![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Nov 27, 2023, 11:39 PM IST
ಭುವನೇಶ್ವರ: ಕಳೆದ 26 ವರ್ಷ ಗಳಿಂದಲೂ ಬಿಜು ಜನತಾ ದಳ (ಬಿಜೆಡಿ)ದ ಸಾರಥಿಯಾಗಿದ್ದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕೊನೆಗೂ ತಮ್ಮ “ರಾಜಕೀಯ ಉತ್ತರಾಧಿಕಾರಿ’ಯನ್ನು ಆಯ್ಕೆ ಮಾಡಿಕೊಂಡರೇ?
ಹೌದು ಎನ್ನುತ್ತಿವೆ ಮೂಲಗಳು. ನವೀನ್ ಪಟ್ನಾಯಕ್ ಅವರ ಆಪ್ತ, ನಿವೃತ್ತ ಐಎಎಸ್ ಅಧಿಕಾರಿ ವಿ. ಕಾರ್ತಿಕೇಯ ಪಾಂಡ್ಯನ್ ಅವರು ಸೋಮವಾರ ಅಧಿಕೃತವಾಗಿ ಬಿಜೆಡಿಗೆ ಸೇರ್ಪಡೆಯಾ ಗಿದ್ದಾರೆ. ಕಳೆದ ತಿಂಗಳವರೆಗೂ ಪಾಂಡ್ಯನ್ ಅವರು ಒಡಿಶಾ ಮುಖ್ಯ ಮಂತ್ರಿಯ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡ ಅವರು, ಒಡಿಶಾದ ಚೇರ್ಮನ್ 5ಟಿ (ಪರಿವರ್ತನೀಯ ಯೋಜನೆಗಳು) ಆಗಿ ನೇಮಕಗೊಳ್ಳುವ ಮೂಲಕ ಸಂಪುಟ ದರ್ಜೆ ಸಚಿವನ ಸ್ಥಾನ ವನ್ನು ಪಡೆದರು. ಸೋಮವಾರ ಅವರು ಭುವನೇಶ್ವರದಲ್ಲಿ ಇರುವ ಪಟ್ನಾಯಕ್ ನಿವಾಸದಲ್ಲಿ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ.
ಮುಂದಿನ ವರ್ಷದ ಜೂನ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯ ಲಿರುವ ಹಿನ್ನೆಲೆಯಲ್ಲಿ ಪಾಂಡ್ಯನ್ ಸೇರ್ಪ ಡೆ ಮಹತ್ವ ಪಡೆದಿದೆ. ಮುಂದಿನ ದಿನ ಗಳಲ್ಲಿ ಬಿಜೆಡಿಯಲ್ಲಿ ಅವರು ಎರಡನೇ ಅತ್ಯಂತ ಪ್ರಮುಖ ನಾಯಕ ಎಂಬ ಅಗ್ರ ಶ್ರೇಣಿಯಲ್ಲಿ ಬಿಂಬಿತರಾಗಲಿರುವುದು ಬಹುತೇಕ ಖಚಿತ ಎನ್ನುತ್ತಿವೆ ಮೂಲಗಳು. ಅವರ ನೇತೃತ್ವದಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆಗೆ ಪ್ರಚಾರ, ತಂತ್ರಗಾರಿಕೆ ನಡೆಯಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಪಾಂಡ್ಯನ್ ಅವರೇ ಪ್ರಧಾನ ಪಾತ್ರ ವಹಿಸಲಿದ್ದಾರೆ ಎಂದು ಬಿಜೆಡಿ ಮೂಲಗಳು ಹೇಳಿವೆ.
ಪಾಂಡ್ಯನ್ ಹುದ್ದೆ ಏನು?
ವಿ.ಕೆ. ಪಾಂಡ್ಯನ್ ಅವರಿಗೆ ಬಿಜೆಡಿಯಲ್ಲಿ ಯಾವ ಹುದ್ದೆ ಸಿಗಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಪಟ್ನಾಯಕ್ ಸರಕಾ ರದ ಈವರೆಗಿನ ಬಹುತೇಕ ಯೋಜ ನೆಗಳ ಹಿಂದಿನ ರೂವಾರಿ ಇವರೇ ಆಗಿದ್ದು, ಈಗ ಪಕ್ಷಕ್ಕೆ ಅಧಿಕೃತ ಪ್ರವೇಶ ಪಡೆದಿರುವ ಕಾರಣ ಎರಡನೇ ಅಗ್ರ ನಾಯಕನ ಹುದ್ದೆ ಸಿಗುವುದಂತೂ ಖಚಿತ ಎನ್ನುವುದು ಉನ್ನತ ಮೂಲಗಳ ವಾದ. 1997ರ ಡಿ. 26ರಂದು ಬಿಜು ಜನತಾ ದಳ ಸ್ಥಾಪನೆ ಮಾಡಿದ ದಿನದಿಂದ ನವೀನ್ ಪಟ್ನಾಯಕ್ ಅವರೇ ಅಧ್ಯ ಕ್ಷರಾಗಿ ಮುಂದುವರಿದಿದ್ದಾರೆ. ಅವರು ಅಧ್ಯಕ್ಷರಾಗಿದ್ದರೂ ಪಕ್ಷದ ವ್ಯವಹಾ ರಗಳನ್ನು ಪಾಂಡ್ಯನ್ ಅವರೇ ನೋಡಿ ಕೊಳ್ಳುವ ಸಾಧ್ಯತೆಗಳು ಅಧಿಕವಾಗಿವೆ.
ಭಿನ್ನಾಭಿಪ್ರಾಯ ಇಲ್ಲ
ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಮಾತ ನಾಡಿ ವಿ.ಕೆ. ಪಾಂಡ್ಯನ್ ಸೇರ್ಪ ಡೆಯಿಂದ ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿಲ್ಲ. ಅವರು ತಮಿಳು ನಾಡಿನವರು ಎಂಬ ಕಾರಣಕ್ಕೆ ಪಕ್ಷದಲ್ಲಿ ಅವರನ್ನು ಒಪ್ಪಿಕೊಳ್ಳುವುದು ಕಷ್ಟವಾ ಗಲಿದೆ ಎಂಬ ವಿಚಾರವೇ ಉದ್ಭವ ವಾಗುವುದಿಲ್ಲ ಎಂದರು.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.