ಚೀನೀಯರಿಗೆ ಎರಡೇ ದಿನ, ಭಾರತೀಯರಿಗೆ 2 ತಿಂಗಳೇಕೆ?: ವಿದೇಶಾಂಗ ಸಚಿವ ಎಸ್.ಜೈಶಂಕರ್
Team Udayavani, Sep 29, 2022, 9:00 PM IST
ನವದೆಹಲಿ: ಅಮೆರಿಕದ ವೀಸಾ ಬಯಸುವ ಭಾರತೀಯರು ಕೇವಲ ಒಂದು ಅಪಾಯಿಂಟ್ಮೆಂಟ್ ಪಡೆಯಲು 2 ವರ್ಷಕ್ಕೂ ಅಧಿಕ ಸಮಯ ಕಾಯಬೇಕು. ಅದೇ ಚೀನೀಯರಿಗೆ ಎರಡೇ ಎರಡು ದಿನಗಳಲ್ಲಿ ಅಪಾಯಿಂಟ್ಮೆಂಟ್ ಸಿಗುತ್ತದೆ! ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಮೆರಿಕದ ಗೃಹ ಸಚಿವ ಆ್ಯಂಟೋನಿ ಬ್ಲಿಂಕೆನ್ ಜೊತೆಗೆ ಈ ವಿಷಯವನ್ನು ಚರ್ಚಿಸಿದ್ದಾರೆ.
ಕೊರೊನಾ ಕಾರಣಕ್ಕೆ ವೀಸಾ ಪರಿಷ್ಕರಣೆ ಮಾಡುವ ಸಿಬ್ಬಂದಿಯಲ್ಲಿ ತೀವ್ರ ಕಡಿತವಾಗಿದೆ. ಹಾಗಾಗಿ ಇಂತಹ ಸ್ಥಿತಿ ಬಂದಿದೆ. ಆದರೆ ಸ್ಥಳೀಯವಾಗಿ ಕೊರೊನಾ, ಇನ್ನಿತರ ಸಂಗತಿಗಳನ್ನು ನೋಡಿಯೇ ಎಷ್ಟು ವೀಸಾಗಳನ್ನು ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ ಎಂದೂ ಸ್ಪಷ್ಟಪಡಿಸಲಾಗಿದೆ.
ಪ್ರಸ್ತುತ ದೆಹಲಿ ಮತ್ತು ಮುಂಬೈನಿಂದ ವೀಸಾಕ್ಕೆ ಅರ್ಜಿ ಸಲ್ಲಿಸಿದರೆ 833 ದಿನಗಳ ಕಾಲ ಕಾಯಬೇಕಾಗುತ್ತದೆ. ಚೀನಾ ರಾಜಧಾನಿ ಬೀಜಿಂಗ್ನಿಂದಾದರೆ ಬರೀ 2 ದಿನ ಸಾಕು. ಪಾಕಿಸ್ತಾನದಿಂದ ಅರ್ಜಿ ಸಲ್ಲಿಸಿದರೆ 450 ದಿನ ಕಾಯಬೇಕಾಗುತ್ತದೆ. ವಿಚಿತ್ರವೆಂದರೆ ವಿದ್ಯಾರ್ಥಿ ವೀಸಾದ ವಿಚಾರದಲ್ಲೂ ಭಾರತೀಯರು ವರ್ಷಕ್ಕೂ ಅಧಿಕ ಸಮಯ ಕಾಯಬೇಕು. ಅದೇ ಇಸ್ಲಾಮಾಬಾದ್ಗಾದರೆ ಒಂದು ದಿನ, ಬೀಜಿಂಗ್ಗಾದರೆ 2 ದಿನ ಸಾಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.