ಗಜಪಡೆಗೆ ಗಂಡಾಂತರ
Team Udayavani, Apr 17, 2018, 8:00 AM IST
ಮಾನವನ ಹಸ್ತಕ್ಷೇಪದಿಂದಾಗಿ ವನ್ಯ ಜೀವಿಗಳಿಗೆ ಒದಗಿರುವ ಅಪಾಯ ದಿನೇ ದಿನೆ ಹೆಚ್ಚುತ್ತಿದೆ. ಒಡಿಶಾದ ಝಾರ್‌ಸುಗುದಾ ಜಿಲ್ಲೆಯ ಆನೆಗಳ ಕಾರಿಡಾರ್ ನಲ್ಲಿ ಸೋಮವಾರ, ಕಾರಿಡಾರ್‌ನ ಮೂಲಕ ಹಾದು ಹೋಗುವ ಹೌರಾ – ಮುಂಬಯಿ ರೈಲು ಹಳಿಯನ್ನು ದಾಟುವ ವೇಳೆ ರೈಲಿಗೆ ಸಿಲುಕಿರುವ ಎರಡು ಗಂಡಾನೆ, ಎರಡು ಹೆಣ್ಣಾನೆ ದಾರುಣ ಸಾವನ್ನಪ್ಪಿವೆ. ನಮ್ಮಲ್ಲಿ ಆನೆಗಳ ಸಂತತಿ ಎಷ್ಟಿದೆ, ಹೆಚ್ಚಾಗುತ್ತಿರುವ ಅವುಗಳ ಸಾವಿನ ಸಂಖ್ಯೆ ಎಷ್ಟು ಕಳವಳಕಾರಿ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಸಂತತಿ ಕ್ಷೀಣ
ಕಳೆದೈದು ವರ್ಷಗಳಲ್ಲಿ ಆನೆಗಳ ಸಾವುಗಳು ಹೆಚ್ಚಾಗಿದ್ದು ಅವುಗಳ ಸಂತತಿ ಕ್ಷೀಣಿಸಿದೆ ಎನ್ನುತ್ತದೆ 2017ರ ಆನೆಗಳ ಗಣತಿ ವರದಿ. 2012ರಲ್ಲಿ ಆನೆಗಳ ಸಂಖ್ಯೆ 29,391ರಿಂದ 30,711ರಷ್ಟಿತ್ತು. ಆದರೆ, 2017ರಲ್ಲಿ ಇವುಗಳ ಸಂಖ್ಯೆ 23 ರಾಜ್ಯಗಳಲ್ಲಿ 27,312ರಷ್ಟಿದೆ. ಅಲ್ಲಿಗೆ, ಸುಮಾರು 3000 ಆನೆಗಳು ಮೃತವಾಗಿ ಶೇ. 10ರಷ್ಟು ಆನೆ ಸಂತತಿ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಶೇ. 60 ಆನೆಗಳ ತವರು!
ಅಂತಾರಾಷ್ಟ್ರೀಯ ಪರಿಸರ ಸಂರಕ್ಷಕರ ಒಕ್ಕೂಟ (ಐ.ಯು.ಸಿ.ಎನ್) ಘೋಷಿಸಿರುವಂತೆ, ಏಷ್ಯಾದಲ್ಲಿ ಆನೆಗಳ ಸಂಖ್ಯೆ 41,410ರಿಂದ 52,345ರಷ್ಟಿದ್ದು, ಇವುಗಳಲ್ಲಿ ಶೇ.60ರಷ್ಟು ಭಾರತದಲ್ಲೇ ಇವೆ. ಹಾಗಾಗಿ, ಭಾರತ ‘ಪ್ರಾಜೆಕ್ಟ್ ಎಲಿಫೆಂಟ್’ ಯೋಜನೆಯನ್ನು 1992ರಲ್ಲೇ ಆರಂಭಿಸಿದೆ. ಅದರಂತೆ, ದೇಶದ 29 ಪ್ರಾಂತ್ಯಗಳ, ಒಟ್ಟು 65,000 ಕಿ.ಮೀ. ವ್ಯಾಪ್ತಿಯನ್ನು ಆನೆಗಳ ಸಂರಕ್ಷಣಾ ವಲಯಗಳೆಂದು ಘೋಷಿಸಲಾಗಿದೆ.
ಕಳೆದ 8 ವರ್ಷಗಳಲ್ಲಿ ಆಗಿರುವ ಆನೆಗಳ ಸಾವು (ಗಣತಿ ಪ್ರಗತಿಯಲ್ಲಿದೆ) : 665
ವಿಷಪ್ರಾಶನದಿಂದ : 44
ರೈಲು ಅಪಘಾತ : 120
ರೈಲು ಅಪಘಾತ : 120
ಕಳ್ಳಸಾಗಣೆ ದಾರರಿಂದ ಹತ್ಯೆ : 101
ಆನೆಗಳ ಸಾವಿನ ವಾರ್ಷಿಕ ಲೆಕ್ಕ
2009-10 80
2010-11 106
2011-12 82
2012-13 105
2013-14 80
2014-15 80
2015-16 69
2016-17 44
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.