ದೇವರ ಹಳೆಯ ಆಭರಣ ಪ್ರದರ್ಶನಕ್ಕೆ ನಾವು ಸಿದ್ಧ
Team Udayavani, May 22, 2018, 6:00 AM IST
ತಿರುಮಲ/ವಿಜಯವಾಡ: ತಿರುಪತಿ ವೆಂಕಟೇಶ್ವರ ದೇಗುಲದ ಪ್ರಧಾನ ಅರ್ಚಕ ಎ.ವಿ.ರಮಣ ದೀಕ್ಷಿತುಲುಗೆ ಕಡ್ಡಾಯ ನಿವೃತ್ತಿ ವಿಚಾರ ಹೊಸ ತಿರುವು ಪಡೆದುಕೊಂಡಿದೆ. ದೀಕ್ಷಿತುಲು ಆರೋಪ ಮಾಡಿದಂತೆ ಹಳೆಯ ಕಾಲದ ಆಭರಣಗಳು ನಾಪತ್ತೆಯಾಗಿಲ್ಲ. ಆಗಮ ಶಾಸ್ತ್ರದ ಪ್ರಕಾರ ಅವುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶ ಇದ್ದರೆ ಅದನ್ನೂ ನಡೆಸಲಾಗುತ್ತದೆ ಎಂದು ತಿರುಪತಿ ತಿರುಮಲ ದೇವಸ್ಥಾನಮ್ಸ್‌ನ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಲ್ ಹೇಳಿದ್ದಾರೆ.
“ಆಗಮ ಶಾಸ್ತ್ರದ ಪ್ರಕಾರ ದೇಗುಲದ ಆಭರಣಗಳನ್ನು ಪ್ರದ ರ್ಶನ ಮಾಡುವಂತೆ ಇಲ್ಲ. ಟಿಟಿಡಿ ಅವುಗಳನ್ನು ಡಿಜಿಟಲ್ ಮಾದರಿಗೆ ಪರಿವರ್ತಿಸಿ ಅವುಗಳ ಫೋಟೋಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲೂ ಸಿದ್ಧ’ ಎಂದಿದ್ದಾರೆ ಸಿಂಘಲ್. ಜತೆಗೆ, ಟಿಟಿಡಿ ಉನ್ನತ ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದಿದ್ದಾರೆ.
22 ವರ್ಷಗಳಿಂದ ಪ್ರಾಚೀನ ಆಭರಣಗಳು ಯಾವ ಸ್ಥಿತಿಯಲ್ಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಜತೆಗೆ ಟಿಟಿಡಿ ಚಿನ್ನಾಭರಣಗಳ ರಿಜಿಸ್ಟರ್‌ನಲ್ಲಿ ಪ್ರಸ್ತಾಪವಾಗಿರುವ ರೂಬಿ (ಮಾಣಿಕ್ಯ) ನಾಪತ್ತೆಯಾಗಿದೆ. ಅದೇ ಮಾದರಿಯ ಆಭರಣ ಜಿನೀವಾದಲ್ಲಿ ಶೀಘ್ರವೇ ಹರಾಜಾಗಲಿದೆ ಎಂಬ ದೀಕ್ಷಿತುಲು ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಂಘಲ್, ಟಿಟಿಡಿ ಉದ್ಯೋಗಿಗಳು ದೇಗುಲದ ಎಲ್ಲಾ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳುತ್ತಾರೆ. ಇಂಥ ಆರೋಪ ನೋವು ತರುತ್ತವೆ ಎಂದಿದ್ದಾರೆ. ವೆಂಕಟೇಶ್ವರ ದೇವರಿಗೆ ಅರ್ಪಿಸಲಾಗಿರುವ ರೂಬಿ 2001ರಲ್ಲಿ ನಡೆದಿದ್ದ ಬ್ರಹ್ಮೋತ್ಸವ ಗರುಡ ಸೇವೆಯ ವೇಳೆ ಒಡೆದು ಹೋಗಿತ್ತು. ಈ ಬಗ್ಗೆ ನ್ಯಾ.ಜಗನ್ನಾಥ ರಾವ್ ನೇತೃತ್ವದ ಆಯೋಗ ವರದಿಯನ್ನೂ ಸಲ್ಲಿಸಿತ್ತು. ಹುಡಿಯಾಗಿರುವ ರೂಬಿಯ ತುಂಡುಗಳು ದೇಗುಲದ ವಶದಲ್ಲಿಯೇ ಇದೆ ಎಂದಿದ್ದಾರೆ.
