ಈಗ ಚುನಾವಣೆ ನಡೆದರೂ ಮೋದಿಯದ್ದೇ ಗೆಲುವು!
Team Udayavani, Jan 16, 2021, 7:45 AM IST
ಹೊಸದಿಲ್ಲಿ: ದೇಶದಲ್ಲಿ ಈಗ ಚುನಾವಣೆ ನಡೆದರೂ ಶೇ.58 ಮಂದಿ ಬಿಜೆಪಿ ನೇತೃತ್ವದ ಎನ್ಡಿಎಗೆ ಮತ ಚಲಾಯಿಸಲಿದ್ದಾರೆ! ಶೇ.28.1ಮಂದಿ ಯುಪಿಎಗೆ, ಶೇ.13.5 ಮಂದಿ ತೃತೀಯರಂಗ ಬೆಂಬಲಿಸಲಿದ್ದಾರೆ ಎಂದು ಎಬಿಪಿ ನ್ಯೂಸ್’ ಸಿ ವೋಟರ್ ನಡೆಸಿದ ಸರ್ವೇಯಲ್ಲಿ ಬಹಿರಂಗವಾಗಿದೆ.
ಮೋದಿ ಕೆಲಸ ಶೇ.71 ಮಂದಿಗೆ ಹಿಡಿಸಿದೆ. ಶೇ.26 ಮಂದಿ ಅತೃಪ್ತಿ ಸೂಚಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ಪ್ರಧಾನಿ ಮೋದಿ ಅವರಿಗೆ ಯಾರೂ ಪರ್ಯಾಯ ಇಲ್ಲ ಎಂದು ಶೇ.50 ಮಂದಿ ಪ್ರತಿಕ್ರಿಯಿಸಿದ್ದಾರೆ. ಶೇ.25.6 ಮಂದಿ ರಾಹುಲ್ ಗಾಂಧಿ ಹೆಸರು ಪ್ರಸ್ತಾವಿಸಿದ್ದಾರೆ. ಕಾಂಗ್ರೆಸ್ ನೇತೃತ್ವ ವಿಚಾರದಲ್ಲಿ ರಾಹುಲ್ಗಿಂತ ಪ್ರಿಯಾಂಕಾ ಗಾಂಧಿ ಶೇ.2.4 ಹೆಚ್ಚು ಅಭಿಮತ ಸಂಪಾದಿಸಿದ್ದಾರೆ. ರೈತರ ಪ್ರತಿಭಟನೆಯಿಂದ ಕೇಂದ್ರದ ಇಮೇಜ್ಗೆ ಶೇ.52.4ರಷ್ಟು ಧಕ್ಕೆಯಾಗಿದೆ ಎಂದಿದೆ.
ಉತ್ತಮ, ಕಳಪೆ ಸಿಎಂ: ದೇಶದ ಉತ್ತಮ ಸಿಎಂ ಪಟ್ಟಿಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಆಂಧ್ರ ಸಿಎಂ ಜಗನ್ಮೋಹನ್ ರೆಡಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. ಕಳಪೆ ಸಿಎಂ ಸಾಲಿನಲ್ಲಿ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ಹರಿಯಾಣ ಸಿಎಂ ಲಾಲ್ ಖಟ್ಟರ್ ಮತ್ತು ಪಂಜಾಬ್ ಸಿಎಂ ಕ್ಯಾ| ಅಮರಿಂದರ್ ಸಿಂಗ್ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.