EPF ಬಡ್ಡಿ ದರ ಶೇ.8.25ಕ್ಕೇರಿಕೆ: 3 ವರ್ಷಗಳಲ್ಲೇ ಗರಿಷ್ಠ
Team Udayavani, Feb 11, 2024, 5:55 AM IST
ನವದೆಹಲಿ: ಭವಿಷ್ಯ ನಿಧಿ ಚಂದಾದಾರರಿಗೆ ಇಪಿಎಫ್ಒ ಸಿಹಿಸುದ್ದಿ ನೀಡಿದೆ. 2023-24ರ ನೌಕರರ ಭವಿಷ್ಯ ನಿಧಿ(ಇಪಿಎಫ್) ಠೇವಣಿ ಮೇಲೆ ಮೂರು ವರ್ಷಗಳಲ್ಲೇ ಗರಿಷ್ಠ ಅಂದರೆ ಶೇ.8.25 ಬಡ್ಡಿ ದರ ನಿಗದಿಪಡಿಸಿದೆ.
ಕಳೆದ ವರ್ಷದ ಮಾರ್ಚ್‌ನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಇಪಿಎಫ್ ಮೇಲಿನ ಬಡ್ಡಿ ದರವನ್ನು ಸ್ವಲ್ಪಮಟ್ಟಿಗೆ ಅಂದರೆ ಶೇ.8.15ಕ್ಕೆ ಏರಿಸಿತ್ತು. 2021-22ರಲ್ಲಿ ಇದು ಶೇ.8.10 ಆಗಿತ್ತು.
2020-21ರಲ್ಲಿ ಬಡ್ಡಿ ದರ ಶೇ.8.5 ಆಗಿತ್ತು. ಆದರೆ, 2022ರ ಮಾರ್ಚ್‌ನಲ್ಲಿ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿ ದರವನ್ನು ಸುಮಾರು 4 ದಶಕಗಳಲ್ಲೇ ಅತ್ಯಂತ ಕನಿಷ್ಠಕ್ಕೆ ಅಂದರೆ ಶೇ.8.1ಕ್ಕೆ ಇಳಿಸಿ ಇಪಿಎಫ್ಒ ಆದೇಶ ಹೊರಡಿಸಿತ್ತು. ಇದು 1977-78ರ ನಂತರದ ಅತಿ ಕನಿಷ್ಠ ಬಡ್ಡಿ ದರ ಎಂದು ಪರಿಗಣಿಸಲ್ಪಟ್ಟಿತ್ತು.
ಈಗ ಶನಿವಾರ ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ನೇತೃತ್ವದಲ್ಲಿ ನಡೆದ ಇಪಿಎಫ್ಒ ಟ್ರಸ್ಟಿಗಳ ಸಭೆಯಲ್ಲಿ 2023-24ರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿಯನ್ನು ಶೇ.8.25ಕ್ಕೇರಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.
ಬಡ್ಡಿ ದರ
2023-24ರಲ್ಲಿ – ಶೇ.8.25
2022-23ರಲ್ಲಿ – ಶೇ.8.15
2021-22ರಲ್ಲಿ – ಶೇ.8.1
2020-21ರಲ್ಲಿ- ಶೇ.8.5
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.