![Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ](https://www.udayavani.com/wp-content/uploads/2024/12/siddeshwara-415x252.jpg)
ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೇ 3ರವರೆಗೆ ಅವಕಾಶ
Team Udayavani, Feb 28, 2023, 7:15 AM IST
![ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೇ 3ರವರೆಗೆ ಅವಕಾಶ](https://www.udayavani.com/wp-content/uploads/2023/02/pf-620x428.jpg)
ಹೊಸದಿಲ್ಲಿ: ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅನ್ವಯ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದ್ದ ಹಳೆಯ ಪಿಂಚಣಿದಾರರಿಗೆ ಇಪಿಎಫ್ಒ ಸಿಹಿಸುದ್ದಿ ನೀಡಿದೆ.
ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಇದ್ದ ಮಾರ್ಚ್ 3ರ ಗಡುವನ್ನು 2 ತಿಂಗಳ ಕಾಲ ವಿಸ್ತರಿಸ ಲಾಗಿದ್ದು, ಮೇ 3ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ವರ್ಷದ ನ.4ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ, ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಅರ್ಹ ಸದಸ್ಯರಿಗೆ 4 ತಿಂಗಳ ಕಾಲಾ ವ ಕಾಶ ನೀಡುವಂತೆ ಸೂಚಿಸಿತ್ತು. ಅದರಂತೆ ಈ ಅವಧಿ ಮಾ.3ರಂದು ಕೊನೆಗೊಳ್ಳುವುದ ರಲ್ಲಿತ್ತು. ಆದರೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಈ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅಧಿಕ ಪಿಂಚಣಿಗೆ ಪಡೆಯಬೇಕೆಂದರೆ ಅರ್ಹ ಚಂದಾದಾರರು ತಮ್ಮ ಉದ್ಯೋಗದಾತರೊಂದಿಗೆ ಜಂಟಿಯಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಪ್ರತಿಯೊಂದು ಅರ್ಜಿಯನ್ನೂ ನೋಂದಣಿ ಮಾಡಿಕೊಂಡು, ಡಿಜಿಟಲ್ ರೂಪದಲ್ಲಿ ದಾಖಲೀಕರಣ ಮಾಡಿ, ರಶೀದಿಯನ್ನು ಅರ್ಜಿದಾರನಿಗೆ ನೀಡಲಾಗುತ್ತದೆ. ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಅಧಿ ಕಾರಿ ಗಳು ಪ್ರತಿ ಅರ್ಜಿ ಯನ್ನೂ ಪರಿಶೀಲಿ ಸುತ್ತಾರೆ. ಅನಂತರ ತಮ್ಮ ನಿರ್ಧಾರದ ಕುರಿತು ಅರ್ಜಿದಾರರಿಗೆ ಇಮೇಲ್, ಅಂಚೆ ಅಥವಾ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡುತ್ತಾರೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
2014ರ ಸೆ.1ಕ್ಕೂ ಮೊದಲು ಇಪಿಎಫ್ಒ ಚಂದಾದಾರ ರಾಗಿದ್ದ ಮತ್ತು ಈ ದಿನಾಂಕದಂದು ಅಥವಾ ಅನಂತರವೂ ಅದರ ಸದಸ್ಯರಾಗಿ ಉಳಿದ ಉದ್ಯೋಗಿಗಳು.
5 ಸಾವಿರ ರೂ. ಅಥವಾ 6,500 ರೂ.ಗಳ ವೇತನ ಮಿತಿಯನ್ನು ಮೀರಿದ ವರಮಾನಕ್ಕೆ ಕೊಡುಗೆ (Contribute) ನೀಡಿರುವ ಚಂದಾದಾರರು ಮತ್ತು ಉದ್ಯೋಗದಾತರು.
ಈ ಹಿಂದೆ ಇಪಿಎಸ್ ಸದಸ್ಯರಾಗಿದ್ದಾಗ “ಜಂಟಿ ಆಯ್ಕೆ’ಯನ್ನು ಬಳಸದೇ ಇದ್ದಂಥ ಉದ್ಯೋಗಿಗಳು ಮತ್ತು ಉದ್ಯೋಗದಾತರು.
