ಗೋವಾ ಸರಕಾರದ ಮಳೆ ನೀರು ಕೊಯ್ಲು ಬದ್ಧತೆಗೆ ಪರಿಣತರ ಮೆಚ್ಚುಗೆ
Team Udayavani, Jun 17, 2019, 10:39 AM IST
ಪಣಜಿ : ಗೋವಾ ಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಸರಕಾರದ ಮಳೆ ನೀರು ಕೊಯ್ಲು ಬದ್ಧತೆಯನ್ನು ಪರಿಣತರು ಪ್ರಶಂಸಿಸಿದ್ದಾರೆ.
ರಾಜ್ಯದಲ್ಲಿನ ನೆಲ ಮಟ್ಟದ ನೀರಿನ ಒರತೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಸಾವಂತ್ ಸರಕಾರ ಸಮಗ್ರ ಯೋಜನೆಯನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಪರಿಣತರು ಹೇಳಿದ್ದಾರೆ.
ಕಳೆದ ಶನಿವಾರ ದಿಲ್ಲಿಯಲ್ಲಿ ನಡೆದಿದ್ದ ನೀತಿ ಆಯೋಗದ ಸಭೆಯಲ್ಲಿ ಗೋವಾ ಸಿಎಂ ಸಾವಂತ್, ತನ್ನ ಸರಕಾರ ರಾಜ್ಯದಲ್ಲಿ ಮಳೆ ಕೊಯ್ಲು ಕೈಗೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಮತ್ತು ಆ ಮೂಲಕ ನೀರಿನ ಕೊರತೆಯನ್ನು ನಿವಾರಿಸಲು ಕಟಿ ಬದ್ಧವಾಗಿದೆ ಎಂದು ಹೇಳಿದರು.
ಎಲ್ಲ ಕೈಗಾರಿಕೆಳಿಗೆ ಮಳೆ ನೀರು ಕೊಯ್ಲನ್ನು ಕಡ್ಡಾಯಗೊಳಿಸಬೇಕು ಮತ್ತು ಆ ಮೂಲಕ ಅವು ಸರಕಾರವನ್ನು ಅವಲಂಬಿಸದೆ ಮಳೆ ಕೊಯ್ಲು ನೀರನ್ನು ತಮ್ಮ ಬಳಕೆಗೆ ಬಳಸಬೇಕು ಎಂದು ಪರಿಸರವಾದಿ ರಾಜೇಂದ್ರ ಕೇರ್ಕರ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.