ಬೆಳ್ಳಂದೂರು ಕೆರೆ ಭಾಗದಲ್ಲಿ ಪರಿಸರಾತ್ಮಕ ತುರ್ತು ಪರಿಸ್ಥಿತಿ
Team Udayavani, Jun 15, 2018, 11:47 AM IST
ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಪರಿಸರಾತ್ಮಕ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ರಚಿಸಿದ ಸಮಿತಿ ಹೇಳಿದೆ. ಜತೆಗೆ ಕೆರೆಯಲ್ಲಿ 1 ಮಿಲಿ ಲೀಟರ್ ಪ್ರಮಾಣದಷ್ಟು ಕೂಡ ಶುದ್ಧ ನೀರು ಸಿಗುವುದಿಲ್ಲ. ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆರೆಗೆ ಅವ್ಯಾಹತವಾಗಿ ಶುದ್ಧಗೊಳ್ಳದ ಕೊಳಚೆ ನೀರು ಸೇರುತ್ತಿದೆ.
ಹೀಗಾಗಿ ಅದು ಉದ್ಯಾನ ನಗರಿಯ ಅತ್ಯಂತ ದೊಡ್ಡ ಕೊಳಚೆ ಟ್ಯಾಂಕ್ ಆಗಿ ಪರಿವರ್ತನೆಯಾಗುತ್ತಿದೆ ಎಂದು ಎನ್‌ಜಿಟಿಗೆ ಗುರುವಾರ ಸಲ್ಲಿಸಿರುವ ವರದಿಯಲ್ಲಿ ಪ್ರಬಲವಾಗಿ ಟೀಕಿಸಲಾಗಿದೆ. ಈ ಬಗ್ಗೆ ಕೂಡಲೇ ಗಮನ ಹರಿಸದೇ ಇದ್ದಲ್ಲಿ ಅದು ಜ್ವಲಂತ ಸಮಸ್ಯೆಯಾಗಿ ಪರಿಣಮಿಸಲಿದೆ ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಕಟ್ಟಡ ನಿರ್ಮಾಣ, ಬಳಕೆಗೆ ಯೋಗ್ಯವಲ್ಲದ ತ್ಯಾಜ್ಯಗಳನ್ನು ಕೆರೆಗೆ ಹಾಕುತ್ತಿರುವ ಬಗ್ಗೆ ಸಂಗ್ರಹಿಸಲಾಗಿರುವ ನೀರಿನ ಮಾದರಿಯ ಅಧ್ಯಯನದಿಂದ ವ್ಯಕ್ತವಾಗಿದೆ. ಇದರಿಂದಾಗಿ ಕೆರೆಯ ಗಾತ್ರ ಕೂಡ ಕಿರಿದಾಗಿದ್ದು, ನೀರಿನ ಸಂಗ್ರಹಣೆಗೆ ಗಣನೀಯ ಪ್ರಮಾಣದಲ್ಲಿ ತೊಡಕಾಗಿದೆ. ಕೆರೆಯಲ್ಲಿ ಜಲಸಸ್ಯ ಮತ್ತು ಇತರ ಸೂಕ್ಷ್ಮ ಪ್ರಮಾಣದ ಸಸ್ಯಗಳು ಬೆಳೆದು ನಿಂತು ನೀರನ್ನು ಕಲುಷಿತಗೊಳಿಸುತ್ತಿವೆ.
ಬೆಳ್ಳಂದೂರು ಕೆರೆಯನ್ನು ಪರಿಶೀಲಿಸಲು ತೆರಳಿದ್ದ ಸಂದರ್ಭದಲ್ಲಿ ಕೆರೆಗೆ ಯಾವುದೇ ರೀತಿಯಲ್ಲಿ ಶುದ್ಧಗೊಳಿಸದ ನೀರನ್ನು ಅವ್ಯಾಹತವಾಗಿ ಬಿಡಲಾಗುತ್ತಿದೆ. ಆಮೂಲಾಗ್ರವಾಗಿ ಪರಿಶೀಲನೆ ನಡೆಸಿದ ಬಳಿಕ ಕೆರೆಯಲ್ಲಿ ಒಂದೇ ಒಂದು ಬಿಂದಿಗೆ ನೀರು ಕೂಡ ಶುದ್ಧವಾಗಿಲ್ಲ ಎಂದು ಕಂಡುಕೊಳ್ಳಲಾಗಿದೆ. ಅಲ್ಲಿ ಘನತ್ಯಾಜ್ಯ, ಹೊಲಸು, ಕಳೆ ಸೇರಿದಂತೆ ಅನಪೇಕ್ಷಿತ ವಸ್ತುಗಳು ತುಂಬಿರುವುದು ಕಂಡು ಬಂದಿದೆ.
