![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Nov 9, 2018, 11:38 AM IST
ಹೊಸದಿಲ್ಲಿ : ದೇಶದ ಶತ್ರು ವ್ಯಕ್ತಿಗಳು ಮತ್ತು ಕಂಪೆನಿಗಳಿಗೆ ಸೇರಿರುವ ಮತ್ತು ಹಲವು ದಶಕಗಳಿಂದ ಬಳಸಲ್ಪಡದೆ ನಿಷ್ಕ್ರಿಯವಾಗಿ ಉಳಿದಿರುವ ಸುಮಾರು 3,000 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಿ ಅದರಿಂದ ಸಿಗುವ ಹಣವನ್ನು ದೇಶದ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಆಫ್ ಇಂಡಿಯಾ (ಸಿಇಪಿಐ) ವಶದಲ್ಲಿ ಒಟ್ಟು 996 ಕಂಪೆನಿಗಳ ಸುಮಾರು 20,323 ಶೇರುದಾರರರ 6,50,75,877 ಶೇರುಗಳು ಇವೆ. ಇವುಗಳ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 3,000 ಕೋಟಿ ರೂ. ಇದೆ. ಈ ಶೇರುಗಳು ಹಲವು ದಶಕಗಳಿಂದ ನಿಷ್ಕ್ರಿಯವಾಗಿ ಸಿಇಪಿಐ ಕಸ್ಟಡಿಯಲ್ಲಿ ಉಳಿದಿವೆ. 996 ಕಂಪೆನಿಗಳ ಪೈಕಿ 588 ಕಂಪೆನಿಗಳು ಈಗಲೂ ಕ್ರಿಯಾಶೀಲವಾಗಿವೆ. ಈ ಪೈಕಿ 139 ಕಂಪೆನಿಗಳು ಲಿಸ್ಟೆಡ್ ಕಂಪೆನಿಗಳಾಗಿದ್ದು ಉಳಿದವು ಅನ್‌ಲಿಸ್ಟೆಡ್ ಕಂಪೆನಿಗಳಾಗಿವೆ.
ಈ ಶೇರುಗಳ ಮಾರಾಟ ಪ್ರಕ್ರಿಯೆಗೆ ಹಣಕಾಸು ಸಚಿವಾಲಯ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೈವೇ ಹಾಗೂ ಗೃಹ ಸಚಿವರ ಅಧ್ಯಕ್ಷತೆಯ ಪರ್ಯಾಯ ವ್ಯವಸ್ಥೆ (ಎಎಂ) ಅನುಮೋದನೆ ನೀಡಬೇಕಿದೆ.
You seem to have an Ad Blocker on.
To continue reading, please turn it off or whitelist Udayavani.