ಭಾರತದಲ್ಲಿ ಮಳೆಗೆ ಪ್ರತಿ ದಿನ 5 ಬಲಿ ; ಏಳು ದಶಕದಲ್ಲಿ 1 ಕೋಟಿಗೂ ಅಧಿಕ ಸಾವು


Team Udayavani, Jul 29, 2019, 7:24 PM IST

Calamity-726

ಮಣಿಪಾಲ: ಹವಾಮಾನ ಯಾವುದೇ ಸಂದರ್ಭದಲ್ಲ್ಲೂ ಕೋಪಿಸಿಕೊಂಡರೆ ಅದಕ್ಕೆ ಬಲಿಯಾಗುವುದು ಮಾತ್ರ ಜನ ಸಾಮಾನ್ಯರೇ. ಮಳೆ ಕೊರತೆಯಾಗಿ ಬರ ನಿರ್ಮಾಣವಾಗಿ ಒಂದಷ್ಟು ಜನ ಗುಳೆ ಹೋಗುತ್ತಾರೆ. ಕೆಲವರು ಸ್ಥಳಾಂತರಗೊಳ್ಳುವ ಸಾಮರ್ಥ್ಯವಿಲ್ಲದೆ ಬರಕ್ಕೆ ಬಲಿಯಾಗುತ್ತಾರೆ.

ಈ ನಡುವೆ ಕೃಷಿ ತೋಟಗಳಿಗೆ ಬಿಡಿ, ಕುಡಿಯಲು ನೀರಿಲ್ಲದೆ ಸಾಯುವವರು ಅನೇಕರು. ಇನ್ನು ಚಳಿಗಾಲ ಬಂತು ಎಂದಿಟ್ಟುಕೊಳ್ಳಿ, ದೇಶದ ಕೆಲವು ಪ್ರದೇಶಗಳಲ್ಲಿ ಮೈನಸ್ ಉಷ್ಟಾಂಶ ದಾಖಲಾಗುತ್ತದೆ. ಪರಿಣಾಮವಾಗಿ ಚಳಿಗೆ ನಡುಗಿ ಒಂದಷ್ಟು ಮಂದಿ ಮೃತಪಡುತ್ತಾರೆ. ಇನ್ನು ಸಿಡಿಲಿನ ಆಘಾತಕ್ಕೆ ಒಳಗಾದ ಜನರೂ ಇದ್ದಾರೆ.

ಇನ್ನು ಬೇಸಗೆಯಲ್ಲಿ ಆಗಸದತ್ತ ಮುಖ ಮಾಡುವ ಜನರೇ ಕಾಣಸಿಗುತ್ತಾರೆ. ಪೂರ್ವ ಮುಂಗಾರು ಸುರಿಯಲು ಇನ್ನೂ ಸಮಯವಿದ್ದರೂ ಮಳೆ ಇಲ್ಲ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತದೆ. ಇದು ತಪ್ಪಲ್ಲ. ಮಳೆ ಬಂತು. ‘ಧಾರಾಕಾರವಾಗಿ ಬಿಡದೇ ಸುರಿಯಲು ಆರಂಭವಾಯಿತು. ಜನರು ಇಲ್ಲಿ ಮತ್ತೆ ತೊಂದರೆಗೆ ಒಳಗಾಗುತ್ತಾರೆ. ನಗರಗಳ ಸ್ಲಂಗಳಲ್ಲಿ ವಾಸಿಸುವ ಜನ ಜೀವನ ಮಳೆ ಬಂದ ಸಂದರ್ಭ ಹೇಳತೀರದು.

ಮೂಲ ಸೌಕರ್ಯಗಳ ಕೊರತೆ ಎದುರಾಗಿ ಜನರು ವಾಸಿಸುತ್ತಿದ್ದ ಪ್ರದೇಶದತ್ತ ನೀರು ಹರಿಯುತ್ತದೆ. ನಿದ್ದೆಯಲ್ಲಿದ್ದ ಸಂದರ್ಭ ಅವರ ಮೇಲೆ ನೀರು ಹರಿದ ನಿದರ್ಶನಗಳೂ ಇವೆ. ಮಾತ್ರವಲ್ಲದೇ ನೀರಿಗೆ ಕೊಚ್ಚ ಹೋದ ಉದಾಹರಣೆಗಳೂ ಇವೆ. ಹೀಗೆ ಚಳಿಗಾಲ, ಮಳೆಗಾಲ ಮತ್ತು ಬೇಸಗೆಯಲ್ಲಿ ಬಲಿಯಾಗುವುದು ಮಾತ್ರ ಮುಗ್ಧ ಜನರು ಮತ್ತು ಅಮಾಯಕ ಪ್ರಾಣಿಗಳು.

