Electoral Bonds: “ರಾಜಕೀಯ ಪಕ್ಷಗಳ ಹಣದ ಮೂಲ ತಿಳಿಯುವ ಹಕ್ಕು ನಾಗರಿಕರಿಗಿಲ್ಲ’
Team Udayavani, Oct 30, 2023, 10:18 PM IST
ನವದೆಹಲಿ: ಸಂವಿಧಾನದ 19(1)(ಎ) ವಿಧಿಯಡಿ ರಾಜಕೀಯ ಪಕ್ಷಗಳ ಹಣದ ಮೂಲಕ್ಕೆ ಸಂಬಂಧಿಸಿ ಮಾಹಿತಿ ಪಡೆಯುವ ಹಕ್ಕು ನಾಗರಿಕರಿಗೆ ಇಲ್ಲ ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ.
ಅಕ್ರಮ ಹಣವನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪದ ನಡುವೆಯೇ ಅಟಾರ್ನಿ ಜನರಲ್ ಅವರಿಂದ ಈ ಸ್ಪಷ್ಟನೆ ಬಂದಿದೆ. “ಸಮಂಜಸವಾದ ನಿರ್ಬಂಧಗಳಿಗೆ ಒಳಪಡದೇ ಜನರಿಗೆ “ಯಾವುದನ್ನೂ ಮತ್ತು ಎಲ್ಲವನ್ನೂ’ ತಿಳಿಯುವ ಹಕ್ಕು ಇರುವುದಿಲ್ಲ’ ಎಂದು ಆರ್.ವೆಂಕಟರಮಣಿ ಪ್ರತಿಪಾದಿಸಿದ್ದಾರೆ.
“ಚುನಾವಣಾ ಬಾಂಡ್ ಯೋಜನೆಯು ಬಾಂಡ್‌ಗಳನ್ನು ಖರೀದಿಸುವವರ ಗೌಪ್ಯತೆಯ ಪ್ರಯೋಜನವನ್ನು ವಿಸ್ತರಿಸುತ್ತದೆ. ಇದು ಶುದ್ಧ ಹಣದ ಕೊಡುಗೆಯನ್ನು ಖಚಿತಪಡಿಸುತ್ತದೆ. ತೆರಿಗೆ ಬಾಧ್ಯತೆಗಳಿಗೆ ಬದ್ಧವಾಗಿರುವುದನ್ನು ಖಚಿತಪಡಿಸುತ್ತದೆ’ ಎಂದೂ ವಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.