ಲೆಕ್ಕಾಚಾರ ಹೇಗೆ?
“(ಪಿಂಚಣಿಯುಕ್ತ ವೇತನ x ಪಿಂಚಣಿಯುಕ್ತ ಸೇವಾವಧಿ)/70′ ಎಂಬ ವಿಧಾನದ ಮೂಲಕ ಇಪಿಎಸ್ ಪಿಂಚಣಿ ಲೆಕ್ಕಾಚಾರ ಮಾಡಲಾಗುತ್ತದೆ. ನೀವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸದೇ ಇದ್ದರೆ, ನಿವೃತ್ತಿಯ ವೇಳೆ ಇದ್ದ ಸರಾಸರಿ 60 ತಿಂಗಳ ಪಿಂಚಣಿಯುಕ್ತ ವೇತನದ ಮೇಲೆ ಪಿಂಚಣಿಯನ್ನು ಲೆಕ್ಕ ಹಾಕಲಾಗುತ್ತದೆ. ಉದಾ- ನೀವು 25ನೇ ವಯಸ್ಸಿನಲ್ಲಿ ಇಪಿಎಸ್‌ಗೆ ಸೇರ್ಪಡೆಯಾಗಿ, 58ನೇ ವಯಸ್ಸಿನಲ್ಲಿ ನಿವೃತ್ತರಾದರೆ, ಪ್ರತೀ ತಿಂಗಳು 7,071ರೂ. ಪಿಂಚಣಿ ಪಡೆಯಲು ಅರ್ಹರಾಗುತ್ತೀರಿ (15,000 ರೂ. x 33/70).
ಇನ್ನು ನೀವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಿದರೆ, ನಿಮ್ಮ ನೈಜ ಪಿಂಚಣಿಯುಕ್ತ ವೇತನ ಮತ್ತು ತುಟ್ಟಿ ಭತ್ತೆಯ ಆಧಾರದಲ್ಲಿ ಪಿಂಚಣಿಯನ್ನು ಲೆಕ್ಕ ಹಾಕಲಾಗುತ್ತದೆ. ಉದಾ- ಕಳೆದ 60 ತಿಂಗಳಲ್ಲಿ ನಿಮ್ಮ ಸರಾಸರಿ ಪಿಂಚಣಿಯುಕ್ತ ವೇತನ (ಮೂಲ ವೇತನ+ಡಿಎ) ನಿವೃತ್ತಿಯ ವೇಳೆ 40,000 ರೂ.ಗಳಾಗಿದ್ದರೆ, ಆಗ ನಿಮಗೆ 18,857 ರೂ. ಮಾಸಿಕ ಪಿಂಚಣಿ ದೊರೆಯಲಿದೆ (40,000 ರೂ. x 33/70).
ಟಾಪ್ ನ್ಯೂಸ್
![Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ](https://www.udayavani.com/wp-content/uploads/2024/12/siddeshwara-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್](https://www.udayavani.com/wp-content/uploads/2024/12/kejriwal-6-150x93.jpg)
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-150x92.jpg)
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
![Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು](https://www.udayavani.com/wp-content/uploads/2024/12/boat-2-150x83.jpg)
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
![Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು](https://www.udayavani.com/wp-content/uploads/2024/12/khalid-150x103.jpg)
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
![Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು](https://www.udayavani.com/wp-content/uploads/2024/12/Modi-9-150x83.jpg)
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
MUST WATCH
ಹೊಸ ಸೇರ್ಪಡೆ
![Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ](https://www.udayavani.com/wp-content/uploads/2024/12/siddeshwara-150x91.jpg)
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
![ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್](https://www.udayavani.com/wp-content/uploads/2024/12/kejriwal-6-150x93.jpg)
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
![BGV-Gruhalkmi](https://www.udayavani.com/wp-content/uploads/2024/12/BGV-Gruhalkmi-150x90.jpg)
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
![Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ](https://www.udayavani.com/wp-content/uploads/2024/12/noida-2-150x92.jpg)
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
![ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು](https://www.udayavani.com/wp-content/uploads/2024/12/CHIKKAMAGALURU-150x98.jpg)
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.