರೆ. ಹೆಚ್ಚುವರಿಯಾಗಿ ಬೇಕಾಗಿರುವ 12 ಲಕ್ಷ ಇವಿಎಂಗಳನ್ನು ಖರೀದಿಸಲು 4,500 ಕೋಟಿ ರೂ. ಅಗತ್ಯವಿದೆ.
ಏಕಕಾಲದಲ್ಲಿ ಎರಡೂ ಚುನಾವಣೆ ನಡೆದಲ್ಲಿ 1 ಮತಗಟ್ಟೆಯಲ್ಲಿ ಮತ ದೃಢೀಕರಣ ವ್ಯವಸ್ಥೆ ಇರುವ 2 ಇವಿಎಂಗಳನ್ನು ಇರಿಸಬೇಕಾಗುತ್ತದೆ. ಒಂದನ್ನು ಲೋಕಸಭೆ, ಮತ್ತೂಂದನ್ನು ವಿಧಾನ ಸಭೆ ಚುನಾವಣೆಗಾಗಿ ಬಳಕೆ ಮಾಡಬೇಕಾ ಗುತ್ತದೆ. ಲೋಕಸಭೆ ಚುನಾವಣೆಗೆ ಒಂದು ಮತದಾನ ಕೇಂದ್ರಕ್ಕೆ ಐವರು ಸಿಬಂದಿ ನೇಮಕ ಮಾಡಿದರೆ, ಎರಡು ಚುನಾವಣೆ ನಡೆದರೆ ಪ್ರತಿ ಕೇಂದ್ರಕ್ಕೆ ಹೆಚ್ಚುವರಿಯಾಗಿ 2 ಅಂದರೆ ಒಟ್ಟಾಗಿ ಏಳು ಮಂದಿಯ ಅಗತ್ಯವಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.