Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Team Udayavani, Nov 28, 2024, 3:48 PM IST
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರಶಾಂತ್ ವಿಹಾರ್ ಪ್ರದೇಶದ ಪಿವಿಆರ್ ಸಿನಿಮಾ ಹಾಲ್ ಬಳಿ ಗುರುವಾರ(ನ.28) ಬೆಳಗ್ಗೆ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದೆ.
ಪಿವಿಆರ್ ಬಳಿಯ ಬನ್ಸಿ ಸ್ವೀಟ್ಸ್ ಮುಂಭಾಗದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಬೆಳಗ್ಗೆ 11.48ರ ಸುಮಾರಿಗೆ ಪಿಸಿಆರ್ ಕರೆಗೆ ಈ ಮಾಹಿತಿ ಬಂದಿದೆ ಎನ್ನಲಾಗಿದೆ. ಸ್ಫೋಟದ ಬಗ್ಗೆ ಮಾಹಿತಿ ಬಂದ ತಕ್ಷಣ, ಪೊಲೀಸರು ಮತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು. ಇದಲ್ಲದೆ, ದೆಹಲಿ ಪೊಲೀಸರ ವಿಶೇಷ ತಂಡವೂ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದು ಘಟನೆಯಿಂದ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಒಂದು ತಿಂಗಳ ಹಿಂದೆ ಪ್ರಶಾಂತ್ ವಿಹಾರ್‌ನ ಸಿಆರ್‌ಪಿಎಫ್ ಶಾಲೆಯ ಬಳಿ ಸ್ಫೋಟ ಸಂಭವಿಸಿತ್ತು ಈ ವೇಳೆ ಶಾಲೆಯ ಗೋಡೆ, ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಹಾನಿಯಾಗಿತ್ತು, ಇದರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ಅಂಗಡಿಗಳಿಗೂ ಹಾನಿಯಾಗಿತ್ತು. ಇದಾದ ಒಂದು ತಿಂಗಳಲ್ಲಿ ಮತ್ತೆ ಸ್ಫೋಟ ಸಂಭವಿಸಿದ್ದು ಇದರೊಂದಿಗೆ ಒಂದು ತಿಂಗಳ ಅಂತರದಲ್ಲಿ ನಡೆದ ಎರಡನೇ ಘಟನೆಯಾಗಿದೆ.
VIDEO | Explosion reported in Prashant Vihar area of #Delhi. Fire tenders reach the spot. More details awaited.
(Full video available on PTI Videos – https://t.co/n147TvrpG7) pic.twitter.com/Rchohvl1vY
— Press Trust of India (@PTI_News) November 28, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Jammu and Kashmir; ಮತ್ತೊಂದು ಸೇನಾ ಟ್ರಕ್ ದುರಂತ: 4 ಯೋಧರು ಹುತಾತ್ಮ
Twist; ಛತ್ತೀಸ್ ಗಢ ಪತ್ರಕರ್ತನ ಹ*ತ್ಯೆ: ಸೋದರ ಸಂಬಂಧಿಯೇ ಪ್ರಮುಖ ಆರೋಪಿ!
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.