ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!
Team Udayavani, Sep 28, 2020, 6:56 PM IST
ಹೊಸದಿಲ್ಲಿ: ಆನೆಗಳು ನೀರಿಗಿಳಿದರೆ ಸ್ನಾನ ಮಾಡುವುದಕ್ಕಿಂತ, ನೀರಲ್ಲಿ ಚೆಲ್ಲಾಟ ಆಡುವುದೇ ಹೆಚ್ಚು. ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಜನಿಸಿದ ಆನೆ ಮರಿ ಶಿವಾನಿ, ಅದರ ನಾಮಕರಣದ ದಿನ ನೀರಲ್ಲಿ ಚೇಲ್ಲಾಟವಾಡುತ್ತಿದ್ದ ವೀಡಿಯೋ ಎಲ್ಲೆಡೆ ಶೇರ್ ಆಗಿತ್ತು. ಅದರ ತುಂಟಾಟಕ್ಕೆ ಮನಸೋಲದವರೇ ಇರಲಿಲ್ಲ. ಎಲ್ಲರ ವಾಟ್ಸಪ್ ಸ್ಟೇಟಸ್‌ನಲ್ಲಿ ಅದರದ್ದೇ ಹವಾ. ಈಗ ಅಂತಹದ್ದೆ ರೀತಿಯಲ್ಲಿ ಆನೆ ಮರಿಯೊಂದು ನೀರು ತುಂಬಿದ ಟಬ್‌ನಲ್ಲಿ ಆಟವಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಕ್ಷಕರ ಮನಸೋರೆಗೊಂಡಿದೆ. ಯಾವುದೇ ಪ್ರಾಣಿಯಾದರೂ ಅದು ಮುರಿಯಾಗಿರುವಾಗ ಏನು ಮಾಡಿದರೂ ತುಂಬ ಮುದ್ದಾಗೇ ಕಾಣುತ್ತದೆ.
ಸಿಮೋನ್ ಬಿಆರ್‌ಎಫ್ಸಿ ಹಾಪ್ಕಿನ್ಸ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, “ಬಾತ್ ಟೈಮ್’ ಎಂಬ ಅಡಿಬರಹ ನೀಡಿದ್ದಾರೆ. ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಜನ ಇದನ್ನು ವೀಕ್ಷಿಸಿ, ಕಮೆಂಟ್ ಮಾಡಿದ್ದಾರೆ. ಆನೆ ಮತ್ತು ಅದರ ಮರಿಯನ್ನು ಶುಚಿಗೊಳಿಸಲು ಮಾವುತ ಆನೆಗೆ ಪೈಪ್‌ನಿಂದ ನೀರು ಬಿಡುತ್ತಾನೆ. ಇದಾವುದುಕ್ಕೂ ತೃಪ್ತವಾಗದ ಆನೆಯ ಮರಿ ಸಾನದ ಬದಲಾಗಿ, ಅಲ್ಲಿಯೇ ಪಕ್ಕದಲ್ಲಿ ಇರಿಸಲಾಗಿದ್ದ ನೀರು ತುಂಬಿದ ತಬ್‌ನತ್ತ ತರೆಳಿ ಆದರಲ್ಲಿ ಚೆಲ್ಲಾಟ ನಡೆಸಿದೆ. ಬಾತ್ ಟಬ್‌ನಲ್ಲಿ ಆನೆ ಮರಿಯ ವಿನೋದ, ತುಂಟಾಟದ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Bath time ?❤️ pic.twitter.com/rRXrFVSGK7
— ⚽ Simon BRFC Hopkins ⚽ (@HopkinsBRFC) September 26, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.