![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, May 1, 2022, 7:30 AM IST
ನವದೆಹಲಿ: ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ಬೆನ್ನಲ್ಲೇ ಜಗತ್ತಿನಾದ್ಯಂತ ಸಾರ್ವಜನಿಕರು ತಮಗೆ ಸಮರ್ಪಕ ಸೇವೆ ನೀಡದ ಕಂಪನಿಗಳ ಹೆಸರುಗಳನ್ನು ಸೂಚಿಸಿ, ಅವುಗಳನ್ನು ಖರೀದಿಸುವಂತೆ ಮಸ್ಕ್ ಮೇಲೆ ಒತ್ತಡ ಹೇರತೊಡಗಿದ್ದಾರೆ.
ಈ ಟ್ರೆಂಡ್‌ಗೆ ಈಗ ಭಾರತದಿಂದ ಕ್ರಿಕೆಟಿಗ ಶುಭಮನ್ ಗಿಲ್ ಕೂಡ ಸೇರ್ಪಡೆಯಾಗಿದ್ದು, ತಮಗೆ ಸಮಯಕ್ಕೆ ಸರಿಯಾಗಿ ಫುಡ್ ಡೆಲಿವರಿ ಮಾಡದ “ಸ್ವಿಗ್ಗಿ’ಯನ್ನು ಖರೀದಿಸುವಂತೆ ಅವರು ಎಲಾನ್ ಮಸ್ಕ್ ಗೆ ಕೋರಿಕೊಂಡಿದ್ದಾರೆ.
“ಮಸ್ಕ್ ಅವರೇ, ಪ್ಲೀಸ್ ಸ್ವಿಗ್ಗಿಯನ್ನು ಖರೀದಿಸಿ. ಆಗಲಾದರೂ ಅವರು ಸಮಯಕ್ಕೆ ಸರಿಯಾಗಿ ಡೆಲಿವರಿ ಕೊಡಬಹುದು’ ಎಂದು ಗಿಲ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮಸ್ಕ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಬೆಂಗಳೂರು ಮೂಲದ ಸ್ವಿಗ್ಗಿ ಮಾತ್ರ ಕೂಡಲೇ ಪ್ರತಿಕ್ರಿಯಿಸಿದೆ. “ಟ್ವಿಟರ್ ಇರಲಿ, ಇಲ್ಲದೇ ಇರಲಿ. ನಿಮ್ಮ ಆರ್ಡರ್‌ಗೆ ಸಂಬಂಧಿಸಿ ಆಲ್ ಈಸ್ ವೆಲ್ ಆಗಬೇಕೆಂದು ನಾವು ಬಯಸುತ್ತೇವೆ. ನಿಮ್ಮ ವಿವರಗಳೊಂದಿಗೆ ನಮಗೆ ಸಂದೇಶ ಕಳುಹಿಸಿ. ಯಾವುದೇ ಕಂಪನಿಯ ಸ್ವಾಧೀನಕ್ಕೂ ಮೊದಲೇ ನಾವು ನಿಮ್ಮನ್ನು ಕ್ಷಿಪ್ರವಾಗಿ ಸಂಪರ್ಕಿಸುತ್ತೇವೆ’ ಎಂದಿದೆ.
You seem to have an Ad Blocker on.
To continue reading, please turn it off or whitelist Udayavani.