ನಾಳೆಯಿಂದ ದುಬಾರಿ ದುನಿಯಾ: ಪರಿಷ್ಕೃತ ಜಿಎಸ್‌ಟಿ ದರ ಜಾರಿ
ಹಲವು ಸರಕು, ಸೇವೆಗಳು ಆಗಲಿವೆ ತುಟ್ಟಿ
Team Udayavani, Jul 17, 2022, 7:15 AM IST
ನವದೆಹಲಿ: ದಿನಬಳಕೆಯ ವಸ್ತುಗಳು, ಬ್ಯಾಂಕ್ ಸೇವೆ, ಆಸ್ಪತ್ರೆ, ಹೋಟೆಲ್‌ಗಳಿಗೆ ಹೆಚ್ಚು ಖರ್ಚು ಮಾಡಲು ರೆಡಿಯಾಗಿ!
ಹಲವು ಅಗತ್ಯ ವಸ್ತುಗಳು ಮತ್ತು ಸೇವೆಗಳ ಜಿಎಸ್‌ಟಿ ದರವನ್ನು ಏರಿಸಲು ಈಗಾಗಲೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಮಂಡಳಿ ನಿರ್ಧರಿಸಿದ್ದು, ಸೋಮವಾರದಿಂದಲೇ ಪರಿಷ್ಕೃತ ದರಗಳು ಜಾರಿಯಾಗಲಿವೆ.
ಜಿಎಸ್‌ಟಿ ದರ ಬದಲಾವಣೆಗೆ ಸಂಬಂಧಿಸಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಗುರುವಾರ ಅಧಿಸೂಚನೆಯನ್ನೂ ಹೊರಡಿಸಿದೆ. ಅದರಂತೆ, ಜು.18ರಿಂದ ಪರಿಷ್ಕೃತ ಜಿಎಸ್‌ಟಿ ಜಾರಿಗೆ ಬರಲಿದ್ದು, ಹಲವಾರು ಸರಕುಗಳು ಮತ್ತು ಸೇವೆಗಳು ದುಬಾರಿಯಾಗಲಿವೆ.
ಯಾವುದೆಲ್ಲ ದುಬಾರಿ?
ಪ್ಯಾಕ್ ಮಾಡಲಾದ ಮೊಸಲು, ಲಸ್ಸಿ, ಮಜ್ಜಿಗೆ (ಶೇ.5), ಅಟ್ಲಾಸ್ ಸೇರಿದಂತೆ ನಕ್ಷೆಗಳು, ಚಾರ್ಟ್‌ಗಳು, ದಿನಕ್ಕೆ 1 ಸಾವಿರ ರೂ.ಗಿಂತ ಕಡಿಮೆ ಶುಲ್ಕವಿರುವ ಹೋಟೆಲ್ ರೂಂಗಳು, ಚೆಕ್‌ಬುಕ್ ಅಥವಾ ಚೆಕ್ ಲೀಫ್ ವಿತರಣೆಗೆ ಬ್ಯಾಂಕುಗಳು ವಿಧಿಸುವ ಶುಲ್ಕ, ದಿನಕ್ಕೆ 5,000 ರೂ.ಗಿಂತ ಹೆಚ್ಚು ಶುಲ್ಕವಿರುವ ಆಸ್ಪತ್ರೆಯ ಕೊಠಡಿ(ಐಸಿಯು ಹೊರತುಪಡಿಸಿ), ಎಲ್‌ಇಡಿ ಲೈಟ್‌ಗಳು, ಎಲ್‌ಇಡಿ ಲ್ಯಾಂಪ್, ಬ್ಲೇಡ್ ಇರುವ ಕತ್ತರಿ, ಪೇಪರ್ ಚಾಕು, ಪೆನ್ಸಿಲ್ ಶಾರ್ಪ್‌ನರ್, ಬ್ಲೇಡು, ಚಮಚಗಳು, ಫೋರ್ಕ್, ಸ್ಕಿಮ್ಮರ್, ಕೇಕ್-ಸರ್ವರ್, ನೀರೆತ್ತುವ ಪಂಪ್, ಕೊಳವೆ ಬಾವಿಗೆ ಅಳವಡಿಸುವ ಟರ್ಬೈನ್ ಪಂಪ್, ಸಬ್‌ಮರ್ಸಿಬಲ್ ಪಂಪ್, ಬೈಸಿಕಲ್ ಪಂಪ್, ಬಿತ್ತನೆಬೀಜ, ಧಾನ್ಯಗಳು, ಗಿರಣಿಯಲ್ಲಿ ಅಥವಾ ಸಿರಿಧಾನ್ಯಗಳ ಕೆಲಸಕ್ಕೆ ಬಳಸುವ ಯಂತ್ರಗಳು ಇತ್ಯಾದಿ.
ಯಾವುದು ಅಗ್ಗ?
ರಕ್ಷಣಾ ಪಡೆಗಳ ಬಳಕೆಗಾಗಿ ಆಮದು ಮಾಡಲಾಗುವ ರಕ್ಷಣಾ ಸಲಕರಣೆಗಳು, ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ರೋಪ್‌ವೇ, ಸ್ಪ್ಲಿಂಟ್, ಶರೀರದ ಕೃತಕ ಭಾಗಗಳು, ದೇಹದೊಳಗೆ ಜೋಡಣೆ ಮಾಡಲಾಗುವಂಥ ವಸ್ತುಗಳು ಇತ್ಯಾದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.