ಎಲಿಫೆಂಟ್ ಎನ್‌ಕೌಂಟರ್: ಕೊಲೆಗಡುಕ ಆನೆಗೆ ಸದ್ಗತಿ!
Team Udayavani, Aug 13, 2017, 7:15 AM IST
ಸಾಹೀಬ್‌ಗಂಜ್: ಜಾರ್ಖಂಡ್, ಬಿಹಾರದ 15 ಮಂದಿಯ ಸಾವಿಗೆ ಕಾರಣವಾಗಿದ್ದ ಆನೆಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಈ ಆನೆಯನ್ನು ಕೊಲ್ಲುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರವಿಡೀ ಹುಡುಕಾಟ ನಡೆಸಿತ್ತು. ಶಾರ್ಪ್ ಶೂಟರ್ ಸಫ್ರಾಜ್ ಖಾನ್ ಈ ಆನೆಗೆ ಗುಂಡಿಟ್ಟಿ ಕೊಂದಿದ್ದಾರೆ. ಕಾರ್ಯಾ ಚರಣೆ ವೇಳೆ ಮೊದಲಿಗೆ ಈ ಆನೆ ತಪ್ಪಿಸಿಕೊಂಡಿತಾದರೂ, ಮತ್ತೆ ಹುಡುಕಿ 428 ಕ್ಯಾಲಿಬರ್ ಮ್ಯಾಗಮ್ ರೈಫಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಗುರುವಾರವೇ ಈ ಆನೆ ಹತ್ಯೆಯಾಗಿತ್ತು. ಆಗ ಸಫ್ರಾìಜ್ ಅರವಳಿಕೆ ಮದ್ದು ನೀಡುವ ಸಲುವಾಗಿ ಆನೆಯ ಕುತ್ತಿಗೆಗೆ ಗುರಿಯಾಗಿಸಿ ಶೂಟ್ ಮಾಡಿದ್ದರು. ಆದರೆ ಈ ಅರವಳಿಕೆ ಬುಲೆಟ್ ಆನೆಯ ಕುತ್ತಿಗೆಗೆ ತಗುಲಿತಾದರೂ, ಆನೆಗೆ ಏನೂ ಆಗಲಿಲ್ಲ. ಕಡೆಗೆ ಅದು ತಪ್ಪಿಸಿಕೊಂಡು ಹೋಗಿದೆ. ಶುಕ್ರವಾರ ಮತ್ತೆ ಅರಣ್ಯ ಸಿಬ್ಬಂದಿ ಜತೆಗೆ ಕಾರ್ಯಾಚರಣೆ ನಡೆಸಿ ಈ ಆನೆಯನ್ನು ಕೊಲ್ಲಲಾಗಿದೆ.
ಈ ಶಾರ್ಪ್ ಶೂಟರ್ ಈಗಾಗಲೇ 6 ಆನೆಗಳನ್ನು ಕೊಂದಿದ್ದು, ಇದು ಏಳನೇ ಆನೆ. ಅಲ್ಲದೆ ಐದು ಹುಲಿ ಮತ್ತು ಎಂಟು ಚಿರತೆಗಳನ್ನೂ ಇವರು ಕೊಂದಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಜನರ ಮೇಲೆ ದಾಳಿ ನಡೆಸುತ್ತಿದ್ದ ಈ ಎಲ್ಲಾ ಪ್ರಾಣಿಗಳನ್ನು ಕಾರ್ಯಾ ಚರಣೆ ಮೂಲಕವೇ ಇವರು ಕೊಂದಿದ್ದಾರೆ. ಮೃತಪಟ್ಟಿರುವ ಆನೆ 20-25 ವಯಸ್ಸಿ ನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದು ಜಾರ್ಖಂಡ್‌ನಲ್ಲಿ 11 ಮಂದಿ ಮತ್ತು ನೆರೆ ರಾಜ್ಯ ಬಿಹಾರದಲ್ಲಿ 4 ಮಂದಿಯನ್ನು ಹತ್ಯೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.