6,585 ಜನ ಬಲಿ
ದೇಶದ ಕೆಲವು ಪ್ರದೇಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತದೆ. ಈ ವರ್ಷವೂ ಕೆಲವು ಭಾಗಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಳೆಯಾಗಿದೆ. ದೇಶದಲ್ಲಿ ಕಳೆದ 3 ವರ್ಷದಲ್ಲಿ ಈ ತಿಂಗಳಾಂತ್ಯಕ್ಕೆ ಸುಮಾರು 6,585 ಜನ ವಿವಿಧ ರೀತಿಯ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದ್ದಾರೆ. ಬಿರುಗಾಳಿ, ಪ್ರವಾಹ, ಭೂ ಕುಸಿತ ಮೊದಲಾದವುಗಳ ಪರಿಣಾಮವಾಗಿ ಜನ ಪ್ರಾಣ ತೆತ್ತಿದ್ದಾರೆ.

ಬಿಹಾರ ಮತ್ತು ಅಸ್ಸಾಂನಲ್ಲಿ ಕಳೆದ ವಾರ ಸಂಭವಿಸಿದ ತೀವ್ರ ಪ್ರವಾಹದಲ್ಲಿ 170 ಜನರು ಸಾವಿಗೀಡಾಗಿದ್ದಾರೆ. ಇಲ್ಲಿ 10 ಮಿಲಿಯನ್ ಜನರು ತೊಂದರೆಗೆ ಒಳಗಾಗಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ 204 ಪ್ರಾಣಿಗಳು ಬಲಿಯಾಗಿವೆ.

ಕಳೆದ ವರ್ಷ ಕೇರಳದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಿತ್ತು. 94 ವರ್ಷಗಳ ಬಳಿಕ ಕೇರಳ ಕಂಡ ಪ್ರವಾಹ ಅದಾಗಿತ್ತು. ಇಲ್ಲಿ 477 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಮೂರು ವರ್ಷದಲ್ಲಿ ಬಿಹಾರದಲ್ಲಿ 970, ಕೇರಳದಲ್ಲಿ 756, ಪಶ್ಚಿಮ ಬಂಗಾಲದಲ್ಲಿ 663, ಮಹಾರಾಷ್ಟ್ರದಲ್ಲಿ 522 ಮತ್ತು ಹಿಮಾಚಲ ಪ್ರದೇಶದಲ್ಲಿ 458 ಮಂದಿ ಅತಿ ವೃಷ್ಟಿಗೆ ಬಲಿಯಾಗಿದ್ದಾರೆ. ಈ ಅವಧಿಯಲ್ಲಿ ಸುಮಾರು 2 ಲಕ್ಷ ಕುಟುಂಬಗಳು ಹಾನಿಗೀಡಾಗಿವೆ. ಈ ವರ್ಷ ದೇಶದಲ್ಲಿ ಎಪ್ರಿಲ್ ಬಳಿಕ 496 ಮಂದಿ ಸಾವಿಗೀಡಾಗಿದ್ದಾರೆ.

64 ವರ್ಷದಲ್ಲಿ ಸುಮಾರು 1 ಕೋಟಿ ಸಾವು
1953ರ ಬಳಿಕ ದೇಶದಲ್ಲಿ ಸುಮಾರು 1 ಕೋಟಿಗೂ ಅಧಿಕ ಮಂದಿ ಮಳೆ ಮತ್ತು ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿದ್ದಾರೆ. 40 ಮಿಲಿಯನ್ ಹೆಕ್ಟರ್ ಭೂ ಪ್ರದೇಶಗಳು ಜಲಾವೃತವಾಗಿದೆ. ಕಳೆದ 3 ದಶಕಗಳಲ್ಲಿ 431 ಅಪಾಯದ ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.