Anantnag: 100 ಗಂಟೆಯಾದರೂ ಮುಗಿಯದ ಎನ್ ಕೌಂಟರ್; ಕಾಡನ್ನು ಸುತ್ತುವರಿದ ಸೇನೆ
Team Udayavani, Sep 17, 2023, 12:13 PM IST
ಅನಂತನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನಲ್ಲಿ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್‌ಕೌಂಟರ್ ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ಯಾರಾ ಕಮಾಂಡೋಗಳು ಸೇರಿದಂತೆ ಸಾವಿರಾರು ಸೈನಿಕರು ಗಡೋಲ್ ನ ದಟ್ಟ ಅರಣ್ಯದೊಳಗೆ ಅಂತ್ಯವಿಲ್ಲದ ಗುಂಡಿನ ಚಕಮಕಿಯಲ್ಲಿ ತೊಡಗಿದ್ದಾರೆ.
100 ಗಂಟೆಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ಎನ್ ಕೌಂಟರ್ ಬುಧವಾರ ಪ್ರಾರಂಭವಾಗಿತ್ತು. ಭಯೋತ್ಪಾದಕರನ್ನು ತಟಸ್ಥಗೊಳಿಸುವ ಪ್ರಯತ್ನದಲ್ಲಿ ಸೇನೆಯ ಇಬ್ಬರು ಮತ್ತು ಒಬ್ಬ ಪೊಲೀಸ್ ಸೇರಿದಂತೆ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದಾರೆ.
ಎರಡರಿಂದ ಮೂರು ಭಯೋತ್ಪಾದಕರಿದ್ದು, ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂದು ನಂಬಲಾಗಿದೆ. ದಟ್ಟವಾದ ಮತ್ತು ಕಡಿದಾದ ಕಾಡಿನಲ್ಲಿ ಯುದ್ಧಕ್ಕೆ ಅನುಕೂಲಕರ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳನ್ನು ಎದುರಿಸಲು ಭಯೋತ್ಪಾದಕರು ಬಳಸುತ್ತಿರುವ ಹೊಸ ಮಾದರಿಯನ್ನು ಇದು ಸೂಚಿಸುತ್ತದೆ.
ಈ 100 ಗಂಟೆಗಳಲ್ಲಿ, ಯೋಧರು ನೂರಾರು ಮೋಟಾರು ಶೆಲ್ ಗಳು ಮತ್ತು ರಾಕೆಟ್ ಗಳನ್ನು ಹಾರಿಸಿದ್ದಾರೆ. ಹೈಟೆಕ್ ಉಪಕರಣಗಳೊಂದಿಗೆ ಶಂಕಿತ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅಲ್ಲದೆ ಸುಧಾರಿತ ಡ್ರೋನ್ ಗಳನ್ನು ಬಳಸಿಕೊಂಡು ಸ್ಫೋಟಕಗಳನ್ನು ಬೀಳಿಸಿದ್ದಾರೆ.
ಪ್ರಶಾಂತವಾದ ಆಲ್ಪೈನ್ ಕಾಡುಗಳಲ್ಲಿ ಕಳೆದ ಐದು ದಿನಗಳಿಂದ ಜೋರಾದ ಸ್ಫೋಟಗಳು ಮತ್ತು ಭಾರೀ ಗುಂಡಿನ ಸದ್ದು ಪ್ರತಿಧ್ವನಿಸುತ್ತಿದೆ.
ಸೇನೆಯ ನಾರ್ದರ್ನ್ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಎನ್‌ಕೌಂಟರ್ ಸ್ಥಳಕ್ಕೆ ಭೇಟಿ ನೀಡಿದ್ದು, ಭಯೋತ್ಪಾದಕರ ವಿರುದ್ಧ ಸೈನಿಕರು ಡ್ರೋನ್‌ಗಳು ಮತ್ತು ಫೈರ್‌ಪವರ್ ಸೇರಿದಂತೆ ಸುಧಾರಿತ ಸಾಧನಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಕುರಿತು ವಿವರಿಸಿದರು.
OP GAROL#LtGenUpendraDwivedi #ArmyCdr, Northern Command reviewed the operational situation on the ongoing operations at #Kokernag forest area in #Anantnag. He was briefed by the ground commanders on the High Intensity Operations in which Hi-tech Equipment is being used for… pic.twitter.com/MggzlYb2Lh
— NORTHERN COMMAND – INDIAN ARMY (@NorthernComd_IA) September 16, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.