ಇದೇ ವೇಳೆ ಹೈದರಾಬಾದ್‌ನಲ್ಲಿ ಮಾತನಾ ಡಿದ ಎ.ವಿ.ರಮಣ ದೀಕ್ಷಿತುಲು, 1996ರ ಬಳಿಕ ಆಭರಣದ ಉಸ್ತುವಾರಿ ಸರ್ಕಾರಕ್ಕೆ ಸೇರಿದೆ. ನಂತರ ದಿನಗಳಲ್ಲಿ ಅವುಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಪ್ರತಿಭಟನೆ: ದೇಗುಲದ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಅವರಿಗೆ ಕಡ್ಡಾಯ ನಿವೃತ್ತಿ ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ದೀಕ್ಷಿತುಲು ಮಾಡಿದ್ದ ಆರೋಪಗಳ ಬಗ್ಗೆ ತನಿಖೆ ನಡೆಯಬೇಕು, ಆಭರಣಗಳ ವಿವರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿವೆ.
ಸುಪ್ರೀಂಗೆ ಅರ್ಜಿ: ಪ್ರಧಾನ ಅರ್ಚಕ ರಮಣ ದೀಕ್ಷಿತಲುರನ್ನು ವಜಾ ಮಾಡಿದ್ದನ್ನು ಖಂಡಿಸಿ ಮತ್ತು ಟಿಟಿಡಿ ಅಧಿಕಾರ ದುರುಪಯೋಗ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವುದಾಗಿ ಬಿಜೆಪಿ ನಾಯಕ ಡಾ.ಸುಬ್ರಮಣಿ ಯನ್ ಸ್ವಾಮಿ ಹೇಳಿದ್ದಾರೆ. ಹಣಕಾಸು ಅವ್ಯವ ಹಾರಗಳ ಬಗ್ಗೆ ನ್ಯಾಯಾಲಯದ ನೇತೃತ್ವದಲ್ಲಿ ಸಿಬಿಐ ತನಿಖೆ ನಡೆಸಲು ಒತ್ತಾಯಿಸುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಮೈಸೂರು ರಾಜರು ಕೊಟ್ಟಿದ್ದ ಮಾಣಿಕ್ಯ
ದೇಗುಲದ ವಶದಲ್ಲಿರುವ ರೂಬಿ (ಮಾಣಿಕ್ಯ) ಯನ್ನು 1945ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ದೇಗುಲಕ್ಕೆ ಕೊಡುಗೆಯಾಗಿ ನೀಡಿದ್ದರು. ಸದ್ಯ ಮಾರುಕಟ್ಟೆಯಲ್ಲಿ ಅದರ ಮೌಲ್ಯ 500 ಕೋಟಿ ರೂ. ಆಗಿರುವ ಸಾಧ್ಯತೆ ಇದೆ. ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಯಾಗಿದ್ದ ಐ.ವೈ.ಆರ್.ಕೃಷ್ಣ ರಾವ್ ಕೂಡ 2010ರಲ್ಲಿ ಆಂಧ್ರಪ್ರದೇಶ ಸರ್ಕಾರಕ್ಕೆ ವರದಿ ನೀಡಿ, ಒಡೆದು ಹೋಗಿರುವುದು ರೂಬಿಯೇ ಹೊರತು ಗುಲಾಬಿ ಬಣ್ಣದ ವಜ್ರ ಅಲ್ಲ ಎಂದು ವರದಿ ನೀಡಿದ್ದರು.
ಆಗಮ ಶಾಸ್ತ್ರದಲ್ಲಿ ದೇವರ ಆಭ ರಣ ಪ್ರದರ್ಶನ ಮಾಡಬಾರದು ಎಂದು ನಿಯಮ ಏನೂ ಇಲ್ಲ. ಆದರೆ ಸ್ಥಳೀಯವಾಗಿ ಇರುವಂಥ ಕ್ಷೇತ್ರ ಸಂಪ್ರದಾಯಗಳಿಗೆ ಅಪಚಾರವಾಗದಂತೆ ಪ್ರದರ್ಶನಕ್ಕೆ ಇರಿಸಬಹುದು. ಏಕೆಂದರೆ ದೇವರಿಗೆ ಆಭರಣ ತೊಡಿಸುವುದೂ ಪ್ರದರ್ಶನವಲ್ಲವೇ?
ಸುಬ್ಬಯ್ಯ ವಮುಡಿ, ವೈದಿಕ ವಿದ್ವಾಂಸರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.