ಹೀಗಾಗಿ ಬೆಳ್ಳಂದೂರು ಕೆರೆಯಲ್ಲಿ ಪರಿಸರಾತ್ಮಕ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎನ್‌ಜಿಟಿ 2016 ಆ.12ರಂದು ನ್ಯಾಯವಾದಿಗಳಾದ ರಾಜ್ ಪಂಜವಾನಿ, ಸುಮೀರ್ ಸೋಧಿ ಹಾಗೂ ರಾಹುಲ್ ಚೌಧರಿ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ.
12 ಬಾರಿ ಬೆಂಕಿ: 2016ರ ಆ.12ರಂದು ಮೊದಲ ಬಾರಿಗೆ ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಇದು ವರೆಗೆ ಸುಮಾರು 12 ಬಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸಮಿತಿ ಹೇಳಿದೆ.
ಹಲವು ಶಿಫಾರಸುಗಳು: ಕೆರೆ ದಂಡೆಯ ಸೂಕ್ತ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಈ ಮೂಲಕ ಕಟ್ಟಡ ನಿರ್ಮಾಣ ತ್ಯಾಜ್ಯ ಹಾಕದಂತೆ ತಡೆಯಲು ಕ್ರಮ ಕೈಗೊಳ್ಳಬಹುದು. ತ್ಯಾಜ್ಯಗಳನ್ನು ಹಾಕುವ ಮೂಲಕ ಕೆರೆ ಒತ್ತುವರಿ ತಡೆಯಲು ಭದ್ರತಾ ಸಿಬ್ಬಂದಿ ನೇಮಿಸಲೂ ಅದು ಸಲಹೆ ಮಾಡಿದೆ.
ಇದರ ಜತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಇತರ ಸಂಸ್ಥೆಗಳಲ್ಲಿನ ಅನುಭವಿ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲೂ ಸಮಿತಿ ಶಿಫಾರಸು ಮಾಡಿದ್ದು, ಅದರ ಸಲಹೆಯನ್ನು ಕಡ್ಡಾಯವಾಗಿ ಜಾರಿ ಮಾಡಬೇಕೆಂದು ಸೂಚಿಸಿದೆ.
ವರ್ತೂರು ಕೆರೆ ಸ್ಥಿತಿ ಬದಲಿಲ್ಲ: ಎನ್‌ಜಿಟಿ ಸಮಿತಿ ವರ್ತೂರು ಕೆರೆಯ ಸ್ಥಿತಿಯ ಬಗ್ಗೆಯೂ ಆಘಾತ ವ್ಯಕ್ತಪಡಿಸಿದೆ. “ಬೆಳ್ಳಂದೂರು ಕೆರೆಯಂತೆ ವರ್ತೂರು ಕೆರೆಯ ಸ್ಥಿತಿಯೂ ಹಾಗೇ ಆಗಿದೆ. ಕಟ್ಟಡ ನಿರ್ಮಾಣ ಮತ್ತು ಕಟ್ಟಡ ಕೆಡವಿದ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಪ್ರತಿ ದಿನ 480 ಮಿಲಿಯನ್ ಲೀಟರ್ ಕೊಳಚೆ ನೀರು ಬೆಳ್ಳಂದೂರು ಕೆರೆಯಿಂದ ವರ್ತೂರು ಕೆರೆಗೆ ಹರಿಯುತ್ತದೆ.
ಇದಲ್ಲದೆ ಸ್ಥಳೀಯವಾಗಿ ಉಂಟಾಗುವ 60-70 ಮಿಲಿಯನ್ ಲೀಟರ್ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಅದರ ಸ್ಥಿತಿ ಬೆಳ್ಳಂದೂರಿಗಿಂತ ಕೆಟ್ಟದಾಗಿದೆ. ಪರಿಸರಕ್ಕೆ ಹಾನಿ ಉಂಟಾಗಲಿದೆ ಎಂಬ ವಿಚಾರವನ್ನೂ ಗಮನಿಸದೆ ತ್ಯಾಜ್ಯವನ್ನು ಅಲ್ಲಿಗೆ ಸುರಿಯಲಾಗುತ್ತದೆ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಕಟ‚rಡ ತ್ಯಾಜ್ಯಗಳನ್ನು ಹಾಕಿಯೇ ಕೆರೆಯ ಮೂಲಕವೇ ರಸ್ತೆ ನಿರ್ಮಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಪೈಪ್ ಲೈನ್ ಹಾಕುವ ನೆಪದಲ್ಲಿಯೂ ಕಟ‚rಡ ನಿರ್ಮಾಣ ತ್ಯಾಜ್ಯಗಳನ್ನು ಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.