ಫಾಸ್ಟ್‌ಟ್ಯಾಗ್ ಅಳವಡಿಕೆ ಗಡುವು ಡಿ.15ಕ್ಕೆ ವಿಸ್ತರಣೆ
Team Udayavani, Nov 29, 2019, 9:44 PM IST
ಹೊಸದಿಲ್ಲಿ: ದೇಶದಲ್ಲಿ ಜಾರಿಯಾಗಲಿರುವ ಆನ್ ಲೈನ್ ಟೋಲ್ ಪಾವತಿ ವ್ಯವಸ್ಥೆ ಫಾಸ್ಟ್‌ಟ್ಯಾಗ್ ಯೋಜನೆಯನ್ನು ಡಿಸೆಂಬರ್ 15ಕ್ಕೆ ಕೇಂದ್ರ ಸರಕಾರ ಮುಂದೂಡಿದೆ. ಈ ಹಿಂದೆ ಡಿಸೆಂಬರ್ 1ರಂದು ಕಡ್ಡಾಯ ಎಂದು ತೀರ್ಮಾನಿಸಲಾಗಿತ್ತು.
ಆದರೆ ಬೇಡಿಕೆಯಷ್ಟು ಫಾಸ್ಟ್‌ಟ್ಯಾಗ್ ಗಳು ವಿತರಣೆಯಾಗದೇ ಇದ್ದ ಕಾರಣ ಮತ್ತಷ್ಟು ಸಮಯವನ್ನು ನೀಡಲಾಗಿದೆ. ಕೆಲವು ಟೋಲ್ ಗಳಲ್ಲಿ ಸಾಕಷ್ಟು ಫಾಸ್ಟ್‌ಟ್ಯಾಗ್ ಗಳು ಇರದೇ ಇದ್ದ ಕಾರಣ ಜನರಿಗೆ ಕೊಂಡುಕೊಳ್ಳಲಾಗುತ್ತಿಲ್ಲ. ಈ ಕಾರಣವನ್ನು ಮನಗಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ನಿರ್ಧಾರವನ್ನು ಮುಂದೂಡಿದೆ.
ಈಗಾಗಲೇ ಒಟ್ಟು 70 ಲಕ್ಷ ಫಾಸ್ಟ್‌ಟ್ಯಾಗ್ ಗಳನ್ನು ವಿತರಿಸಲಾಗಿದೆ. ನವೆಂಬರ್ 26ರಂದು ದಾಖಲೆಯ 1,35,583 ಫಾಸ್ಟ್‌ಟ್ಯಾಗ್ ಗಳು ವಿತರಣೆಯಾಗಿದ್ದವು. 28ರಂದು 1.03 ಲಕ್ಷ ಫಾಸ್ಟ್‌ಟ್ಯಾಗ್ ಗಳು ವಿತರಣೆಯಾಗಿದ್ದವು.
ಸಾರ್ವಜನಿಕರು ಈ ಕುರಿತಂತೆ ಯಾವುದೇ ಗೊಂದಲಗಳು ಇದ್ದರೆ ಉಚಿತ ದೂರವಾಣಿ ಸಂಖ್ಯೆ 1033ಕ್ಕೆ ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.