ಕೋರ್ಟ್ನಲ್ಲಿ ಮುಜುಗರ: ಕೇಜ್ರಿವಾಲ್ ವಕೀಲ ಕೇಸಿನಿಂದ ಹಿಂದಕ್ಕೆ
Team Udayavani, Feb 16, 2018, 4:58 PM IST
ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಕೀಲ ಅನೂಪ್ ಜಾರ್ಜ್ ಚೌಧರಿ ಅವರು “ಆಪ್ ನಾಯಕನ ವಿರುದ್ಧ ವಿತ್ತ ಸಚಿವ ಅರುಣ್ ಜೇತ್ಲಿ ದಾಖಲಿಸಿರುವ 10 ಕೋಟಿ ರೂ.ಗಳ ಮಾನ ನಷ್ಟ ದಾವೆಯಲ್ಲಿ ನಾನಿನ್ನು ಕೋರ್ಟ್ನಲ್ಲಿ ಕೇಜ್ರಿವಾಲ್ ಅವರನ್ನು ಪ್ರತಿನಿಧಿಸುವುದಿಲ್ಲ’ ಎಂದು ಪತ್ರ ಮೂಲಕ ತಿಳಿಸಿದ್ದಾರೆ.
ಕೇಜ್ರಿವಾಲ್ ಕೇಸಿನಿಂದ ತಾನು ಹಿಂದೆ ಸರಿಯುತ್ತಿರುವುದಾಗಿ ಹೇಳಿರುವ ಚೌಧರಿ ಅವರು “ಕೇಜ್ರಿವಾಲ್ ನನಗೆ ಕೊಟ್ಟಿರುವ ಅಪರ್ಯಾಪ್ತ ವಿವರಗಳಿಂದಾಗಿ ನಾನು ಫೆ.12ರಂದು ಕೋರ್ಟಿನಲ್ಲಿ ಇರಿಸು ಮುರಿಸಿನ ಸ್ಥಿತಿಯನ್ನು ಎದುರಿಸಬೇಕಾಗಿ ಬಂತು’ ಎಂದು ಹೇಳಿದ್ದಾರೆ.
ಚೌಧರಿ ಅವರಿಗಿಂತ ಮೊದಲು ರಾಮ್ ಜೇಠ್ಮಲಾನಿಅವರು ಕೂಡ ಕೇಜ್ರಿವಾಲ್ ಕೇಸಿನಲ್ಲಿ ತಾನಿನ್ನು ಕೋರ್ಟಿಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದರು. ತಾನು ಅರುಣ್ ಜೇತ್ಲಿ ಗೆ “ಕ್ರೂಕ್’ ಎಂದು ಕರೆಯುವಂತೆ ಹೇಳಿಲ್ಲ ಎಂದು ಕೇಜ್ರಿವಾಲ್ ಸುಳ್ಳು ಹೇಳಿರುವ ಕಾರಣ ತಾನು ಕೇಸಿನಿಂದ ಹಿಂದೆ ಸರಿಯುತ್ತಿರುವುದಾಗಿ ಜೇಠ್ಮಲಾನಿ ನೀಡಿದ್ದರು.
ಮಾತ್ರವಲ್ಲದೆ ಕೇಜ್ರಿವಾಲ್ಗೆ ನಾನು ಚಾರ್ಜ್ ಮಾಡಿದ್ದ 2 ಕೋಟಿ ರೂ. ಶುಲ್ಕವನ್ನು ಮಾಫಿ ಮಾಡಬಲ್ಲೆ; ಏಕೆಂದರೆ ನಾನು ಸಾವಿರಾರು ಜನರಿಗೆ ಉಚಿತವಾಗಿ ವಕಾಲತ್ ಮಾಡಿದವನಾಗಿದ್ದೇನೆ ಎಂದು ಜೇಠ್ಮಲಾನಿ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.