ಸರ್ವರಿಗೂ ಸಮಾನ ವೇಗ, ದರದ ಇಂಟರ್ನೆಟ್!
Team Udayavani, Nov 29, 2017, 7:25 AM IST
ನವದೆಹಲಿ: ದೇಶದ ಇಂಟರ್‌ನೆಟ್ ಬಳಕೆದಾರರಿಗೆ ಸಮಾನ ದರದ ಮತ್ತು ವೇಗದ ಇಂಟರ್ನೆಟ್ ಒದಗಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಕೈಗೊಂಡಿದ್ದು, ನೆಟ್ ನ್ಯೂಟ್ರಾಲಿಟಿಯನ್ನು ಬೆಂಬಲಿಸಿ ತನ್ನ ನೀತಿ ಪ್ರಕಟಿಸಿದೆ. ಇಂಟರ್ನೆಟ್ ಒದಗಿಸುವಲ್ಲಿ ಯಾವುದೇ ತಾರತಮ್ಯವನ್ನು ಟ್ರಾಯ್ ನಿಷೇಧಿಸಿದ್ದು, ಕೆಲವು ಅಪ್ಲಿಕೇಶನ್‌ಗಳು, ಅಂತರ್ಜಾಲ ತಾಣಗಳು ಮತ್ತು ಸೇವೆಗಳನ್ನು ತಡೆಹಿಡಿಯುವುದು ಅಥವಾ ಅವುಗಳ ವೇಗ ಕಡಿಮೆ ಮಾಡುವುದು ಮತ್ತು ಇತರ ಕೆಲವು ಅಪ್ಲಿಕೇಶನ್‌ಗಳು, ವೆಬ್‌ಸೈಟ್ ಹಾಗೂ ಸೇವೆಗಳಿಗೆ ಅತಿ ವೇಗದ ಇಂಟರ್ನೆಟ್ ಒದಗಿಸುವ ತಾರತಮ್ಯವನ್ನು ನಿಷೇಧಿಸಿದೆ. ಇದು ಬಹು ಚರ್ಚಿತ ವಿಷಯವಾಗಿದ್ದು, ಶಿಫಾರಸಿಗೂ ಮುನ್ನ ಟ್ರಾಯ್ ಹಲವು ಪರಿಣಿತರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದಿದೆ.
ಕಳೆದ ವರ್ಷವೇ ಈ ಸಂಬಂಧ ಮಧ್ಯಂತರ ಶಿಫಾರಸು ಹೊರಡಿಸಿದ್ದ ಟ್ರಾಯ್, ಅಂತಿಮವಾಗಿ ನಿರ್ಧಾರ ಕೈಗೊಳ್ಳಲು ಮತ್ತು ಹೆಚ್ಚಿನ ಸಲಹೆ ಪಡೆಯಲು ಕಾಲಾವಕಾಶ ಪಡೆದಿತ್ತು. ಈಗ ತನ್ನ ಶಿಫಾರಸುಗಳನ್ನು ದೂರಸಂಪರ್ಕ ಸಚಿವಾಲಯಕ್ಕೆ ಕಳುಹಿಸಲಿದ್ದು, ಸಚಿವಾಲಯ ಇದನ್ನು ಪರಿಶೀಲಿಸಲಿದೆ. ಇದು ಅನುಮೋ ದನೆಗೊಂಡಲ್ಲಿ, ಯಾವುದೇ ಅಂತರ್ಜಾಲ ದಟ್ಟಣೆಯನ್ನು ಇಂಟರ್ನೆಟ್ ಸೇವಾ ಪೂರೈ ಕೆದಾರರು ತಡೆಹಿಡಿಯಲಾಗದು. ಇದು ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ, ಲ್ಯಾಪ್‌ಟಾಪ್, ಕಂಪ್ಯೂಟರುಗಳಿಗೂ ಅನ್ವಯಿಸುತ್ತದೆ. ಅಷ್ಟೇ ಅಲ್ಲ, ಹೆಚ್ಚು ಮೊತ್ತ ಪಾವತಿ ಮಾಡುವವರಿಗೆ ವೇಗದ ಇಂಟರ್ನೆಟ್ ಒದಗಿಸುವ ತಾರತಮ್ಯವನ್ನೂ ಮಾಡಲಾಗದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.