Mumbai ಅಟಲ್ ಸೇತುವಿನಿಂದ ಜಿಗಿದು ಎಂಜಿನಿಯರ್ ಆತ್ಮಹತ್ಯೆ; ವೀಡಿಯೋ
Team Udayavani, Jul 26, 2024, 6:51 AM IST
ಮುಂಬಯಿ: ಮುಂಬಯಿಯ ಅಟಲ್ ಸೇತುವಿನಿಂದ ಧುಮುಕಿ ಟೆಕ್ಕಿ ಕೆ. ಶ್ರೀನಿವಾಸ್ ಎಂಬ ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಿನಲ್ಲಿ ಆಗಮಿಸಿದ ಅವರು ಈ ಸೇತುವೆಯಿಂದ ಹಾರಿದ ವೀಡಿಯೋ ವೈರಲ್ ಆಗಿದೆ. ಅವರು ಹಣಕಾಸಿನ ತೊಂದರೆಗೆ ಒಳಗಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮುಂಬೈ ಸಮೀಪದ ಡೊಂಬಿವಿಲಿಯ 38 ವರ್ಷದ ಇಂಜಿನಿಯರ್ ಕೆ. ಶ್ರೀನಿವಾಸ್ ಬುಧವಾರ ಅಟಲ್ ಸೇತು ಸಮುದ್ರ ಸೇತುವೆಯಿಂದ ಜಿಗಿದಿದ್ದಾರೆ. ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸೇತುವೆ ಮೇಲೆ ಅಳವಡಿಸಲಾಗಿದ್ದ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ.
He came, stopped the car and jumped into the sea water from Atal Setu#MumbaiRains pic.twitter.com/5kpad2qP6U
— Kedar (@shintre_kedar) July 25, 2024
ಘಟನೆಯ ವೀಡಿಯೋದಲ್ಲಿ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಎಂದೂ ಕರೆಯಲ್ಪಡುವ ಅಟಲ್ ಸೇತು ಮೇಲೆ ಮಧ್ಯಾಹ್ನ 12.30 ರ ಸುಮಾರಿಗೆ ಕಪ್ಪು ಕಾರು ಬರುತ್ತದೆ. ಚಾಲಕನು ಕಾರಿನಿಂದ ಇಳಿದು, ರೇಲಿಂಗ್ ಕಡೆಗೆ ನಡೆದುಕೊಂಡು, ಜಿಗಿಯುತ್ತಿರುವುದನ್ನು ಕಾಣಬಹುದು.
ಕೆ. ಶ್ರೀನಿವಾಸ್ ನದ್ದು ಆತ್ಮಹತ್ಯೆ ಮಾಡಿಕೊಳ್ಳುವ ಎರಡನೇ ಪ್ರಯತ್ನವಾಗಿತ್ತು. 2023 ರಲ್ಲಿ ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಫ್ಲೋರ್ ಕ್ಲೀನರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಗಮನಾರ್ಹವಾಗಿ, ಈ ಘಟನೆಯು ಅಟಲ್ ಸೇತುವಿನಲ್ಲಿ ನಡೆದ ಆತ್ಮಹತ್ಯೆಯ ಎರಡನೇ ಪ್ರಕರಣವಾಗಿದೆ. ಈ ವರ್ಷದ ಆರಂಭದಲ್ಲಿ, ಮಾರ್ಚ್ 20 ರಂದು ಮಹಿಳಾ ವೈದ್ಯೆಯೊಬ್ಬರು ಸೇತುವೆಯಿಂದ ಹಾರಿ ಪ್ರಾಣ ಕಳೆದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.